Vastu Tips: ಆರ್ಥಿಕ ವೃದ್ಧಿ ಆಗ್ಬೇಕು ಅಂದ್ರೆ ವಾರದ ಈ ಎರಡು ದಿನ ಸಾಲ ನೀಡೋದು ಮಾತ್ರವಲ್ಲ ತರಕಾರಿಗೂ ಹಣ ಖರ್ಚು ಮಾಡ್ಬೇಡಿ

Published : Sep 29, 2026, 11:13 AM IST

ಹಣ ಪ್ರತಿಯೊಬ್ಬರ ಜೀವನದಲ್ಲೂ ಬಹಳ ಮುಖ್ಯ. ಎಷ್ಟೇ ಕಷ್ಟಪಟ್ರೂ ಅನೇಕ ಬಾರಿ ಕೈನಲ್ಲಿ ಹಣ ನಿಲ್ಲೋದಿಲ್ಲ. ಅದಕ್ಕೆ ನಾವು ಮಾಡುವ ಸಣ್ಣಪುಟ್ಟ ತಪ್ಪುಗಳೇ ಕಾರಣ. ವಾರದ ಎಲ್ಲ ದಿನ ತನ್ನದೇ ಮಹತ್ವ ಹೊಂದಿದೆ. ನಿಮ್ಮ ಕೈನಲ್ಲಿ ಹಣ ನಿಲ್ಲಬೇಕು ಅಂದ್ರೆ ವಾರದ ಕೆಲ ದಿನ ನೀವು ಅಪ್ಪಿತಪ್ಪಿಯೂ ಹಣ ಖರ್ಚು ಮಾಡಬಾರದು.

PREV
15
ಈ ದಿನ ಹಣ ಖರ್ಚು ಮಾಡ್ಬೇಡಿ

ಶಾಸ್ತ್ರಗಳ ಪ್ರಕಾರ ಸಾಲ ನೀಡೋದು ಮಾತ್ರವಲ್ಲ ಸ್ವಂತಕ್ಕೆ ಕೂಡ ವಾರದ ಕೆಲ ದಿನ ಖರ್ಚು ಮಾಡ್ಬಾರದು. ಅದ್ರಲ್ಲಿ ಮಂಗಳವಾರ ಮತ್ತು ಶುಕ್ರವಾರ ಸೇರಿದೆ. ನೀವು ಮಂಗಳವಾರ ಹಾಗೂ ಶುಕ್ರವಾರ ಯಾವುದೇ ರೀತಿಯ ಹಣ ಖರ್ಚು ಮಾಡ್ಬೇಡಿ. ಸಣ್ಣಪುಟ್ಟ ಆಹಾರ, ತರಕಾರಿ ಖರೀದಿ ಕೂಡ ಈ ದಿನ ಮಾಡಬೇಡಿ. ಒಂದು ಪೈಸೆ ಕೂಡ ನಿಮ್ಮಿಂದ ಹೊರಗೆ ಹೋಗದಂತೆ ನೋಡಿಕೊಳ್ಳಿ. ಒಂದು ವೇಳೆ ಹಣ ಖರ್ಚು ಮಾಡುವ ಅತ್ಯಗತ್ಯವಿದ್ರೆ ಆನ್ಲೈನ್‌ ಬದಲು ನಗದು ವ್ಯವಹಾರ ನಡೆಸಿ ಎಂದು ಶಾಸ್ತ್ರ ಹೇಳುತ್ತದೆ.

25
ಮಂಗಳವಾರ ಹಣ ನೀಡಬೇಡಿ

ಮಂಗಳವಾರವನ್ನು ಮಂಗಳ ಗ್ರಹಕ್ಕೆ ಸಂಬಂಧಿಸಿದ ದಿನ ಎಂದು ಪರಿಗಣಿಸಲಾಗುತ್ತದೆ. ಮಂಗಳ ಗ್ರಹವು ಉಗ್ರತೆ, ಶಕ್ತಿ ಮತ್ತು ಸಂಘರ್ಷದ ಸಂಕೇತ ಎಂದು ನಂಬಲಾಗಿದೆ. ಹಾಗಾಗಿ ಈ ದಿನ ಯಾರಿಗಾದರೂ ಹಣವನ್ನು ಸಾಲವಾಗಿ ನೀಡಿದರೆ, ಆ ಹಣವನ್ನು ಮರಳಿ ಪಡೆಯಲು ಕಷ್ಟವಾಗಬಹುದು ಎಂಬ ನಂಬಿಕೆ ಇದೆ. ಹೀಗಾಗಿ ಮಂಗಳವಾರ ಯಾರಿಗಾದರೂ ಹಣ ನೀಡುವುದನ್ನು ಸಾಧ್ಯವಾದಷ್ಟು ತಪ್ಪಿಸಿ.

35
ಶುಕ್ರವಾರವೂ ಹಣದ ವ್ಯವಹಾರದಲ್ಲಿ ಎಚ್ಚರಿಕೆ

ಶುಕ್ರವಾರವನ್ನು ಸಂಪತ್ತಿನ ಅಧಿದೇವತೆ ಎಂದು ನಂಬಲಾಗುವ ತಾಯಿ ಲಕ್ಷ್ಮಿಗೆ ಸಮರ್ಪಿಸಲಾಗಿದೆ. ಈ ದಿನ ದೊಡ್ಡ ಮೊತ್ತದ ಹಣವನ್ನು ಸಾಲವಾಗಿ ನೀಡುವುದು ಅಥವಾ ಅನಗತ್ಯ ಹಣದ ವ್ಯವಹಾರ ಮಾಡುವುದು ಮನೆಯ ಆರ್ಥಿಕ ಸ್ಥಿರತೆಯ ಮೇಲೆ ಪರಿಣಾಮ ಬೀರಬಹುದು ಎಂಬ ಕೆಲವು ನಂಬಿಕೆಗಳಿವೆ. ಆದ್ದರಿಂದ ಶುಕ್ರವಾರವೂ ಯಾರಿಗಾದರೂ ಹಣ ಸಾಲವಾಗಿ ನೀಡುವುದನ್ನು ಸಾಧ್ಯವಾದಷ್ಟು ತಪ್ಪಿಸಿ. ನಿಮ್ಮ ಅಗತ್ಯವಲ್ಲದ ವಸ್ತುಗಳನ್ನು ಖರೀದಿಸುವುದನ್ನೂ ಮುಂದೂಡಬೇಕು. ನೀವು ಶುಕ್ರವಾರ ಯಾವುದೇ ಬಿಲ್‌ ಪಾವತಿ ಕೆಲಸ ಮಾಡಬೇಡಿ. ಇದರಿಂದ ನಿಮ್ಮ ಹಣದ ಖರ್ಚು ಹೆಚ್ಚಾಗುತ್ತದೆ. ಲಕ್ಷ್ಮಿ ಮನೆಯಿಂದ ಹೊರಗೆ ಹೋಗ್ತಾಳೆ.

45
ಹಣದ ವ್ಯವಹಾರಕ್ಕೆ ಯಾವ ದಿನ ಬೆಸ್ಟ್?

ವಾಸ್ತು ಶಾಸ್ತ್ರದ ಪ್ರಕಾರ ಸೋಮವಾರ, ಗುರುವಾರವನ್ನು ಹಣಕ್ಕೆ ಸಂಬಂಧಿಸಿದ ಕೆಲಸಗಳಿಗೆ ಶುಭ ದಿನಗಳೆಂದು ಪರಿಗಣಿಸಲಾಗುತ್ತದೆ. ಸೋಮವಾರ ಶಿವ ಮತ್ತು ಪಾರ್ವತಿ ದೇವಿಯ ದಿನ ಎಂದು ಪರಿಗಣಿಸಲಾಗುತ್ತದೆ. ಈ ದಿನ ಹಣದ ಒಳಹರಿವಿಗೆ ಅನುಕೂಲಕರ ಎಂದು ಕೆಲವು ನಂಬಿಕೆಗಳಿವೆ. ಗುರುವಾರವೂ ಹಣಕಾಸಿನ ಕೆಲಸಗಳಿಗೆ ಶುಭ ದಿನ ಎಂದು ಪರಿಗಣಿಸಲಾಗುತ್ತದೆ.

55
ಅಮಾವಾಸ್ಯೆಯಂದು ಎಚ್ಚರಿಕೆ

ವಾರದ ದಿನಗಳ ಜೊತೆಗೆ ಕೆಲವು ತಿಥಿಗಳಲ್ಲಿಯೂ ಹಣದ ವ್ಯವಹಾರ ಮಾಡಬಾರದು ಎಂಬ ನಂಬಿಕೆ ಇದೆ. ಅದರಲ್ಲಿ ಅಮಾವಾಸ್ಯೆಯೂ ಒಂದು. ಈ ದಿನ ಹಣಕ್ಕೆ ಸಂಬಂಧಿಸಿದ ದೊಡ್ಡ ನಿರ್ಧಾರಗಳು ಅಥವಾ ವ್ಯವಹಾರಗಳನ್ನು ಮುಂದೂಡಬಹುದು.

Read more Photos on
click me!

Recommended Stories