Lok Sabha Election 2029: ಮುಂದಿನ ಚುನಾವಣೆಯಲ್ಲಿ ದೇಶದ ರಾಜಕೀಯದಲ್ಲಿ ಯಾರೂ ಊಹಿಸದ ಕುತೂಹಲ? ಏನಿದು Prediction?

Published : Sep 22, 2025, 12:14 PM IST

ನರೇಂದ್ರ ಮೋದಿಯವರು ಇಂದಿರಾ ಗಾಂಧಿಯವರನ್ನು ಮೀರಿಸಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಎರಡನೇ ಪ್ರಧಾನಿಯಾಗಿದ್ದಾರೆ. 2029ರ ಚುನಾವಣೆಯಲ್ಲೂ ಗೆದ್ದು, ನೆಹರೂ ದಾಖಲೆ ಮುರಿದು, ನಂತರ ಯೋಗಿ ಆದಿತ್ಯನಾಥರಿಗೆ ಪ್ರಧಾನಿ ಪಟ್ಟ ಬಿಟ್ಟುಕೊಡಲಿದ್ದಾರೆ ಎಂದು ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.

PREV
16
ದೇಶದ ಇತಿಹಾಸದಲ್ಲಿ ಮೈಲಿಗಲ್ಲು

ನರೇಂದ್ರ ಮೋದಿ (Narendra Modi) ಅವರು ಇದಾಗಲೇ ಮೂರನೆಯ ಅವಧಿಗೆ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದಾರೆ. ಕಳೆದ ಜುಲೈ 25ರಂದು ದೇಶದ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ದಾಟಿದ್ದಾರೆ. ಸತತವಾಗಿ ಭಾರತದ ಎರಡನೇ ಅತಿ ಹೆಚ್ಚು ಅವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ (Indira Gandhi) ದಾಖಲೆಯನ್ನು ಮೀರಿಸಿದ್ದಾರೆ. ಗಮನಾರ್ಹವಾಗಿ, ಈ ಸಾಧನೆಯಿಂದ ಗುರುತಿಸಿಕೊಂಡ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಕೂಡ ನರೇಂದ್ರ ಮೋದಿಯವರಾಗಿದ್ದಾರೆ.

26
ಇಂದಿರಾಗಾಂಧಿ ದಾಖಲೆ ಮುರಿದಿರೋ ನರೇಂದ್ರ ಮೋದಿ

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ಜನಿಸಿದ ಮೊದಲ ಪ್ರಧಾನಿ ನರೇಂದ್ರ ಮೋದಿ ಮತ್ತು ಹಿಂದಿಯೇತರ ರಾಜ್ಯದಿಂದ ಬಂದವರಾಗಿ ಪ್ರಧಾನಿಯಾಗಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದವರೆಂಬ ಕೀರ್ತಿ ಕೂಡ ಸೇರಿಕೊಂಡಿದೆ. 75 ವರ್ಷದ ನರೇಂದ್ರ ಮೋದಿ ಅವರು ಮೇ 26, 2014 ರಂದು ಮೊದಲ ಬಾರಿಗೆ ಭಾರತ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇಂದಿರಾ ಗಾಂಧಿ ಅವರು ಸತತವಾಗಿ 11 ವರ್ಷ 59 ದಿನಗಳು ಅಧಿಕಾರದಲ್ಲಿದ್ದರು. ಆದರೆ ಮೋದಿ ಅವರು ಜುಲೈ 25ರವರೆಗೆ ಒಟ್ಟು 11 ವರ್ಷ 60 ದಿನಗಳು ಅಧಿಕಾರದಲ್ಲಿ ಸೇವೆ ಸಲ್ಲಿಸಿದ್ದಾರೆ.

36
ನೆಹರು ದಾಖಲೆ ಮುರಿಯಲಿರುವ ಮೋದಿ

ಈವರೆಗಿನ ಅತಿ ಹೆಚ್ಚು ಕಾಲ ಪ್ರಧಾನಿಯಾಗಿರುವ ದಾಖಲೆ ಹೊಂದಿರುವುದು ಜವಾಹಲ್​ ಲಾಲ್​ ನೆಹರೂ (Jawaharlal Nehru) ದೇಶದ ಮೊದಲ ಪ್ರಧಾನಿ ಪಂಡಿತ್​ ಜವಾಹರಲಾಲ್ ನೆಹರು ಅವರು ಆಗಸ್ಟ್ 15, 1947 ರಿಂದ ಮೇ 27, 1964 ರವರೆಗೆ ಸತತ 16 ವರ್ಷ ಮತ್ತು 286 ದಿನಗಳ ಕಾಲ ಭಾರತದ ಅತಿ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ದಾಖಲೆಯನ್ನು ಹೊಂದಿದ್ದಾರೆ.

ಇದನ್ನೂ ಓದಿ: We want Modi... ನೇಪಾಳದಲ್ಲಿ ಯುವಕರ ಘೋಷಣೆ- ಓಲಿ ಬೇಡ ನಮಗೂ ಮೋದಿ ಬೇಕೆಂದ ವಿಡಿಯೋ ವೈರಲ್​

46
2029ರ ಚುನಾವಣಾ ಭವಿಷ್ಯ

ಇದೀಗ ಮುಂದಿನ ಲೋಕಸಭಾ ಚುನಾವಣೆ 2029ರಲ್ಲಿ ನಡೆಯಲಿದೆ. ಈ ಚುನಾವಣೆಯ ಹಾಗೂ ಅದರ ಬಳಿಕದ ಅತಿದೊಡ್ಡ ಭವಿಷ್ಯವಾಣಿ ಇದೀಗ ಹೊರಕ್ಕೆ ಬಂದಿದೆ. ಅದೇನೆಂದರೆ, 2029ರ ಚುನಾವಣೆಯಲ್ಲಿಯೂ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಿ ಆಯ್ಕೆಯಾಗಲಿದ್ದಾರೆ. ಈ ಬಾರಿ ಸತತ ನಾಲ್ಕನೆಯ ಬಾರಿ ಪ್ರಧಾನಿ ಹುದ್ದೆ ಸ್ವೀಕರಿಸುವ ಮೂಲಕ ಜವಾಹರಲಾಲ್ ನೆಹರು ಅವರ ದಾಖಲೆಯನ್ನೂ ಮುರಿಯಲಿದ್ದಾರೆ ಎನ್ನಲಾಗಿದೆ. ಕೋಚ್ ಸ್ಮೃತಿ ಅವರ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಖ್ಯಾತ ಜ್ಯೋತಿಷಿ ಈ ಭವಿಷ್ಯ ನುಡಿದಿದ್ದಾರೆ.

56
ಪ್ರಧಾನಿ ಸ್ಥಾನ ಬಿಟ್ಟುಕೊಡಲಿರುವ ಮೋದಿ

ಅದಾದ ಬಳಿಕ ನರೇಂದ್ರ ಮೋದಿ ಅವರು ಆ ಸ್ಥಾನವನ್ನು ಬಿಟ್ಟುಕೊಡಲಿದ್ದಾರೆ. (ಇದಾಗಲೇ ಇನ್ನೋರ್ವ ಜ್ಯೋತಿಷಿ ಕೂಡ ಮೋದಿ ರಾಜಕೀಯ ಸನ್ಯಾಸತ್ವ ಸ್ವೀಕರಿಸಲಿದ್ದಾರೆ ಎಂದಿದ್ದರು)

66
ಮೋದಿ ಸ್ಥಾನಕ್ಕೆ ಯೋಗಿ

ಆ ಬಳಿಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ. 2050ರ ವರೆಗೆ ಅವರೇ ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು 2047ರ ವೇಳೆ ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರ (Vikasit Bhaarat) ಮಾಡುವ ಪಣ ತೊಟ್ಟಿದ್ದಾರೆ. ಇದೀಗ ಈ ಭವಿಷ್ಯವಾಣಿ ನೋಡಿದರೆ, ಅಭಿವೃದ್ಧಿ ಶೀಲ ದೇಶದ ಮೊದಲ ಪ್ರಧಾನಿ ಯೋಗಿ ಆದಿತ್ಯನಾಥ ಆಗಲಿದ್ದಾರೆ ಎಂದು ತಿಳಿಯುತ್ತದೆ.

Read more Photos on
click me!

Recommended Stories