ಮಕ್ಕಳು ಮಲಗಿದ ನಂತ್ರ ಅದೇ ರೂಂನಲ್ಲಿ ಪೋಷಕರು ರೋಮ್ಯಾನ್ಸ್ ಮಾಡ್ತೀರಾ?, ಹಾಗಿದ್ರೆ ಈ ವಿಷ್ಯ ಗೊತ್ತಿರ್ಲಿ

Published : Dec 16, 2025, 05:50 PM IST

Intimacy in front of kids: ಅನೇಕರು ಮಗು ಅಥವಾ ಮಕ್ಕಳು ನಿದ್ರೆ ಮಾಡುವಾಗ ಒಂದೇ ಕೋಣೆಯಲ್ಲಿ ಅನ್ಯೋನ್ಯವಾಗಿರಲು ಬಯಸುತ್ತಾರೆ. ಆದರೆ ಹಾಗೆ ಮಕ್ಕಳು ಮಲಗಿದ ನಂತರ ಅನ್ಯೋನ್ಯವಾಗಿರುವುದು ಸ್ವೀಕಾರಾರ್ಹವೇ ಎಂದು ಅನೇಕರು ಪ್ರಶ್ನಿಸುತ್ತಾರೆ. 

PREV
16
ಜೀವನದಲ್ಲಿ ಬದಲಾವಣೆ

ಇತ್ತೀಚಿನ ದಿನಗಳಲ್ಲಿ ನವದಂಪತಿಗಳು ಮದುವೆಯ ನಂತರ ಮಗು ಮಾಡಿಕೊಳ್ಳಲು ಆತುರಪಡುವುದಿಲ್ಲ. ಪ್ರತಿಯೊಬ್ಬರೂ ಮೊದಲ 2-3 ವರ್ಷಗಳ ಕಾಲ ಲೈಫ್‌ ಎಂಜಾಯ್ ಮಾಡ್ತಾರೆ. ಆ ನಂತರವೇ ಮಗು ಮಾಡಿಕೊಳ್ಳಲು ಯೋಜಿಸುತ್ತಾರೆ. ಆದರೆ ಮಗುವನ್ನ ಬೆಳೆಸುವುದು ಸುಲಭದ ಕೆಲಸವಲ್ಲ. ಇದು ತುಂಬಾ ಸವಾಲಿನ ಕೆಲಸವೇ. ಮಗು ಬಂದ ನಂತರ ಜೀವನದಲ್ಲಿ ಅನೇಕ ಬದಲಾವಣೆಗಳಾಗುತ್ತವೆ.

26
ಅನ್ಯೋನ್ಯತೆಗೆ ಬಹಳ ಕಡಿಮೆ ಅವಕಾಶ

ಮಗು ಬೆಳೆದಂತೆ ಆಹಾರ, ಸರಿಯಾದ ಪಾಲನೆ, ಶಿಕ್ಷಣ.. ಹೀಗೆ ಅನೇಕ ಜವಾಬ್ದಾರಿಗಳನ್ನು ಹೆಚ್ಚಿಸುತ್ತದೆ. ದಿನದ ಹೆಚ್ಚಿನ ಸಮಯ ಮಗು ಯಾವಾಗಲೂ ಪೋಷಕರೊಂದಿಗೆ ಇರುವುದರಿಂದ ದಂಪತಿ ಪರಸ್ಪರ ಸಮಯ ಕೊಡಲು ಕಷ್ಟಪಡುತ್ತಾರೆ. ಇದರಿಂದ ಇಬ್ಬರ ನಡುವೆ ಅನ್ಯೋನ್ಯತೆಗೆ ಬಹಳ ಕಡಿಮೆ ಅವಕಾಶ ಸಿಗುತ್ತದೆ.

36
ಸ್ತ್ರೀರೋಗ ತಜ್ಞರು ಹೇಳುವುದೇನು?

ಅನೇಕರು ಮಗು ಅಥವಾ ಮಕ್ಕಳು ನಿದ್ರೆ ಮಾಡುವಾಗ ಒಂದೇ ಕೋಣೆಯಲ್ಲಿ ಅನ್ಯೋನ್ಯವಾಗಿರಲು ಬಯಸುತ್ತಾರೆ. ಆದರೆ ಹಾಗೆ ಮಕ್ಕಳು ಮಲಗಿದ ನಂತರ ಅನ್ಯೋನ್ಯವಾಗಿರುವುದು ಸ್ವೀಕಾರಾರ್ಹವೇ ಎಂದು ಅನೇಕರು ಪ್ರಶ್ನಿಸುತ್ತಾರೆ. ಆದ್ದರಿಂದ ಇದು ಮಗುವಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಸ್ತ್ರೀರೋಗ ತಜ್ಞರು ಇಲ್ಲಿ ವಿವರಿಸಿದ್ದಾರೆ ನೋಡಿ..

46
ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ

ಸ್ತ್ರೀರೋಗ ತಜ್ಞೆ ಡಾ. ಅಜೀಮುದ್ದೀನ್ ಶಾ ಅವರ ಪ್ರಕಾರ, ದಂಪತಿ ಮಕ್ಕಳು ಮಲಗಿದ ನಂತರ ಒಂದೇ ಕೋಣೆಯಲ್ಲಿ ಅನ್ಯೋನ್ಯತೆಯಿಂದ ಇರುವುದನ್ನು ತಪ್ಪಿಸಬೇಕು. ಇದು ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಗಂಡ-ಹೆಂಡತಿಯ ಸಂಬಂಧದಲ್ಲಿ ಭಾವನಾತ್ಮಕ ಮತ್ತು ದೈಹಿಕ ಸಂಪರ್ಕ ಅತ್ಯಗತ್ಯ. ಹಾಗೆಂದು ದಂಪತಿ ಮಕ್ಕಳು ಮಲಗಿದ ನಂತರ ಅದೇ ಕೋಣೆಯಲ್ಲಿ ಅನ್ಯೋನ್ಯತೆಯಿಂದ ಇರಬಾರದು ಎಂದು ತಜ್ಞರು ವಿವರಿಸಿದ್ದಾರೆ.

56
ಶಬ್ದ, ಪರಿಸರ ಗುರುತಿಸಲು ಪ್ರಾರಂಭ

ಮಕ್ಕಳು ಮಲಗಿದ ನಂತರ ದಂಪತಿಗಳು ಒಂದೇ ಕೋಣೆಯಲ್ಲಿ ಅನ್ಯೋನ್ಯವಾಗಿದ್ದರೆ, ಅದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳು ಬೆಳೆದಂತೆ ಅವರು ತಮ್ಮ ಸುತ್ತಲಿನ ಎಲ್ಲಾ ಚಟುವಟಿಕೆಗಳ ಬಗ್ಗೆ ಹೆಚ್ಚು ಜಾಗೃತರಾಗುತ್ತಾರೆ. ಇದಲ್ಲದೆ, ಅವರು ಶಬ್ದಗಳು ಮತ್ತು ಪರಿಸರವನ್ನು ಗುರುತಿಸಲು ಪ್ರಾರಂಭಿಸುತ್ತಾರೆ. ಅವರೊಂದಿಗೆ ಒಂದೇ ಕೋಣೆಯಲ್ಲಿ ಅನ್ಯೋನ್ಯವಾಗಿರುವುದು ಅವರ ಮಾನಸಿಕ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

66
ಮಕ್ಕಳ ವಯಸ್ಸು

ನವಜಾತ ಶಿಶುಗಳು ಅಥವಾ ಚಿಕ್ಕ ಮಕ್ಕಳಿಗೆ ಇದು ಕಡಿಮೆ ಸಮಸ್ಯಾತ್ಮಕವಾಗಿರಬಹುದು. ಏಕೆಂದರೆ ಅವರು ಆಳವಾಗಿ ನಿದ್ರಿಸುತ್ತಾರೆ ಮತ್ತು ತಮ್ಮ ಸುತ್ತಮುತ್ತಲಿನ ಬಗ್ಗೆ ತಿಳಿದಿರುವುದಿಲ್ಲ. ಎಚ್ಚರಗೊಳ್ಳುವ, ಶಬ್ದಗಳನ್ನು ಕೇಳುವ ಅಥವಾ ವಿಷಯಗಳನ್ನು ಗ್ರಹಿಸುವ ಹಿರಿಯ ಮಕ್ಕಳು ಹೆಚ್ಚು ಸಂವೇದನಾಶೀಲರಾಗಿರುತ್ತಾರೆ.

Read more Photos on
click me!

Recommended Stories