ನಿಮ್ಮ ಡೇಟ್ ಆಫ್ ಬರ್ತ್ ಒಮ್ಮೆ ಚೆಕ್ ಮಾಡಿಕೊಳ್ಳಿ. ಈ ದಿನಾಂಕದಲ್ಲಿ ಪ್ರತಿ ಸಂಖ್ಯೆಯೂ ಭವಿಷ್ಯ ಹೇಳುತ್ತೆ. ಈ ಪೈಕಿ ನಿಮ್ಮ ಜನ್ಮ ದಿನಾಂಕದಲ್ಲಿ ಈ ಸಂಖ್ಯೆ ಇದ್ದರೆ ನ್ಯೂಮರಾಲಜಿ ಪ್ರಕಾರ ಮದುವೆ ವಿಚಾರದಲ್ಲಿ ಭಾರಿ ಅದೃಷ್ಠವಂತರು, ಇಷ್ಟೇ ಅಲ್ಲ ಪತ್ನಿಯಿಂದ ಜೀವನದಲ್ಲಿ ಭಾರಿ ಯಶಸ್ಸು ಸಾಧಿಸುತ್ತಾರೆ.
ಸಂಖ್ಯಾಶಾಸ್ತ್ರದಲ್ಲಿ ಅಂಕಿ ಸಂಖ್ಯೆಗಳೇ ಮುಖ್ಯ. ಹುಟ್ಟಿದ ದಿನಾಂಕ ಅತ್ಯಂತ ಪ್ರಮುಖ. ನೀವು ಹುಟ್ಟಿದ ದಿನಾಂಕದಲ್ಲಿನ ಸಂಖ್ಯೆ ನಿಮ್ಮ ಅದೃಷ್ಟ, ಭವಿಷ್ಯ ಎಲ್ಲವನ್ನು ಹೇಳುತ್ತದೆ. ಈ ಪೈಕಿ ನಿಮ್ಮ ಡೇಟ್ ಆಫ್ ಬರ್ತ್‌ನಲ್ಲಿ ಈ ಸಂಖ್ಯೆ ಇದ್ದರೆ ಮದುವೆ ವಿಚಾರದಲ್ಲಿ ಭಾರಿ ಅದೃಷ್ಟವಂತರಾಗಿರುತ್ತಾರೆ, ಸಂಸ್ಕಾರಯುತ, ಪ್ರೀತಿಯ ಪತ್ನಿ ಒಲಿಯುುವುದು ಮಾತ್ರವಲ್ಲ, ಪತ್ನಿಯೇ ಜೀವನದಲ್ಲಿ ಭಾರಿ ಯಶಸ್ಸು ತಂದುಕೊಡುತ್ತಾರೆ ಅನ್ನೋದು ಸಂಖ್ಯಾಶಾಸ್ತ್ರ ಹೇಳುತ್ತದೆ.
25
ಡೇಟ್ ಆಫ್ ಬರ್ತ್ ಮೂಲಕ ಭವಿಷ್ಯ ಲೆಕ್ಕಹಾಕುವುದು ಹೇಗೆ?
ಮದುವೆ ನಂತರ ಜೀವನ ಬದಲಾಗುತ್ತದೆ. ಈ ಪೈಕಿ ಹಲವರ ಜೀವನದಲ್ಲಿ ಹಣ, ಉದ್ಯೋಗ, ಆರೋಗ್ಯ, ಸುಖ ಸಂತೋಷ ಸೇರಿದಂತೆ ಎಲ್ಲವೂ ವೃದ್ಧಿಯಾಗುತ್ತದೆ. ನಿಮ್ಮ ಹುಟ್ಟಿದ ದಿನಾಂಕಗಳ ಒಟ್ಟು ಮೊತ್ತವನ್ನು ಒಟ್ಟು ಮಾಡಿದಾಗ ಬರುವ ಮೂಲ ಸಂಖ್ಯೆ (Root Number / Radix) ಮೂಲಕ ಸಂಖ್ಯಾಶಾಸ್ತ್ರದಲ್ಲಿ ಭವಿಷ್ಯ ಹೇಳಲಾಗುತ್ತದೆ. ಉದಾಹರಣೆಗೆ ಯಾವುದೇ ತಿಂಗಳ 15 ರಂದು ಜನಿಸಿದ್ದರೆ, ಮೂಲ ಸಂಖ್ಯೆ 1+5= 6. ಇದೀಗ ನಿಮ್ಮ ಜನ್ಮ ದಿನಾಂಕ ಲೆಕ್ಕ ಹಾಕಿ ಮೂಲ ದಿನಾಂಕ ತಿಳಿದುಕೊಳ್ಳಿ. ಈಗ ನಿಮ್ಮ ಮೂಲ ಸಂಖ್ಯೆಯ ಹಿಂದಿನ ಸೀಕ್ರೆಟ್ ಇಲ್ಲಿದೆ.
35
ಮೂಲ ಸಂಖ್ಯೆ 2
ಪುರುಷರ ಜನ್ಮ ದಿನಾಂಕದ ಮೂಲ ಸಂಖ್ಯೆ 2 ಆಗಿದ್ದರೆ ಅಂದರೆ ಯಾವುದೇ ತಿಂಗಳ 2,11,29ರಂದು ಜನಿಸಿದವರು ಮದುವೆ ವಿಷಯದಲ್ಲಿ ಭಾರಿ ಅದೃಷ್ಟವಂತರು ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ. ಸಂಖ್ಯೆ2ರ ಅಧಿಪತಿ ಚಂದ್ರ. ಹೀಗಾಗಿ ಇವರಿಗೆ ಸಿಗುವ ಪತ್ನಿ ಪ್ರೀತಿಯುಳ್ಳವರಾಗುತ್ತಾರೆ. ಸಹನಶೀಲೆ ವ್ಯಕ್ತಿಯಾಗಿರುತ್ತಾರೆ. ಕುಟುಂಬವನ್ನು ಸಮರ್ಥವಾಗಿ ಮುನ್ನಡೆಸುವ ಸಾಮರ್ಥ್ಯ ಹೊಂದಿರುತ್ತಾರೆ. ಮದುವೆಯಾದ ಬಳಿಕ ಪತ್ನಿಯ ಗೃಹಬಲದಿಂದ ಎಲ್ಲಾ ಕ್ಷೇತ್ರದ್ಲಿ ವೃದ್ಧಿ ಕಾಣಲಿದೆ.
ಮೂಲ ಸಂಖ್ಯೆ 6 ಇದ್ದರೆ ಅಂದರೆ ಯಾವುದೇ ತಿಂಗಳ 6,15,24 ರಂದು ಜನಿಸಿದವರು ಮದುವೆ ಬಳಿಕ ಜೀವನ ಉತ್ತಮಗೊಳ್ಳುತ್ತದೆ. ಅಧಿಪತಿ ಶುಕ್ರ ಗ್ರಹ ಆಗಿರುವ ಕಾರಣ ಈ ಪುರುಷರಿಗೆ ಆಕರ್ಷಕ, ಬುದ್ಧಿವಂತ ಹಾಗೂ ಕಲಾತ್ಮಕ ಪತ್ನಿ ಸಿಗುತ್ತಾಳೆ. ಮದುವೆ ಬಳಿಕ ಪುರುಷರ ಆದಾಯ ಹೆಚ್ಚಾಗುತ್ತದೆ. ಪತ್ನಿ ಕೂಡ ಗಂಡನ ಆದಾಯಕ್ಕೆ ನೆರವಾಗುತ್ತಾಳೆ. ಮದುವೆ ಬಳಿಕ ಈ ಪುರುಷರು ಸ್ವಂತ ಮನೆ ಸೇರಿದಂತೆ ಇತರ ಎಲ್ಲಾ ಸುಖ ಸಂತೋಷಗಳಿಗೆ ಪಾತ್ರರಾಗುತ್ತಾರೆ.
55
ಮೂಲ ಸಂಖ್ಯೆ 9
ಪುರುಷರ ಮೂಲ ಸಂಖ್ಯೆ 9 ಆಗಿದ್ದರೆ ಅಂದರೆ ಯಾವುದೇ ತಿಂಗಳ 9,19, 27ರಂದು ಜನಿಸಿದವರಾಗಿದ್ದರೆ, ಕೈಹಿಡಿಯುವ ಪತ್ನಿ ಅದೃಷ್ಟವಂತೆಯಾಗಿರುತ್ತಾಳೆ. ಮಂಗಳ ಗ್ರಹದ ಅಧಿಪತ್ಯ ಹೊಂದಿದ ಪುರುಷರು ಸ್ವಲ್ಪ ಕೋಪ ಸ್ವಾಭವ ಅಥವಾ ಹಠವಾದಿಗಳಾಗಿರುತ್ತಾರೆ. ಕೈಹಿಡಿಯುವ ಪತ್ನಿ ಇವರನ್ನು ಶಾಂತಗೊಳಿಸುತ್ತಾಳೆ. ಮದುವೆ ಬಳಿಕ ನಿಧಾನವಾಗಿ ಕೋಪ ಕಡಿಮೆಯಾಗುತ್ತದೆ.