ಕೆಟ್ಟ ಲಗ್ನದಲ್ಲಿ ಡಿಕೆಶಿ ಪ್ರಮಾಣವಚನ? ಕಾಂಗ್ರೆಸ್​ ಛಿದ್ರ ಛಿದ್ರ- ಅಧಿಕಾರಿಗಳ ಆತ್ಮಹತ್ಯೆ! ಭಯಾನಕ ಭವಿಷ್ಯವಾಣಿ

Published : Jun 06, 2026, 12:21 PM IST

ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮುಹೂರ್ತವು ಅತ್ಯಂತ ಕೆಟ್ಟದ್ದಾಗಿದೆ ಎಂದು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ.  ಕೆಟ್ಟ ಲಗ್ನದಿಂದಾಗಿ ಕಾಂಗ್ರೆಸ್ ಪಕ್ಷವು 2-3 ಭಾಗಗಳಾಗಿ ಒಡೆಯಲಿದೆ ಎಂದು ಖ್ಯಾತ ಜ್ಯೋತಿಷಿ ಮೀಥಾ ಕ್ರಿಸ್ಟಲ್ ಎಚ್ಚರಿಸಿದ್ದಾರೆ.

PREV
15
ಡಿಕೆಶಿ ಪ್ರಮಾಣ ವಚನ ಕೆಟ್ಟ ಗಳಿಗೆ?

ವಾಸ್ತು ಮತ್ತು ಸಂಖ್ಯಾಶಾಸ್ತ್ರದ ಕುರಿತು ಇಂಚಿಂಚಾಗಿ ತಲೆಕೆಡಿಸಿಕೊಳ್ತಿರೋ, ತಾವು ತೆಗೆದುಕೊಂಡಿರುವ ಪ್ರಮಾಣವಚನದ ಸ್ಥಳ ಸೇರಿದಂತೆ ತಾವು ಕುಳಿತುಕೊಳ್ಳುವ ಆಸನದವರೆಗೆ ಪ್ರತಿಯೊಂದಕ್ಕೂ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿರೋ ಡಿ.ಕೆ.ಶಿವಕುಮಾರ್​ ಅವರು, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮುಹೂರ್ತವೇ ಅತ್ಯಂತ ಕೆಟ್ಟದ್ದಾಗಿದೆ ಎನ್ನುವ ಮಾತು ಜ್ಯೋತಿಷಿ ವಲಯದಲ್ಲಿ ಭಾರಿ ಕೇಳಿಬರುತ್ತಿದೆ.

25
ಒಳ್ಳೆಯ ಮುಹೂರ್ತ ಫಿಕ್ಸ್​

ಆರಂಭದಲ್ಲಿ ಜೂನ್ 4 ಅಥವಾ ಜೂನ್ 5 ರಂದು ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮ ನಡೆಯಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಮುಹೂರ್ತದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಡಿಕೆಶಿ ಕುಟುಂಬ, ಪ್ರಸಿದ್ಧ ಜ್ಯೋತಿಷಿ ಆರಾಧ್ಯ ಅವರ ಸಲಹೆಯನ್ನು ಪಡೆದಿದ್ದರು ಎನ್ನಲಾಗಿದೆ. ಜ್ಯೋತಿಷಿಗಳ ಲೆಕ್ಕಾಚಾರ ಮತ್ತು ಸಲಹೆಯ ಮೇರೆಗೆ ಮೇ 3ರಂದು ಗೋಧೂಳಿ ಮುಹೂರ್ತದಲ್ಲಿ ಅಧಿಕಾರ ಸ್ವೀಕರಿಸಲು ದಿನಾಂಕವನ್ನು ಅಂತಿಮಗೊಳಿಸಲಾಗಿತ್ತು.

35
ಕಾಂಗ್ರೆಸ್ 2-3 ಭಾಗ

ಅಂದು ಸಂಜೆ 4.15ಕ್ಕೆ ಡಿಕೆ ಶಿವಕುಮಾರ್​ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದರು. ಆದರೆ ಈ ಗಳಿಗೆ ಅತ್ಯಂತ ಕೆಟ್ಟದ್ದಾಗಿದ್ದು, ಇದರಿಂದಾಗಿ ಕಾಂಗ್ರೆಸ್​ 2-3 ಭಾಗ ಆಗುವುದಾಗಿ ಖ್ಯಾತ ಜ್ಯೋತಿಷಿಯಾಗಿರುವ ಮೀಥಾ ಕ್ರಿಸ್ಟಲ್​ ಅವರು ಹೇಳಿದ್ದಾರೆ. ಹಿಂದೆ ನಾನು ಹೇಳಿದ್ದೆಲ್ಲವೂ ನಡೆದಿದೆ. ಇದು ಕೂಡ ನಡೆದೇ ನಡೆಯುತ್ತದೆ ಎಂದಿದ್ದಾರೆ.

45
15-3ಕ್ಕೆ ಆಗಿ ಬರಲ್ಲ

ಡಿಕೆ ಶಿವಕುಮಾರ್​ ಅವರು ಹುಟ್ಟಿದ್ದು ಮೇ 15. 15 ಮತ್ತು ಅವರು ಪ್ರಮಾಣ ವಚನ ಸ್ವೀಕರಿಸಿದ 3ನೇ ತಾರೀಖಿಗು ಆಗಿ ಬರುವುದೇ ಇಲ್ಲ. 15 ಮತ್ತು 3 ಶತ್ರುಗಳು. ಅಷ್ಟೇ ಅಲ್ಲದೇ ಪ್ರಮಾಣ ವಚನ ಸ್ವೀಕಾರದ ಟೈಮ್​ನಲ್ಲಿ ಲಗ್ನ ಮತ್ತು ಗ್ರಹ ತುಂಬಾ ಮಹತ್ವದ್ದು. ಆದರೆ ಡಿಕೆಶಿ ಪ್ರಮಾಣ ವಚನ ಸ್ವೀಕರಿಸಿದ ಸಂಜೆ 4.15 ಅತ್ಯಂತ ಕೆಟ್ಟ ಲಗ್ನವಿತ್ತು. ಇದರಿಂದ ಬಹಳಷ್ಟು ಏಳು ಬೀಳುಗಳು ನಡೆಯುತ್ತದೆ ಎಂದಿದ್ದಾರೆ ಮೀಥಾ.

55
ಪ್ರಶಾಂತ್​ ಕಿಣಿ ಭವಿಷ್ಯ

ಅಷ್ಟಕ್ಕೂ ಇದಾಗಲೇ ಕಾಂಗ್ರೆಸ್​ ಇಬ್ಭಾಗ ಆಗಲಿದೆ ಎಂದು ಪ್ರಶಾಂತ್​ ಕಿಣಿ ಅವರೂ ಹೇಳಿದ್ದರು. ಅದರಂತೆಯೇ ಇದೀಗ ಮೀಥಾ ಅವರು ಈ ವಿಷಯವನ್ನು ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ವಿವರಿಸಿದ್ದಾರೆ. ಅಧಿಕಾರಗಳ ಆತ್ಮಹತ್ಯೆಯಾಗುತ್ತದೆ. ಸಚಿವರು ಇಬ್ಭಾಗವಾಗುತ್ತದೆ. ಮುಹೂರ್ತದ ಟೈಮ್​ ಅನ್ನು ಡಿಕೆಶಿ ಸರಿಪಡಿಸಿಕೊಳ್ಳಬೇಕಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ ಎಂದಿದ್ದಾರೆ.

Read more Photos on
click me!

Recommended Stories