ತುಲಾ ರಾಶಿಗೆ ಬುಧನ ಪ್ರವೇಶ: ಈ 3 ರಾಶಿಗಳಿಗೆ ಕಷ್ಟಗಳು ದೂರ, ಇನ್ನು ಎಲ್ಲದರಲ್ಲೂ ಜಯ!

Published : Nov 23, 2025, 07:52 AM IST

ಜ್ಯೋತಿಷ್ಯದ ಪ್ರಕಾರ, 2025ರ ನವೆಂಬರ್‌ನಲ್ಲಿ ನಡೆಯಲಿರುವ ಬುಧ ಸಂಚಾರವು ಮೂರು ರಾಶಿಗಳಿಗೆ ವಿಶೇಷ ಫಲಗಳನ್ನು ತರಲಿದೆ. ಈ ಸಂಚಾರದಿಂದ ರಾಶಿಯವರಿಗೆ ಆರ್ಥಿಕ ಲಾಭ, ವೃತ್ತಿ ಪ್ರಗತಿ ಮತ್ತು ಆಸ್ತಿ ವಿಷಯಗಳಲ್ಲಿ ಯಶಸ್ಸು ಸಿಗಲಿದೆ.

PREV
15
ಜ್ಯೋತಿಷ್ಯದಲ್ಲಿ ಗ್ರಹಗಳ ಸ್ಥಾನ

ಜ್ಯೋತಿಷ್ಯದಲ್ಲಿ ಗ್ರಹಗಳ ಸ್ಥಾನ ಅಥವಾ ಸಂಚಾರದಿಂದ ರಾಶಿಚಕ್ರದಲ್ಲಿ ಬದಲಾವಣೆಗಳಾಗುತ್ತವೆ. ವಿಶೇಷವಾಗಿ ಬುಧನು ವ್ಯಾಪಾರ ಯಶಸ್ಸು, ಆರ್ಥಿಕ ಬೆಳವಣಿಗೆ, ಶಿಕ್ಷಣ, ಸಂದರ್ಶನಗಳು ಮತ್ತು ಉದ್ಯೋಗದ ಫಲಿತಾಂಶಗಳ ಮೇಲೆ ಪ್ರಭಾವ ಬೀರುತ್ತಾನೆ. ಈ ಬಾರಿ ಬುಧ ಸಂಚಾರವು ಮೂರು ರಾಶಿಗಳಿಗೆ ವಿಶೇಷ ಲಾಭಗಳನ್ನು ನೀಡಲಿದೆ. ಆ ಮೂರು ರಾಶಿಗಳು ಯಾವವು ಎಂದು ನೋಡೋಣ ಬನ್ನಿ.

25
ಆ ರಾಶಿಗಳು ಯಾವವು?

2025ರ ನವೆಂಬರ್ 23ರಂದು ಬುಧನು ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ನಂತರ ನವೆಂಬರ್ 29ರಂದು ನೇರ ಸಂಚಾರಕ್ಕೆ ಬರುತ್ತಾನೆ. ಈ ಬದಲಾವಣೆಗಳಿಂದ ಕೆಲವು ರಾಶಿಗಳಿಗೆ ಅದೃಷ್ಟ ಒಲಿಯಲಿದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಆ ರಾಶಿಗಳು ಯಾವವು? ಏನೆಲ್ಲಾ ಲಾಭಗಳಿವೆ ಎಂಬುದರ ಮಾಹಿತಿ ಇಲ್ಲಿದೆ.

35
ವೃಷಭ ರಾಶಿಗೆ ಆರ್ಥಿಕ ಲಾಭ

ವೃಷಭ ರಾಶಿಗೆ ಬುಧನು ಎರಡು ಮತ್ತು ಐದನೇ ಮನೆಯ ಅಧಿಪತಿ. ಬುಧ ಸಂಚಾರದಿಂದ ಬಾಕಿ ಇರುವ ಹಣ ಮರಳಿ ಬರುವ ಸಾಧ್ಯತೆಗಳಿರುವತ್ತವೆ. ಹಾಗೆಯೇ ಹೂಡಿಕೆಗಳಿಂದ ಉತ್ತಮ ಲಾಭ ಸಿಗಲಿದೆ. ವ್ಯಾಪಾರ ವಿಸ್ತರಿಸಲು ಬಯಸುವವರಿಗೆ ಇದು ಸೂಕ್ತ ಕಾಲವಾಗಿದೆ. ಹಾಗೆ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ವ್ಯಾಪಾರಿಗಳಿಗೆ ಮತ್ತು ಹೂಡಿಕೆದಾರರಿಗೆ ಇದು ಉತ್ತಮ ಸಮಯವಾಗಿದೆ.

45
ಕರ್ಕಾಟಕ ರಾಶಿಗೆ ಆಸ್ತಿ, ಕೆರಿಯರ್‌ನಲ್ಲಿ ಪ್ರಗತಿ

ಕರ್ಕಾಟಕ ರಾಶಿಯವರಿಗೆ ಬುಧನ ಈ ಸಂಚಾರವು ಉತ್ತಮ ಬದಲಾವಣೆಗಳನ್ನು ತರುತ್ತದೆ. ಪೂರ್ವಜರ ಆಸ್ತಿಗೆ ಸಂಬಂಧಿಸಿದ ವಿಷಯಗಳು ಬಗೆಹರಿಯುತ್ತವೆ. ಆರ್ಥಿಕ ಸ್ಥಿತಿ ಮತ್ತಷ್ಟು బలಗೊಳ್ಳುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಸ್ಥಿರತೆ ಬರುತ್ತದೆ. ಪ್ರಯಾಣ ಅಥವಾ ಒಪ್ಪಂದಗಳು ಲಾಭದಾಯಕವಾಗಬಹುದು. ಇದು ಕುಟುಂಬ ಶಾಂತಿ, ವೃತ್ತಿ ಬೆಳವಣಿಗೆಗೆ ಅನುಕೂಲಕರ ಸಮಯ.

ಇದನ್ನೂ ಓದಿ: ಸುಳ್ಳು, ಮೋಸ ಇವರಿಗೆ ಗೊತ್ತಿಲ್ಲ; ಈ ರಾಶಿಯವರ ಜೊತೆ ಮಾತಲ್ಲಿ ಯಾರೂ ಗೆಲ್ಲೋಕಾಗಲ್ಲ

55
ಮಕರ ರಾಶಿಯವರಿಗೆ ಪ್ರಮೋಷನ್

ಮಕರ ರಾಶಿಯಲ್ಲಿ ಬುಧನು 10ನೇ ಮನೆಗೆ ಪ್ರವೇಶಿಸುವುದು ಶುಭ. ಉದ್ಯೋಗಿಗಳಿಗೆ ಬಡ್ತಿ, ಸಂಬಳ ಹೆಚ್ಚಳದ ಅವಕಾಶಗಳಿವೆ. ಇದರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸೋದರ ಜೊತೆಯಲ್ಲಿ ಗೌರವ ಸಹ ಹೆಚ್ಚಳವಾಗಲಿದೆ. ವ್ಯವಹಾರದಲ್ಲಿ ಹೊಸ ಒಪ್ಪಂದ ಏರ್ಪಡುವ ಸಾಧ್ಯತೆ ಇರುತ್ತದೆ. ಮಕರ ರಾಶಿಯ ಜನರಿಗೆ ವೃತ್ತಿ ಬೆಳವಣಿಗೆಗೆ ಇದು ಉತ್ತಮ ಸಮಯವಾಗಿದೆ

ವಿಶೇಷ ಮನವಿ: ಜ್ಯೋತಿಷ್ಯ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

ಇದನ್ನೂ ಓದಿ: ಮಿಥುನ ರಾಶಿಯಲ್ಲಿ ಗುರು ಸಂಚಾರ, ಈ 4 ರಾಶಿಗೆ ಕೋಟ್ಯಾಧಿಪತಿ ಯೋಗ, ಮುಟ್ಟುವುದೆಲ್ಲವೂ ಚಿನ್ನ

Read more Photos on
click me!

Recommended Stories