ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ದಿನಾಂಕಗಳಲ್ಲಿ ಜನಿಸಿದ ಪುರುಷರು ತಮ್ಮ ಪ್ರೀತಿಯನ್ನು ಮಾತಿನಲ್ಲಿ ವ್ಯಕ್ತಪಡಿಸುವುದಿಲ್ಲ. ಪತ್ನಿಯನ್ನು ಹೆಚ್ಚು ಪ್ರೀತಿಸಿದರೂ, ತಮ್ಮ ಜವಾಬ್ದಾರಿ ಮತ್ತು ಕಾರ್ಯಗಳ ಮೂಲಕವೇ ಪ್ರೀತಿಯನ್ನು ತೋರಿಸುತ್ತಾರೆ.ನಿಷ್ಠಾವಂತ, ಜವಾಬ್ದಾರಿಯುತ ಜೀವನ ಸಂಗಾತಿಗಳಾಗಿರುತ್ತಾರೆ.
ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ತಿಂಗಳ ಕೆಲವು ದಿನಾಂಕಗಳಂದು ಜನಿಸಿದ ಪುರುಷರು ಪ್ರೀತಿಯ ಆರಾಧಕರಾಗಿರುತ್ತಾರೆ. ಈ ದಿನಾಂಕಗಳಲ್ಲಿ ಜನಿಸಿದ ಜನರು ಮುಖ್ಯವಾಗಿ ಚಂದ್ರ, ರಾಹು ಮತ್ತು ಶನಿಯಿಂದ ಪ್ರಭಾವಿತರಾಗುತ್ತಾರೆ. ಚಂದ್ರನು ಮನಸ್ಸನ್ನು ಸಂಕೇತಿಸಿದರೆ, ಶನಿ ಜವಾಬ್ದಾರಿ ಮತ್ತು ಬದ್ಧತೆಯ ಸೂಚಕ. ಮತ್ತೊಂದೆಡೆ, ರಾಹು ಅವರಿಗೆ ತಮ್ಮ ಭಾವನೆಗಳನ್ನು ಒಳಗೇ ಇಟ್ಟುಕೊಳ್ಳುವ ಪ್ರವೃತ್ತಿಯನ್ನು ನೀಡುತ್ತದೆ.
27
ಕುಟುಂಬದ ಭವಿಷ್ಯಕ್ಕಾಗಿ ಶ್ರಮಿಸುವ ಗುಣ
ಈ ಕಾರಣದಿಂದ ತಮ್ಮ ಹೆಂಡತಿಯರನ್ನು ಎಷ್ಟೇ ಪ್ರೀತಿಸಿದರೂ ತಮ್ಮ ಭಾವನೆಗಳನ್ನು ಹೆಚ್ಚಾಗಿ ವ್ಯಕ್ತಪಡಿಸುವುದಿಲ್ಲ. ಆದರೆ ಅವರ ಪ್ರೀತಿ ಮಾತಿನಲ್ಲಿ ಅಲ್ಲ, ಕಾರ್ಯಗಳಲ್ಲಿ ಕಂಡುಬರುತ್ತದೆ. ನಿಜವಾದ ಪ್ರೀತಿಯ ರೂಪವೆಂದರೆ ತಮ್ಮ ಹೆಂಡತಿಯ ಅಗತ್ಯಗಳನ್ನು ನೋಡಿಕೊಳ್ಳುವುದು, ಕುಟುಂಬದ ಭವಿಷ್ಯಕ್ಕಾಗಿ ಶ್ರಮಿಸುವುದು ಮತ್ತು ಅವಳಿಗೆ ತಿಳಿಯದೆ ಅವಳ ಸಂತೋಷಕ್ಕಾಗಿ ತ್ಯಾಗ ಮಾಡುವುದು.
37
2 ಮತ್ತು 11
ಯಾವುದೇ ತಿಂಗಳ 2 ಮತ್ತು 11 ನೇ ತಾರೀಖಿನಂದು ಜನಿಸಿದವರು ಅತ್ಯಂತ ಸೂಕ್ಷ್ಮ ಹೃದಯಿಗಳಾಗಿರುತ್ತಾರೆ. ತಮ್ಮ ಹೆಂಡತಿ ದುಃಖಿತಳಾಗಿದ್ರೆ ಇವರಿಗೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಎಂದಿಗೂ ತಮ್ಮ ದುಃಖವನ್ನು ಪತ್ನಿ ಮುಂದೆ ತೋರಿಸಿಕೊಳ್ಳಲ್ಲ. ಹೆಂಡತಿಗೆ ಭದ್ರತೆ ಮತ್ತು ಮಾನಸಿಕ ಸ್ಥಿರತೆಯನ್ನು ಒದಗಿಸುವ ಮೂಲಕ ಪ್ರೀತಿ ತೋರಿಸುತ್ತಾರೆ. ಮೌನಿಗಳಾಗಿರುವ ಇವರನ್ನು ಕೆಲವೊಮ್ಮೆ ತಮ್ಮ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ಹೆಂಡ್ತಿ ಅನುಮಾನಿಸಬಹುದು. ಆದ್ರೆ ಪತ್ನಿಯ ಬಗ್ಗೆ ಅತಿಯಾದ ಕಾಳಜಿ ಹೊದಿರುತ್ತಾರೆ.
4, 8 ಮತ್ತು 22 ತಾರೀಖಿನಂದು ಜನಿಸಿದವರು ಶನಿಯ ಪ್ರಭಾವದಿಂದಾಗಿ ತುಂಬಾ ಗಂಭೀರವಾಗಿರುತ್ತಾರೆ. ಪ್ರೀತಿಯನ್ನು ಒಂದು ಜವಾಬ್ದಾರಿಯೆಂದು ಪರಿಗಣಿಸುವ ಇವರು ಹೆಂಡತಿಯನ್ನು ಗೌರವಿಸುತ್ತಾರೆ. ಬಹಿರಂಗವಾಗಿ ಪ್ರೀತಿಯನ್ನು ತೋರಿಸುವುದನ್ನು ತಮ್ಮ ದೌರ್ಬಲ್ಯವೆಂದು ಪರಿಗಣಿಸಿ, ಶಿಸ್ತಿನ ಸಿಪಾಯಿಯಂತೆ ಜೀವನ ನಡೆಸುತ್ತಿರುತ್ತಾರೆ.
57
ಜೊತೆಯಲ್ಲಿರುವ ಶಪಥ
ಪತ್ನಿಯೊಂದಿಗೆ ಪ್ರಣಯದ ಮಾತುಗಳನ್ನು ಹೇಳದಿದ್ದರೂ, ಯಾವುದೇ ನ್ಯೂನತೆಗಳಿಲ್ಲದೆ ತಮ್ಮ ಕುಟುಂಬವನ್ನು ನೋಡಿಕೊಳ್ಳುವಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಹೆಂಡತಿ ಆರೋಗ್ಯ, ಗೌರವ ಮತ್ತು ಸುರಕ್ಷತೆ ಅವರಿಗೆ ಅತ್ಯಂತ ಮುಖ್ಯವಾಗಿರುರತ್ತದೆ. ಈ ದಿನಾಂಕಗಳಂದು ಪ್ರೀತಿ ಗೋಚರಿಸದಿದ್ದರೂ ಸಹ, ಪತ್ನಿಯೊಂದಿಗೆ ಜೀವನದುದ್ದಕ್ಕೂ ಜೊತೆಯಲ್ಲಿರುವ ಶಪಥ ಮಾಡಿಕೊಂಡಿರುತ್ತಾರೆ.
67
16, 20, 26 ಮತ್ತು 29
ಯಾವುದೇ ತಿಂಗಳ 16, 20, 26 ಮತ್ತು 29 ರಂದು ಜನಿಸಿದವ ಪುರುಷರು ತುಂಬಾ ಅಂತರ್ಮುಖಿಗಳಾಗಿರುತ್ತಾರೆ. ಆಳವಾದ ಭಾವನೆಗಳನ್ನು ಹೊಂದಿದ್ದರೂ ಅವುಗಳನ್ನು ವ್ಯಕ್ತಪಡಿಸಲು ಹಿಂಜರಿಯುತ್ತಿರುತ್ತಾರೆ. ಹೆಂಡತಿ ಮೇಲೆ ಕೋಪಗೊಂಡರೂ ಅದನ್ನು ತೋರಿಸಿಕೊಳ್ಳಲು ಇಷ್ಟಪಡಲ್ಲ.
ಇವರಲ್ಲಿ ಹೆಂಡತಿಯನ್ನು ಬಿಟ್ಟು ಹೋಗುವ ಯಾವುದೇ ಆಲೋಚನೆಗಳಿರಲ್ಲ. ಪ್ರೀತಿಯನ್ನು ಮಾತಿನ ಮೂಲಕ ತೋರಿಸಬಾರದು, ಕ್ರಿಯೆಯ ಮೂಲಕ ತೋರಿಸಬೇಕು ಎಂದು ನಂಬಿರುತ್ತಾರೆ.
ಸಂಖ್ಯಾಶಾಸ್ತ್ರದ ಪ್ರಕಾರ, ಈ ದಿನಾಂಕಗಳಲ್ಲಿ ಜನಿಸಿದ ಪುರುಷರ ಪ್ರೀತಿಯ ವಿಷಯದಲ್ಲಿ ತುಂಬಾ ನಿಷ್ಠಾವಂತವಾಗಿರುತ್ತದೆ. ವಿರಳವಾಗಿ ಮೋಸ ಮಾಡುತ್ತಾರೆ ಅಥವಾ ಮರುಚಿಂತನೆಗಳನ್ನು ಹೊಂದಿರುತ್ತಾರೆ. ತಮ್ಮ ಹೆಂಡತಿಯನ್ನು ತಮ್ಮ ಜೀವನ ಸಂಗಾತಿಯಾಗಿ ಮಾತ್ರವಲ್ಲದೆ, ತಮ್ಮ ಜವಾಬ್ದಾರಿಯಾಗಿಯೂ ಪರಿಗಣಿಸುತ್ತಾರೆ. ಅದಕ್ಕಾಗಿಯೇ ಅವರ ಪ್ರೀತಿ ತುಂಬಾ ಆತುರದಿಂದ ಕೂಡಿರುವುದಿಲ್ಲ, ಆದರೆ ಸ್ಥಿರವಾಗಿರುತ್ತದೆ. ಅವರ ಹೆಂಡತಿ ಕಷ್ಟದ ಸಮಯಗಳನ್ನು ಎದುರಿಸಿದಾಗ, ಅವರು ಮಾತಿನಿಂದಲ್ಲ, ಆದರೆ ಕ್ರಿಯೆಗಳಿಂದ ಬೆಂಬಲಕ್ಕೆ ನಿಲ್ಲುತ್ತಾರೆ.