RCB ಫೈನಲ್​ಗೆ ಬರಲು ಗೇಟ್​ ನಂಬರ್​ 5 ಕಾರಣ: ಕಪ್​ ಈ ಬಾರಿ ಯಾರದ್ದು? ರೋಚಕ ಭವಿಷ್ಯ ಇಲ್ಲಿದೆ

Published : May 31, 2026, 01:14 PM IST

ಇಂದು ನಡೆಯಲಿರುವ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಫೈನಲ್ ಪಂದ್ಯದ ಕುರಿತು ಖ್ಯಾತ ಸಂಖ್ಯಾಶಾಸ್ತ್ರಜ್ಞರೊಬ್ಬರು ಭವಿಷ್ಯ ನುಡಿದಿದ್ದಾರೆ. ಆರ್‌ಸಿಬಿಯ ಗೆಲುವಿಗೆ '5'ನೇ ಸಂಖ್ಯೆ ಕಾರಣವಾಗಲಿದೆ ಎಂದಿರುವ ಅವರು, ಈ ಬಾರಿಯ ದಿನಾಂಕ ಮತ್ತು ವರ್ಷದ ಲೆಕ್ಕಾಚಾರದ ಪ್ರಕಾರ ಭವಿಷ್ಯ ನುಡಿದಿದ್ದಾರೆ.

PREV
16
ರೋಚಕ ಪಂದ್ಯ

ಇಂದು ಆರ್​ಸಿಬಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ಮತ್ತು ಗುಜರಾತ್ ಟೈಟಾನ್ಸ್ (RCB vs GT) ನಡುವೆ ಫೈನಲ್ ಪಂದ್ಯ ನಡೆಯಲಿದ್ದು, ಇನ್ನು ಕೆಲವೇ ಗಂಟೆಗಳಲ್ಲಿನ ರೋಚಕ ಕ್ಷಣಕ್ಕಾಗಿ ಕ್ರೀಡಾಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಇಂದು ರಾತ್ರಿ 7:30ಕ್ಕೆ ಗುಜರಾತ್​ನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್​ ಸೆಣಸಾಟ ನಡೆಯಲಿದೆ.

26
ನಂಬರ್​ 5 ಕಾರಣ

ಇದಾಗಲೇ ಇದರ ಬಗ್ಗೆ ಭವಿಷ್ಯ ನುಡಿಯುವವರು, ಭವಿಷ್ಯವಾಣಿ ಹೇಳುತ್ತಲೇ ಸಾಗಿದ್ದಾರೆ. ಖ್ಯಾತ ಸಂಖ್ಯಾಶಾಸ್ತ್ರಜ್ಞರಾಗಿರುವ ಮಿಥಾ ಕ್ರಿಸ್ಟಲ್​ ಅವರು, ಆರ್​ಸಿಬಿ ಫೈನಲ್​ ವರೆಗೆ ಬರಲು ನಂಬರ್​ 5 ಕಾರಣ ಎಂದು ಹೇಳಿದ್ದಾರೆ.

36
ಗೇಟ್​ ನಂಬರ್​ 5

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಳೆದ ತಿಂಗಳು ನಡೆದಿದ್ದ ಪಂದ್ಯದಲ್ಲಿ RCB ವಿನ್​ ಆಗುವುದಕ್ಕೆ ಕಾರಣ, 5ನೇ ನಂಬರ್​ ಗೇಟ್​ ಎಂದು ಇವರು ಹೇಳಿದ್ದಾರೆ. ಆರ್​ಸಿಬಿ ಪಾಲಿನ ಲಕ್ಕಿ ನಂಬರ್​ 5. ಕಳೆದ ಬಾರಿ ಈ ಗೇಟ್​ ಓಪನ್​ ಆಗಿರಲಿಲ್ಲ. ಆದರೆ ಈ ಬಾರಿ ಗೇಟ್​ ಓಪನ್​ ಆದಾಗಲೇ ನಾನು ಭವಿಷ್ಯ ನುಡಿದಿದ್ದೆ. ಅದೇ ರೀತಿ ಆರ್​ಸಿಬಿ ವಿನ್​ ಆಗಿದೆ ಎಂದು ಅವರು ಹೇಳಿದ್ದಾರೆ.

46
ಇಂದು ಕೂಡ ಅದೇ ಸಂಖ್ಯೆ

ಈ ವರ್ಷ ಮತ್ತು ಇವತ್ತಿನ ದಿನಾಂಕ (ಮೇ 31) ಪರಿಗಣನೆಗೆ ತೆಗೆದುಕೊಂಡರೆ ನಂಬರ್​ 5 ಬರಲಿದೆ. 2026 ಎಲ್ಲವನ್ನೂ ಸೇರಿಸಿದರೆ ಸಂಖ್ಯೆ 1 ಹಾಗೂ ಇವತ್ತಿನ ದಿನ 3+1 ಸೇರಿಸಿದರೆ ನಾಲ್ಕು. 4+1 ಎಂದರೆ 5 ಆಗಲಿದೆ. ಆದ್ದರಿಂದ ಆರ್​ಸಿಬಿಯ ಬಹುತೇಕ ತಾರೆಯರ ಸಂಖ್ಯೆಗೆ ಇದು ಅದೃಷ್ಟ ತರುವ ಹಿನ್ನೆಲೆಯಲ್ಲಿ, ಆರ್​ಸಿಬಿ ವಿನ್​ ಆಗುವುದು ಖಚಿತ ಎಂದು ಬಾಸ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಅವರು ವಿವರಿಸಿದ್ದಾರೆ.

56
ಕಪ್​ ನಮ್ಮದೇ

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ತಂಡವು ತಾವೇಕೆ ಚಾಂಪಿಯನ್ ತಂಡ ಎನ್ನುವುದನ್ನು ನೆನಪಿಸುವಂತಹ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದೆ. ಮೊದಲ ತಂಡವಾಗಿ ಪ್ಲೇ ಆಫ್‌ ಪ್ರವೇಶಿಸಿದ್ದ ಆರ್‌ಸಿಬಿ ತಂಡವು, ಆ ನಂತರ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿತ್ತು. ಇದೀಗ ಇದೀಗ ಸತತ ಎರಡನೇ ಟ್ರೋಫಿ ಮೇಲೆ ಬೆಂಗಳೂರು ತಂಡವು ಕಣ್ಣಿಟ್ಟಿದ್ದು, ಕಪ್​ ಸಿಗಲಿದೆ ಎನ್ನುವುದು ಇವರ ಮಾತು.

66
ಫಿಲ್ ಸಾಲ್ಟ್‌-ವಿರಾಟ್ ಕೊಹ್ಲಿ ಆರಂಭಿಕ ಜೋಡಿ

ಆರ್‌ಸಿಬಿ ತಂಡದ ಆರಂಭಿಕ ಬ್ಯಾಟರ್‌ಗಳಾಗಿ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಆರಂಭಿಕರಾಗಿ ಇನ್ನಿಂಗ್ಸ್ ಆರಂಭಿಸೋದು ಬಹುತೇಕ ಖಚಿತ ಎನಿಸಿದೆ. ಕಳೆದೊಂದು ತಿಂಗಳಿನಿಂದ ಸಾಲ್ಟ್ ಮೈದಾನದಲ್ಲಿ ಹೊರಗುಳಿದಿದ್ದರೂ, ಆತ ಯಾವುದೇ ಕ್ಷಣದಲ್ಲಿ ಬೇಕಿದ್ದರೂ ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯವನ್ನು ಸಾಲ್ಟ್ ಹೊಂದಿದ್ದಾರೆ. ಹೀಗಾಗಿ ಸಾಲ್ಟ್ ಆರಂಭಿಕರಾಗಿ ಕಾಣಿಸಿಕೊಂಡರೆ, ವೆಂಕಟೇಶ್ ಅಯ್ಯರ್ ಮಧ್ಯಮ ಕ್ರಮಾಂಕಕ್ಕೆ ಶಿಫ್ಟ್ ಆಗಬೇಕಾಗುತ್ತದೆ.

Read more Photos on
click me!

Recommended Stories