ಚಾಣಕ್ಯ ನೀತಿ: ಹಣ, ಸಂಬಂಧ, ಗೌರವ ಕಳೆದುಕೊಳ್ಳುವ ಮುನ್ನ ಈ 5 ಅಭ್ಯಾಸಗಳನ್ನು ಬದಲಿಸಿಕೊಳ್ಳಿ!

Published : Sep 26, 2026, 01:58 PM IST

Chanakya Niti ಮನುಷ್ಯನ ಜೀವನದಲ್ಲಿ ಏಳು-ಬೀಳುಗಳು ಒಂದೇ ದಿನದಲ್ಲಿ ಆಗುವುದಿಲ್ಲ. ನಮ್ಮ ಸಣ್ಣ ಸಣ್ಣ ಅಭ್ಯಾಸಗಳೇ ನಮ್ಮ ಆಲೋಚನೆ, ಸಂಬಂಧ, ಸಂಪತ್ತು ಹಾಗೂ ಭವಿಷ್ಯವನ್ನು ನಿರ್ಧರಿಸುತ್ತವೆ. ಚಾಣಕ್ಯ ನೀತಿಯ ಪ್ರಕಾರ, ಮನುಷ್ಯನ ಅವನತಿಗೆ ಕಾರಣವಾಗುವ ಆ 5 ಕೆಟ್ಟ ಅಭ್ಯಾಸಗಳು ಯಾವುವು ಅಂತ ಇಲ್ಲಿ ನೋಡೋಣ.

PREV
16
ಮನುಷ್ಯನ ಅವನತಿಗೆ ಕಾರಣವಾಗುವ ಅಭ್ಯಾಸಗಳು

ಜೀವನದಲ್ಲಿ ಯಶಸ್ಸು ಕೇವಲ ಅದೃಷ್ಟದ ಮೇಲೆ ನಿಂತಿಲ್ಲ. ನಮ್ಮ ಆಲೋಚನೆ, ನಿರ್ಧಾರ ಹಾಗೂ ಅಭ್ಯಾಸಗಳು ಭವಿಷ್ಯವನ್ನು ರೂಪಿಸುತ್ತವೆ. ಆಚಾರ್ಯ ಚಾಣಕ್ಯರು ತಮ್ಮ ನೀತಿ ಪಾಠಗಳಲ್ಲಿ ಮನುಷ್ಯನ ಅವನತಿಗೆ ಕಾರಣವಾಗುವ ನಡವಳಿಕೆಗಳ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ಈ ಕೆಟ್ಟ ಅಭ್ಯಾಸಗಳು ನಾವು ಗಳಿಸಿದ ಗೌರವ, ಸಂಪತ್ತು ಮತ್ತು ಅವಕಾಶಗಳನ್ನು ನಾಶ ಮಾಡುತ್ತವೆ.

26
ಸೋಮಾರಿತನ

ಅವಕಾಶಗಳು ಒಲಿದು ಬಂದಾಗ ಅದನ್ನು ಬಳಸಿಕೊಳ್ಳಲು ಕಠಿಣ ಶ್ರಮ ಬೇಕು. ಕೆಲಸವನ್ನು ಮುಂದೂಡುವುದು, ಸಮಯ ವ್ಯರ್ಥ ಮಾಡುವುದು ಮತ್ತು ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ನಮ್ಮ ಏಳಿಗೆಗೆ ಅಡ್ಡಿಯಾಗುತ್ತದೆ. ಎಷ್ಟೇ ಪ್ರತಿಭೆ ಇದ್ದರೂ ಶ್ರಮವಿಲ್ಲದೆ ಫಲ ಸಿಗುವುದಿಲ್ಲ. ಮಾಡಬೇಕಾದ ಕೆಲಸವನ್ನು ಸರಿಯಾದ ಸಮಯಕ್ಕೆ ಮುಗಿಸುವುದು ಯಶಸ್ಸಿನ ಮೆಟ್ಟಿಲು ಎನ್ನುತ್ತಾರೆ ಚಾಣಾಕ್ಯರು.

36
ಅತಿಯಾದ ಕೋಪ

ಕೋಪ ಬಂದಾಗ ಮನುಷ್ಯನ ಆಲೋಚನಾ ಶಕ್ತಿ ಕಳೆದುಹೋಗುತ್ತದೆ. ಆ ಸಮಯದಲ್ಲಿ ಆಡುವ ಮಾತುಗಳು, ತೆಗೆದುಕೊಳ್ಳುವ ನಿರ್ಧಾರಗಳು ಮುಂದೆ ಪಶ್ಚಾತ್ತಾಪಕ್ಕೆ ಕಾರಣವಾಗುತ್ತವೆ. ಸಣ್ಣ ವಿಚಾರಕ್ಕೂ ಕೋಪಗೊಂಡರೆ ವರ್ಷಗಳ ಸಂಬಂಧ ಮುರಿದುಬೀಳಬಹುದು. ಹಾಗಾಗಿ ಸಮಸ್ಯೆ ಎದುರಾದಾಗ ತಕ್ಷಣ ಪ್ರತಿಕ್ರಿಯಿಸದೆ, ಸ್ವಲ್ಪ ಸಮಯ ತೆಗೆದುಕೊಂಡು ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು.

46
ದುರಾಸೆ

ಅಗತ್ಯಕ್ಕಿಂತ ಹೆಚ್ಚು ಸಂಪತ್ತು, ಅಧಿಕಾರ ಬೇಕು ಎಂಬ ಆಸೆ ಮನುಷ್ಯನನ್ನು ತಪ್ಪು ದಾರಿಗೆ ಎಳೆಯುತ್ತದೆ. ಜೀವನದಲ್ಲಿ ಬೆಳೆಯಬೇಕು ಎಂಬ ಆಸೆ ಇರಬೇಕು, ಆದರೆ ಅದಕ್ಕೊಂದು ಮಿತಿ ಇರಬೇಕು. ಬೇರೆಯವರ ಜೊತೆ ಹೋಲಿಕೆ ಮಾಡಿಕೊಂಡು ಇನ್ನಷ್ಟು ಬೇಕು ಎಂದು ಹಂಬಲಿಸಿದರೆ, ನಮ್ಮಲ್ಲಿರುವುದರ ಮೇಲಿನ ನೆಮ್ಮದಿ ಹಾಳಾಗುತ್ತದೆ. ಹಣ ಗಳಿಸುವುದು ಎಷ್ಟು ಮುಖ್ಯವೋ, ಅದನ್ನು ವಿವೇಕದಿಂದ ಬಳಸುವುದು ಕೂಡ ಅಷ್ಟೇ ಮುಖ್ಯ.

56
ರಹಸ್ಯಗಳನ್ನು ಬಿಟ್ಟುಕೊಡುವುದು

ಪ್ರತಿಯೊಂದು ವಿಚಾರವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದು ಜಾಣತನವಲ್ಲ. ನಮ್ಮ ವೈಯಕ್ತಿಕ ಸಮಸ್ಯೆಗಳು, ಆರ್ಥಿಕ ಪರಿಸ್ಥಿತಿ ಹಾಗೂ ಭವಿಷ್ಯದ ಯೋಜನೆಗಳನ್ನು ಯಾರ ಬಳಿ ಹೇಳಬೇಕು ಎಂಬ ಅರಿವು ನಮಗಿರಬೇಕು. ನಮ್ಮ ದೌರ್ಬಲ್ಯಗಳು ಮತ್ತು ರಹಸ್ಯ ಯೋಜನೆಗಳನ್ನು ಬೇರೆಯವರಿಗೆ ತಿಳಿಯುವಂತೆ ಮಾಡಿದರೆ ಭವಿಷ್ಯದಲ್ಲಿ ದೊಡ್ಡ ಸಂಕಷ್ಟ ಎದುರಿಸಬೇಕಾಗುತ್ತದೆ.

66
ಅತಿಯಾದ ನಂಬಿಕೆ

ಜೀವನದಲ್ಲಿ ಯಾರನ್ನು ಎಷ್ಟು ನಂಬಬೇಕು ಎಂಬ ವಿವೇಚನೆ ನಮಗಿರಬೇಕು. ನಮ್ಮ ವೈಯಕ್ತಿಕ ವಿಚಾರಗಳು, ಹಣಕಾಸಿನ ಸ್ಥಿತಿ ಅಥವಾ ಭವಿಷ್ಯದ ಯೋಜನೆಗಳನ್ನು ಎಲ್ಲರ ಬಳಿ ಹೇಳಿಕೊಂಡರೆ, ಅವರು ಅದನ್ನು ದುರ್ಬಳಕೆ ಮಾಡಿಕೊಳ್ಳುವ ಅಪಾಯವಿರುತ್ತದೆ. ಎಷ್ಟೇ ಆಪ್ತರಾಗಿದ್ದರೂ, ಪ್ರತಿಯೊಂದು ವಿಚಾರವನ್ನೂ ಹಂಚಿಕೊಳ್ಳುವ ಅಗತ್ಯವಿಲ್ಲ ಎಂದು ಚಾಣಕ್ಯರು ಎಚ್ಚರಿಸಿದ್ದಾರೆ.

Read more Photos on
click me!

Recommended Stories