Pitru Paksha myths: ಶ್ರಾದ್ಧದ ಸಮಯದಲ್ಲಿ ಕಾಗೆ ಬಂದು ಎಡೆ ಮುಟ್ಟದಿದ್ದರೆ ಹಿರಿಯರ ಆತ್ಮಕ್ಕೆ ತೃಪ್ತಿಯಾಗಿಲ್ಲ ಎಂದರ್ಥವೇ? ಪಿತೃದೋಷ ಎಂದರೆ ನಿಜವಾಗಿಯೂ ಹಿರಿಯರು ಕೊಡುವ ಶಾಪವೇ? ಪಿತೃಪಕ್ಷದ ಸುತ್ತ ಬೆಳೆದುಕೊಂಡಿರುವ ಇಂತಹ ಹತ್ತಾರು ಗೊಂದಲಗಳು ಹಾಗೂ ತಪ್ಪು ಕಲ್ಪನೆಗಳ ಹಿಂದಿರುವ ಅಸಲಿ ಸತ್ಯ ಇಲ್ಲಿದೆ.
ಇಂದಿನ ತಲೆಮಾರಿಗೆ ತಿಳಿಯಬೇಕಾದ ಸತ್ಯ ಪಿತೃಪಕ್ಷ, ಪಿತೃದೋಷ, ಶ್ರಾದ್ಧದ ಮಹತ್ವ ಹಾಗೂ ಇಂದಿನ ತಲೆಮಾರಿಗೆ ತಿಳಿಯಬೇಕಾದ ಸತ್ಯಗಳ ಕುರಿತು ಜನಪ್ರಿಯ ಆಧ್ಯಾತ್ಮಿಕ ಮಾರ್ಗದರ್ಶಕರು ಹಂಚಿಕೊಂಡಿರುವ ಸಂಪೂರ್ಣ ವಿವರ ಇಲ್ಲಿದೆ.
27
ಪಿತೃಪಕ್ಷ ಎಂದರೇನು?
ಪಿತೃಪಕ್ಷ ಎಂದರೇನು? ನಮ್ಮನ್ನು ಅಗಲಿದ ತಂದೆ-ತಾಯಿ ಹಾಗೂ ಹಿರಿಯರಿಗೆ ಶ್ರದ್ಧೆಯಿಂದ ಕೃತಜ್ಞತೆ ಸಲ್ಲಿಸುವ ಪವಿತ್ರ 16 ದಿನಗಳು (ಭಾದ್ರಪದ ಹುಣ್ಣಿಮೆಯಿಂದ ಮಹಾಲಯ ಅಮಾವಾಸ್ಯೆವರೆಗೆ).
37
ಶುಭಕಾರ್ಯ ಏಕೆ ಮಾಡಬಾರದು?
ಶುಭಕಾರ್ಯ ಏಕೆ ಮಾಡಬಾರದು? ಇದು ಶಾಪದ ಕಾಲವಲ್ಲ. ಈ ಸಮಯ ಸಂಪೂರ್ಣವಾಗಿ ಹಿರಿಯರ ಸ್ಮರಣೆಗೆ ಮೀಸಲಾಗಿರಲಿ ಎಂಬ ಗೌರವದಿಂದ ಮಾತ್ರ ಹೊಸ ಕೆಲಸಗಳನ್ನು ಮಾಡುವುದಿಲ್ಲ.
ಪಿತೃದೋಷ ಅಂದರೆ ಶಾಪವಲ್ಲ ತಂದೆ-ತಾಯಿ ಎಂದಿಗೂ ಮಕ್ಕಳಿಗೆ ಶಾಪ ಕೊಡಲ್ಲ! ಹಿರಿಯರಿಗೆ ಸಲ್ಲಿಸಬೇಕಾದ ಕೃತಜ್ಞತೆಯನ್ನು ಮರೆತಾಗ, ನಮ್ಮ ಕರ್ಮದ ಫಲವಾಗಿ ಬರುವ ಕಷ್ಟಗಳೇ ‘ಪಿತೃದೋಷ’ (ಮದುವೆ ತಡ, ಉದ್ಯೋಗದಲ್ಲಿ ಅಡೆತಡೆ ಇತ್ಯಾದಿ).
57
ಎಳ್ಳು-ನೀರು ಮತ್ತು ಕಾಗೆ
ಎಳ್ಳು-ನೀರು ಮತ್ತು ಕಾಗೆ ಎಳ್ಳು ಮತ್ತು ನೀರು ಕೃತಜ್ಞತೆಯ ಸಂಕೇತ. ಕಾಗೆ ಎಡೆ ಮುಟ್ಟದಿದ್ದರೆ ಪಿತೃಗಳಿಗೆ ತೃಪ್ತಿಯಾಗಿಲ್ಲ ಎಂದು ಆತಂಕಪಡುವ ಅಗತ್ಯವಿಲ್ಲ, ಮನಸ್ಸಿನ ಭಕ್ತಿ ಮುಖ್ಯ.
67
ಹೆಣ್ಣುಮಕ್ಕಳು ಏನು ಮಾಡಬಹುದು?
ಹೆಣ್ಣುಮಕ್ಕಳು ಏನು ಮಾಡಬಹುದು? ಶಾಸ್ತ್ರದ ಪ್ರಕಾರ ಗಂಡುಮಕ್ಕಳೇ ಶ್ರಾದ್ಧ ಮಾಡಬೇಕು. ಗಂಡು ಮಕ್ಕಳಿಲ್ಲದಿದ್ದರೆ ಹೆಣ್ಣುಮಕ್ಕಳು ತಂದೆ-ತಾಯಿಯ ಹೆಸರಲ್ಲಿ ಅನ್ನದಾನ ಹಾಗೂ ಗೋಸೇವೆ (ಗೋದಾನ) ಮಾಡುವುದರಿಂದ ಪಿತೃಋಣ ತೀರಿಸಬಹುದು.
77
ಪಿತೃಪಕ್ಷದಲ್ಲಿ ನೆನಪಿಡಬೇಕಾದ 3 ಮುಖ್ಯ ನಿಯಮಗಳು
ಪಿತೃಪಕ್ಷದಲ್ಲಿ ನೆನಪಿಡಬೇಕಾದ 3 ಮುಖ್ಯ ನಿಯಮಗಳು ಮಹಾಲಯ ಅಮಾವಾಸ್ಯೆ: 15 ದಿನ ತರ್ಪಣ ಬಿಡಲು ಸಾಧ್ಯವಾಗದಿದ್ದರೆ, ‘ಮಹಾಲಯ ಅಮಾವಾಸ್ಯೆ’ಯ ದಿನವಾದರೂ ಕಡ್ಡಾಯವಾಗಿ ಎಳ್ಳು-ನೀರು ಬಿಟ್ಟು ಹಿರಿಯರನ್ನು ನೆನೆಯಿರಿ.
ಸಮಯ (ಕುತಪ ಕಾಲ): ಪಿತೃಕಾರ್ಯವನ್ನು ಮಧ್ಯಾಹ್ನದ ‘ಕುತಪ ಕಾಲ’ದಲ್ಲೇ ಮಾಡಬೇಕು.
ಫೋಟೋ ನಿಯಮ: ಹಿರಿಯರ ಫೋಟೋಗಳನ್ನು ಎಂದಿಗೂ ದೇವರ ಕೋಣೆಯಲ್ಲಿ ಇಡಬಾರದು. ಮನೆಯ ದಕ್ಷಿಣ ದಿಕ್ಕಿನ ಗೋಡೆಯ ಮೇಲೆ ಮಾತ್ರ ಹಾಕಬೇಕು.