ದುಡ್ಡು ಎಲ್ಲರೂ ಸಂಪಾದನೆ ಮಾಡ್ತಾರೆ. ಆದ್ರೆ, ಕೆಲವರು ಮಾತ್ರ ಶ್ರೀಮಂತರಾಗ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯವರು ಒಂದು ರೂಪಾಯಿಯನ್ನು ಕೋಟಿ ರೂಪಾಯಿಯಾಗಿ ಬದಲಾಯಿಸುವ ತಾಕತ್ತು ಹೊಂದಿರುತ್ತಾರೆ. ದುಡಿದ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು ಅನ್ನೋದು ಇವರಿಗೆ ಪಕ್ಕಾ ಗೊತ್ತಿರುತ್ತೆ.
ಜ್ಯೋತಿಷ್ಯ ಪ್ರಕಾರ ಕೆಲವು ರಾಶಿಯವರು ದುಡಿದ ಹಣವನ್ನು ವ್ಯರ್ಥ ಮಾಡದೇ, ಅದನ್ನು ಡಬಲ್ ಮಾಡುವ ಮನಸ್ಥಿತಿಯನ್ನು ಹೊಂದಿರುತ್ತಾರೆ. ಇವರಿಗೆ ಐಷಾರಾಮಿ ಜೀವನವೆಂದ್ರೆ ಇಷ್ಟ, ಹಾಗಂತ ಖರ್ಚಿನ ವಿಚಾರದಲ್ಲೂ ತುಂಬಾ ಬುದ್ದಿವಂತರಂತೆ. ಅಷ್ಟಕ್ಕೂ ಯಾವ ರಾಶಿಯವರು ಈ ವಿಚಾರದಲ್ಲಿ ಬುದ್ದಿವಂತರು. ಈ ಲಿಸ್ಟ್‌ನಲ್ಲಿ ನಿಮ್ಮ ರಾಶಿ ಇದೆಯೇ ಎನ್ನುವುದನ್ನು ಚೆಕ್ ಮಾಡಿ.
26
ವೃಷಭ ರಾಶಿ..
ವೃಷಭ ರಾಶಿಯವರ ಮೇಲೆ ಶುಕ್ರನ ಪ್ರಭಾವ ಇರುತ್ತದೆ. ಇವರು ಐಷಾರಾಮಿ ಜೀವನವನ್ನು ತುಂಬಾ ಇಷ್ಟಪಡ್ತಾರೆ. ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ಇವರು ಕಷ್ಟಪಟ್ಟು ದುಡಿಯುತ್ತಾರೆ. ಅಷ್ಟೇ ಅಲ್ಲ, ದುಡಿದ ಹಣವನ್ನು ಎಲ್ಲಿ ಉಳಿತಾಯ ಮಾಡಬೇಕು ಅನ್ನೋದು ಇವರಿಗೆ ಚೆನ್ನಾಗಿ ಗೊತ್ತಿದೆ. ಐಷಾರಾಮಿ ಜೀವನ ಇಷ್ಟವಿದ್ದರೂ, ಖರ್ಚಿನ ವಿಚಾರದಲ್ಲಿ ಇವರು ತುಂಬಾ ಹುಷಾರಾಗಿರುತ್ತಾರೆ. ಅಗತ್ಯವಿದ್ದರೆ ಮಾತ್ರ ವಸ್ತುಗಳನ್ನು ಖರೀದಿಸುತ್ತಾರೆ. ಖರ್ಚು ಅಥವಾ ಹೂಡಿಕೆ ಮಾಡುವ ಮುನ್ನ ಇವರು ನೂರು ಬಾರಿ ಯೋಚನೆ ಮಾಡ್ತಾರೆ.
36
ವೃಶ್ಚಿಕ ರಾಶಿ
ಹಣವನ್ನು ಹೇಗೆ ಡಬಲ್ ಮಾಡಬೇಕು ಅನ್ನೋದು ಈ ರಾಶಿಯವರಿಗೆ ಪಕ್ಕಾ ಗೊತ್ತಿದೆ. ಎಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಬರುತ್ತೆ ಅಂತ ಇವರು ಚೆನ್ನಾಗಿ ತಿಳಿದುಕೊಂಡಿರುತ್ತಾರೆ. ಇವರು ಎಲ್ಲಿಯೇ ಬಂಡವಾಳ ಹಾಕಿದರೂ ನಷ್ಟ ಮಾಡಿಕೊಳ್ಳುವುದಿಲ್ಲ. ಲಾಭ ಬರುವವರೆಗೂ ಇವರು ಸುಮ್ಮನೆ ಕೂರುವುದಿಲ್ಲ. ನಷ್ಟವನ್ನು ಎದುರಿಸುವ ಧೈರ್ಯ ಇವರಿಗಿದೆ. ಕಷ್ಟಕಾಲದಲ್ಲೂ ಇವರು ಪುಟಿದೆದ್ದು ಸಂಪತ್ತು ಗಳಿಸುತ್ತಾರೆ.
ಶನಿಯ ಪ್ರಭಾವವಿರುವ ಈ ರಾಶಿಯವರು ಶಿಸ್ತು ಮತ್ತು ಕಠಿಣ ಪರಿಶ್ರಮಕ್ಕೆ ಹೆಸರುವಾಸಿ. ಹಣ ಉಳಿತಾಯ ಮಾಡುವವರ ಪಟ್ಟಿಯಲ್ಲಿ ಇವರು ಯಾವಾಗಲೂ ಮೊದಲ ಸ್ಥಾನದಲ್ಲಿರುತ್ತಾರೆ. ಇವರು ಪ್ರತಿಯೊಂದು ರೂಪಾಯಿಯನ್ನೂ ಲೆಕ್ಕ ಹಾಕ್ತಾರೆ. ಯಾವುದೇ ಅನಗತ್ಯ ಖರ್ಚುಗಳಿಲ್ಲದೆ ಎಚ್ಚರಿಕೆಯಿಂದ ಜೀವನ ನಡೆಸುವುದು ಇವರ ವಿಶೇಷತೆ. ಇವರು ಬರೀ ಹಣ ಕೂಡಿಡುವುದಿಲ್ಲ, ಅದನ್ನು ಎಲ್ಲಿ ಹೂಡಿಕೆ ಮಾಡಬೇಕು ಅನ್ನೋದನ್ನೂ ಚೆನ್ನಾಗಿ ಅರಿತಿರುತ್ತಾರೆ.
56
ಕನ್ಯಾ ರಾಶಿ...
ಬುಧ ಗ್ರಹದ ಒಡೆತನ ಹೊಂದಿರುವ ಕನ್ಯಾ ರಾಶಿಯವರು ಬಜೆಟ್ ಮಾಡುವುದರಲ್ಲಿ ಮತ್ತು ಅದನ್ನು ನಿಭಾಯಿಸುವುದರಲ್ಲಿ ಎತ್ತಿದ ಕೈ. ಇವರು ಪ್ರತಿದಿನ ತಮ್ಮ ಖರ್ಚುಗಳ ಮೇಲೆ ಕಣ್ಣಿಟ್ಟಿರುತ್ತಾರೆ. ಅನಗತ್ಯ ಖರ್ಚುಗಳಿಗೆ ಬ್ರೇಕ್ ಹಾಕ್ತಾರೆ. ಮಾರುಕಟ್ಟೆಯಲ್ಲಿ ಬೆಲೆಗಳು ಬದಲಾದರೂ ಇವರು ತಮ್ಮ ಉಳಿತಾಯದ ಪ್ಲಾನ್ ಬದಲಾಯಿಸುವುದಿಲ್ಲ. ಲಾಭ ಗಳಿಸುವ ಬುದ್ಧಿವಂತಿಕೆಯಿಂದ ಇವರು ಯಾವಾಗಲೂ ಮುಂದೆ ಇರುತ್ತಾರೆ.
66
ಧನುಸ್ಸು ರಾಶಿ..
ಸಂಪತ್ತಿನ ಅಧಿಪತಿಯಾದ ಗುರು ಗ್ರಹವೇ ಈ ರಾಶಿಗೂ ಅಧಿಪತಿಯಾಗಿರುವುದು ವಿಶೇಷ. ಇವರು ತಮ್ಮ ಕಷ್ಟದ ದುಡಿಮೆಗೆ ತುಂಬಾ ಗೌರವ ಕೊಡ್ತಾರೆ. ಹಣವನ್ನು ಎಂದಿಗೂ ಪೋಲು ಮಾಡುವುದಿಲ್ಲ. ಇವರು ಯಾವಾಗಲೂ ಜಾಣತನದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ತಮ್ಮ ಪ್ರಯತ್ನಗಳಲ್ಲಿ ಸೋಲನ್ನು ಇವರು ಒಪ್ಪಿಕೊಳ್ಳುವುದಿಲ್ಲ. ನಿರಂತರವಾಗಿ ಶ್ರಮಿಸಿ ಇವರು ಯಶಸ್ಸು ಸಾಧಿಸುತ್ತಾರೆ.