ಕಲರ್ಸ್ ಕನ್ನಡದ 'ಭಾರ್ಗವಿ ಎಲ್ಎಲ್ಬಿ' ಧಾರಾವಾಹಿಯಲ್ಲಿ, ತನ್ನ ಶತ್ರುವಿನ ಮಗನನ್ನೇ ಮದುವೆಯಾಗಿ ಸಂಕಷ್ಟದಲ್ಲಿರುವ ಭಾರ್ಗವಿಯ ಕಥೆಯ ನಡುವೆ, ನವರಾತ್ರಿ ವಿಶೇಷ ಸಂಚಿಕೆಯಲ್ಲಿ ಬ್ರಹ್ಮಚಾರಿಣಿ ದೇವಿಯ ಅವತಾರವನ್ನು ನಟಿ ರಾಧಾ ಭಗವತಿ ನಿರೂಪಿಸಲಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಭಾರ್ಗವಿ ಎಲ್ಎಲ್ಬಿ ಸೀರಿಯಲ್ ರೋಚಕ ತಿರುವಿನತ್ತ ಸಾಗಿದೆ. ತಾನು ಪ್ರೀತಿಸ್ತಿರೋದು ತನ್ನ ಅಜನ್ಮಶತ್ರು ಜೆಪಿಪಾಟೀಲ್ ಮಗ ಎನ್ನುವುದನ್ನು ತಿಳಿಯದೇ ಪ್ರೀತಿಯಲ್ಲಿ ಬಿದ್ದು, ಮದುವೆಯನ್ನೂ ಆಗಿದ್ದಾಳೆ ಭಾರ್ಗವಿ. ಆದರೆ ಈಗ ಸದ್ಯದ ಅರಿವಾಗಿ ಸಂಕಟ ಅನುಭವಿಸುತ್ತಿದ್ದಾಳೆ. ಗಂಡ ಅಪಾರ ಪ್ರೀತಿ ಮಾಡಿದರೂ, ಆತ ಮೋಸ ಮಾಡಿದ್ದಾನೆ ಎಂದುಕೊಂಡಿದ್ದಾಳೆ ಭಾರ್ಗವಿ. ಮನೆಯಲ್ಲಿ ಯಾರಿಗೂ ಹೇಳದೇ ಮದುವೆಯಾಗಿದ್ದಕ್ಕೆ ಅಮ್ಮನ ಮನೆಯಿಂದಲೂ ಹೊರಕ್ಕೆ ಹಾಕಲ್ಪಟ್ಟ ಭಾರ್ಗವಿಗೆ ಗಂಡನ ಮನೆಯಲ್ಲಿಯೂ ಸುಖವಿಲ್ಲ. ಅವಳ ಮುಂದಿನ ಗತಿಯೇನು ಎನ್ನುವುದು ಇನ್ನಷ್ಟೇ ನೋಡಬೇಕಿದೆ.
27
ಬ್ರಹ್ಮಚಾರಿಣಿ ಅವತಾರದಲ್ಲಿ 'ಭಾರ್ಗವಿ'
ಅದೇ ಸಂದರ್ಭದಲ್ಲಿ ಈಗ ನವರಾತ್ರಿ ಆರಂಭವಾಗಿದೆ. ಇಂದು (ಸೆಪ್ಟೆಂಬರ್ 23) ನವರಾತ್ರಿಯ ಎರಡನೆಯ ದಿನ. ಈ ದಿನದಂದು ಬ್ರಹ್ಮಚಾರಿಣಿಯ ಅವತಾರದಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕಲರ್ಸ್ ಕನ್ನಡ ವಾಹಿನಿಯು ನವರಾತ್ರಿಯ ಸಂದರ್ಭದಲ್ಲಿ ನವದುರ್ಗೆಯರ ಶಕ್ತಿಯ ಬಗ್ಗೆ ತೋರಿಸುತ್ತಿದೆ. ಪ್ರತಿದಿನವೂ ಒಂದೊಂದು ಅವತಾರದಲ್ಲಿ ದುರ್ಗೆ ಕಾಣಿಸಿಕೊಳ್ಳಲಿದ್ದು, ದುರ್ಗೆಯ ಆ ಅವತಾರವನ್ನು ಕಿರುತೆರೆ ನಟಿಯರು ಮಾಡಲಿದ್ದಾರೆ..
37
ಬ್ರಹ್ಮಚಾರಿಣಿಯಾದ ನಟಿ
ಈ ಕೊರವಂಜಿಯೇ ಬ್ರಹ್ಮಚಾರಿಣಿ. ಆಕೆ ಹೆಣ್ಣಿನ ಮಹತ್ವವನ್ನು ಸಾರುತ್ತಾಳೆ. ಆದರೆ ಆ ಮಹಿಳೆಗೆ ತನ್ನ ಗಂಡನ ಆಕ್ರೋಶದ ಮುಂದೆ ಇದ್ಯಾವುದೂ ಕೇಳಿಸುವುದಿಲ್ಲ. ದೇವಿ ಇರುವುದೇ ಹೌದಾಗಿದ್ದರೆ ನನಗೆ ಗಂಡುಮಗು ಕೊಡುವಂತೆ ಹೇಳು, ಇಲ್ಲವೇ ನನ್ನ ಗಂಡ ಮತ್ತು ಆತನ ಮನೆಯವರಿಗೆ ಬುದ್ಧಿ ಹೇಳಿಸು ಎಂದು ಚಾಲೆಂಜ್ ಮಾಡಿ ಹೋಗುತ್ತಾಳೆ.
ಮುಂದೇನಾಗುತ್ತೆ? ದುರ್ಗಾ ದೇವಿ ಏನು ಮಾಡುತ್ತಾಳೆ ಎಂದು ತಿಳಿಯಲು ಇಂದು (ಸೆ.23) ರಾತ್ರಿ 10 ಗಂಟೆಗೆ ಕಲರ್ಸ್ ಕನ್ನಡ ಚಾನೆಲ್ ನೋಡಬೇಕಿದೆ.
57
ನಟಿ ರಾಧಾ ಭಗವತಿ ಕುರಿತು...
ಇನ್ನು ನಟಿ, ರಾಧಾ ಭಗವತಿ ಕುರಿತು ಹೇಳುವುದಾದರೆ, ರಾಮ್ಜಿ ನಿರ್ದೇಶನದ ‘ರಾಮಾಚಾರಿ’ ಧಾರಾವಾಹಿಯಲ್ಲಿ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಿರುತೆರೆಯಿಂದ ಕಳೆದ ವರ್ಷ ರಿಲೀಸ್ ಆದ ವಸಂತಕಾಲದ ಹೂವುಗಳು ಚಿತ್ರದಲ್ಲಿ ಇವರು ಅಭಿನಯಿಸುವ ಮೂಲಕ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟರು. ವಿಜಯಪುರದ ರಾಧಾ ಅವರು, ಈ ಚಿತ್ರದಲ್ಲಿ ಸುಮಾ ಹೆಸರಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಾದ ಬಳಿಕ ಈಗ ಮತ್ತೆ ಕಿರುತೆರೆಗೆ ಪ್ರವೇಶ ಪಡೆದು ಅಮೃತಧಾರೆಯಲ್ಲಿ ನಟಿಸಿದರು.
67
ಎಂಥ ಪಾತ್ರವನ್ನೂ ಸಲೀಸಾಗಿ ಮಾಡುವ ನಟಿ
ಮಾಡೆಲ್ ಕೂಡ ಆಗಿರುವ ಇವರಿಗೆ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುವ ಆಸೆ ಎಂದಿದ್ದಾರೆ. ಎಂಥ ಪಾತ್ರ ಕೊಟ್ಟರೂ ಸಲೀಸಾಗಿ ಮಾಡುವ ಇವರಿಗೆ ಉಜ್ವಲ ಭವಿಷ್ಯವಿದೆ ಎನ್ನುವುದು ಸಿನಿ ಪ್ರಿಯರ ಅಭಿಮತ. ಅಂದಹಾಗೆ, ರಾಧಾ ಅವರು ನಟಿ ರಾಧಾ ಭಗವತಿ ಅವರು ‘ಆ 90 ದಿನಗಳು’, ‘ವಸಂತ ಕಾಲದ ಹೂಗಳು’, ‘ಅಪಾಯವಿದೆ ಎಚ್ಚರಿಕೆ’ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಇನ್ನು ‘ಬಾನಿಗೊಂದು ತಾರೆ’ ಮ್ಯೂಸಿಕ್ ವಿಡಿಯೋದಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ.
77
ಹುಡುಕಿ ಬರುತ್ತಿವೆ ಅವಕಾಶ
ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ 'ಅಪಾಯವಿದೆ ಎಚ್ಚರಿಕೆ' ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಎಸ್. ನಾರಾಯಣ್ ನಿರ್ದೇಶನದ 'ಒಂದ್ಸಲ ಮೀಟ್ ಮಾಡೋಣ' ಸಿನಿಮಾದಲ್ಲಿ ನಾಯಕನ ತಂಗಿಯಾಗಿ ನಟಿಸುತ್ತಿದ್ದಾರೆ. ಸದ್ಯ ಒಂದಾದ ಮೇಲೆ ಒಂದರಂತೆ ಅವಕಾಶಗಳನ್ನು ಪಡೆಯುತ್ತಿದ್ದಾರೆ.