ಇಷ್ಟಕ್ಕೂ ಯಾರೀ ಬಾಬಾ ವಂಗಾ?
ಬಲ್ಗೇರಿಯಾಕ್ಕೆ ಸೇರಿದ ವಂಜೆಲಿಯಾ ಪಾಂಡೇವಾ ಗುಸ್ಟೆರೋವಾ ಜಗತ್ತಿನಾದ್ಯಂತ ಬಾಬಾ ವಂಗಾ ಅಂತ ಪ್ರಚಾರ ಪಡೆದಿದ್ದಾರೆ. ಕೆಲ ವರ್ಷಗಳ ಹಿಂದೆ ಭವಿಷ್ಯದಲ್ಲಿ ಏನು ನಡೆಯಲಿದೆ ಅಂತ ಅವರು ಹೇಳಿದ ಬಹಳಷ್ಟು ವಿಷಯಗಳು ನಿಜವಾಗ್ತಾ ಬರ್ತಿವೆ. ಹುಟ್ಟಿನಿಂದಲೇ ಅಂಧುರಾಗಿದ್ದ ಬಾಬಾ ವಂಗಾ ಭವಿಷ್ಯವನ್ನು ಹೇಗೆ ಊಹಿಸಿದ್ರು ಅನ್ನೋದೇ ಆಸಕ್ತಿಕರವಾದ ವಿಷಯ. ಅವರು ಬಲ್ಗೇರಿಯಾದ ಬೆಲಾಸಿಕಾ ಪರ್ವತಗಳಲ್ಲಿನ ರೂಪಿಟ್ ಪ್ರದೇಶದಲ್ಲಿ ಜಾಸ್ತಿ ಕಾಲ ಇದ್ದರು.
ಮದುವೆಯಾದ ಮೇಲೆ ಕೆಲವು ವರ್ಷ ಕಾಣಿಸದೇ ಹೋದ ಬಾಬಾ ವಂಗಾ ಸುಳಿವು ಆಮೇಲೆ ಮತ್ತೆ ಸಿಕ್ಕಿತು. 1911 ಜನವರಿ 31ಕ್ಕೆ ಹುಟ್ಟಿದ ಅವರು, 1996 ಆಗಸ್ಟ್ 11ಕ್ಕೆ ಮರಣ ಹೊಂದಿದರು. 1970, 1980ರಲ್ಲಿ ಪೂರ್ವ ಯುರೋಪಿನಲ್ಲಿ ಅವರಿಗೆ ಬಹಳ ಹೆಸರು ಬಂತು. ಬಾಬಾ ವಂಗಾ ಹೇಳಿದ 2001 ಅಮೆರಿಕಾ ಟ್ವಿನ್ ಟವರ್ಸ್ ದಾಳಿ, ಕೊರೋನಾ ವೈರಸ್ ರೀತಿಯವು ನಿಜವಾಗ್ಲೂ ನಡೆದಿವೆ. ಇದರಿಂದ ಅವರು ಹೇಳಿದ ವಿಷಯಗಳ ಮೇಲೆ ಜಗತ್ತಿನಾದ್ಯಂತ ಚರ್ಚೆ ನಡೀತಿರುತ್ತದೆ.