ಇದು ಸಾವಿರ ವರ್ಷಗಳ ಸಂಪ್ರದಾಯ
ಈ ಸಂಪ್ರದಾಯವನ್ನು ಪುರಿ ಜಗನ್ನಾಥ ದೇವಾಲಯದಲ್ಲಿ ಸುಮಾರು 1000 ವರ್ಷಗಳಿಂದ ಆಚರಿಸಲಾಗುತ್ತಿದೆ. ಪುರಿಯಲ್ಲಿ ವಾರ್ಷಿಕ ಜಾತ್ರೆ ನಡೆಯುತ್ತೆ, ಈ ಸಮಯದಲ್ಲಿ ಜಗನ್ನಾಥನು ಏಳು ದಿನಗಳ ಕಾಲ ಗುಂಡಿಚಾ ದೇವಸ್ಥಾನಕ್ಕೆ ತೆರಳುತ್ತಾನೆ. ಅಂದರೆ ಜಗನ್ನಾಥ ಲಕ್ಷ್ಮೀ ದೇವಿಯನ್ನು ಬಿಟ್ಟು ಸುಭದ್ರೆಯನ್ನು ಕಾಣಲು ಹೋಗಿರುತ್ತಾನೆ. ಭಗವಾನ್ ಜಗನ್ನಾಥನು ಗುಂಡಿಚಾ ದೇವಸ್ಥಾನದಿಂದ ಜಗನ್ನಾಥ ದೇವಾಲಯಕ್ಕೆ ಹಿಂದಿರುಗಿದಾಗ, ಅವನ ಪತ್ನಿ ಲಕ್ಷ್ಮಿ ದೇವಿ ಜಗನ್ನಾಥನ ಮೇಲೆ ಕೋಪಗೊಂಡಿರುತ್ತಾರೆ. ಲಕ್ಷ್ಮೀ ದೇವಿಯ ಕೋಪವನ್ನು ಕಡಿಮೆ ಮಾಡಲು, ಹಾಗೂ ಆಕೆಯನ್ನು ಮೆಚ್ಚಿಸಲು, ಭಗವಾನ್ ಜಗನ್ನಾಥನು ಲಕ್ಷ್ಮೀ ದೇವಿಗೆ ರಸಗುಲ್ಲಾವನ್ನು ತಿನ್ನಿಸಿ ಸಮಾಧಾನಪಡಿಸುತ್ತಾರೆ.