ಈಗ ನೀವು ಹೆಂಡತಿ/ ಗಂಡನ ಮೇಲೂ ಸ್ಪೈ ನಡೆಸಬಹುದು!

By Suvarna News  |  First Published Apr 8, 2021, 4:27 PM IST

ಫ್ರೀಯಾಗಿ ಸಿಗುವ ಆಪ್‌ಗಳನ್ನು ಬಳಸಿಕೊಂಡು ಈಗ ನೀವೂ ನಿಮ್ಮ ಗಂಡ ಅಥವಾ ಹೆಂಡತಿ, ಮಕ್ಕಳು ಅಥವಾ ನಿಮ್ಮ ಕಂಪನಿಯ ಸಿಬ್ಬಂದಿ- ಹೀಗೆ ಯಾರ ಮೇಲೂ ಬೇಹುಗಾರಿಕೆ ನಡೆಸಬಹುದು!


ನಿಮಗೆ ನಿಮ್ಮ ಗಂಡನ ಮೇಲೆ ಅಥವಾ ಹೆಂಡತಿ ಮೇಲೆ ಯಾವುದೋ ಅನುಮಾನ ಇದೆ ಎಂದಿಟ್ಟುಕೊಳ್ಳಿ. ಅದನ್ನು ಪರೀಕ್ಷಿಸೋಕೆ ಈಗ ಒಂದು ಸುಲಭವಾದ ದಾರಿಯಿದೆ. ಅದೇ ಮೊಬೈಲ್ ಸ್ಪೈಯಿಂಗ್. ಆಂಡ್ರಾಯ್ಡ್ ಅಥವಾ ಐಫೋನ್- ಎರಡಕ್ಕೂ ಸೂಕ್ತವಾದ ಹಲವಾರು ಆಪ್‌ಗಳು ಈಗ ಲಭ್ಯವಿವೆ. ಇದನ್ನು ನೀವು ಯಾರ ಚಟುವಟಿಕೆಯ ಮೇಲೆ ಬೇಹುಗಾರಿಕೆ ಮಾಡಬೇಕು ಎಂದಿದ್ದೀರೋ ಅವರ ಮೊಬೈಲ್‌ನಲ್ಲಿ ಇನ್‌ಸ್ಟಾಲ್‌ ಮಾಡಿಕೊಂಡು ಅವರನ್ನು ವರ್ಚುವಲ್ ಆಗಿ ಹಿಂಬಾಲಿಸಿ ಪರೀಕ್ಷಿಸಬಹುದು.
ಇಂಥ ಹಲವಾರು ಆಪ್‌ಗಳಿವೆ. ಕೆಲವು ಬೆಸ್ಟ್ ಹಾಗೂ ಉಚಿತವಾಗಿ ಸಿಗುವ ಆಪ್‌ಗಳು ಹೀಗಿವೆ. ಅವುಗಳಲ್ಲಿ ಯಾವ್ಯಾವ ಸೌಲಭ್ಯಗಳನ್ನು ಪಡೆಯಬಹುದು, ಹೇಗೆ ಎನ್ನುವ ಮಾಹಿತಿ ಇಲ್ಲಿದೆ:

ಎಂಸ್ಪೈ

Tap to resize

Latest Videos

undefined

ಇದನ್ನು ಇನ್‌ಸ್ಟಾಲ್ ಮಾಡಿಕೊಂಡರೆ ನಿಮ್ಮ ಮಕ್ಕಳ ಚಟುವಟಕೆಯನ್ನು ಸ್ಪೈ ಮಾಡಬಹುದು. ಇದು ಬ್ಯಾಕ್‌ಗ್ರೌಂಡ್ ಮೋಡ್‌ನಲ್ಲಿ ಕೆಲಸ ಮಾಡುತ್ತದೆ. ಅಂದರೆ ಈ ಆಪ್ ಇದೆ ಅಂತಲೇ ನೀವು ಯಾವ ಫೋನನ್ನ ಟ್ರ್ಯಾಕ್ ಮಾಡುತ್ತಿದ್ದೀರೋ ಆ ಫೋನ್ ಬಳಸುವವರಿಗೆ ಗೊತ್ತೇ ಆಗುವುದಿಲ್ಲ. ಪ್ರತಿ ಐದು ನಿಮಿಷಕ್ಕೊಮ್ಮೆ ಈ ಫೋನ್‌ನಲ್ಲಿ ಏನಾಗುತ್ತಿದೆ ಎಂಬ ನೋಟಿಫಿಕೇಷನ್ ನಿಮಗೆ ಬರುತ್ತದೆ. ಬಹುಭಾಷಾ ಸೌಲಭ್ಯವಿದೆ. ಆ ಫೋನ್‌ನಿಂದ ಹೊರಹೋಗುವ ಮತ್ತು ಒಳಬರುವ ಮೆಸೇಜ್‌ಗಳನ್ನು ನೀವು ಟ್ರ್ಯಾಕ್ ಮಾಡಬಹುದು.

ವಾಟ್ಸಾಪ್‌ ವೆಬ್‌​ನಲ್ಲೂ ಇನ್ನು ವಿಡಿಯೋ, ಸಾಮಾನ್ಯ ಕರೆ ...

ಕ್ಲೆವ್‌ಗಾರ್ಡ್

ಯಾವುದೇ ಟಾರ್ಗೆಟ್‌ ಫೋನ್‌ನ ಜಿಪಿಎಸ್ ಟ್ರ್ಯಾಕ್ ಮಾಡಬಹುದು, ವೈಫೈ ಕನೆಕ್ಷನ್ ಚೆಕ್ ಮಾಡಬಹುದು. ಸ್ಕ್ರೀನ್‌ಶಾಟ್‌ಗಳನ್ನು ರಿಮೋಟ್ ಫೋನ್‌ನಿಂದಲೇ ಹೊಡೆದುಕೊಳ್ಳಬಹುದು. ವೈಫೈ ಅಥವಾ ತ್ರಿಜಿ ಅಥವಾ 4ಜಿ ನೆಟ್‌ವರ್ಕ್ ಮೂಕ ರಿಯಲ್ ಟೈಮ್ ಡೇಟಾ ಕಲೆಕ್ಟ್ ಮಾಡಬಹುದು. ಫೋನ್ ಕಾಲ್‌ಗಳನ್ನು ರೆಕಾರ್ಡ್ ಮಾಡಬಹುದು. 

ಕ್ರೆಡಿಟ್ ಕಾರ್ಡ್‌ಗೂ ಕನ್ನ, ಲಕ್ಷ ಕಳೆದುಕೊಂಡ ವಕೀಲ... ಇಂಥ ಸಂದೇಶ ಬಂದ್ರೆ ಜೋಕೆ! ...
 

ಯುಮೊಬಿಕ್ಸ್

ಇದನ್ನು ಅಳವಡಿಸಿದರೆ ನೀವು ಟಾರ್ಗೆಟ್ ಫೋನ್‌ನ ಕಂಪ್ಲೀಟ್ ಹಿಸ್ಟರಿಯನ್ನೇ ಜಾಲಾಡಬಹುದು. ಆ ಪೋನ್‌ನಿಂದ ಎಲ್ಲಿಗೆ ಫೋನ್ ಹೋಗುತ್ತಿದೆ, ಎಲ್ಲಿಂದ ಅದಕ್ಕೆ ಬರುತ್ತಿದೆ, ಮೆಸೇಜ್‌ಗಳು ಎಲ್ಲಿಂದ ಬರುತ್ತವೆ ಹೋಗುತ್ತಿವೆ, ಜಿಪಿಎಸ್ ಎಲ್ಲಿ ಹೋಗುತ್ತಿದೆ, ಬ್ರೌಸರ್ ಹಿಸ್ಟರಿ ಏನೇನು- ಹೀಗೆ ಎಲ್ಲವೂ ತಿಳಿದುಬಿಡುತ್ತದೆ. ನಿಮ್ಮ ಮಗುವಿನ ಕೈಯಲ್ಲಿರುವ ಫೋನನ್ನು ಟ್ರ್ಯಾಕ್ ಮಾಡಲು ಇದು ಬೆಸ್ಟ್. ಹಾಗೇ ನಿಮ್ಮ ಗಂಡನ ಬಗ್ಗೆ ಅನುಮಾನ ಇದ್ದರೆ ಆತನ ಫೋನ್‌ನಲ್ಲೂ ಇನ್‌ಸ್ಟಾಲ್ ಮಾಡಬಹುದು. ಬ್ಯಾಕ್‌ಗ್ರೌಂಡ್‌ನಲ್ಲಿ ವರ್ಕ್ ಆಗುವುದರಿಂದ ಆತನಿಗೆ ತಿಳಿಯುವುದೇ ಇಲ್ಲ.

ಫ್ಲೆಕ್ಸಿಸ್ಪೈ

ಈ ಆಪ್ ಅಳವಡಿಸಿಕೊಂಡರೆ ನೀವು ನಿಮ್ಮ ಕಂಪಿ ಉದ್ಯೋಗಿಗಳ ಜಾತಕವನ್ನೂ ಬರೆಯಬಹುದು. ಸರಿಯಾಗಿ ಕೆಲಸ ಮಾಡುತ್ತಿದ್ದಾರೆಯೇ ಇಲ್ಲವೇ, ಅಥವಾ ಕೆಲಸದ ಸಮಯದಲ್ಲಿ ಮೂವಿ ನೋಡ್ತಾರಾ, ಇದನ್ನೆಲ್ಲ ಟ್ರ್ಯಾಕ್ ಮಾಡಬಹುದು. ಜೊತೆಗೇ ಗಂಡ ಹೆಂಡರಿಯನ್ನೂ, ಹೆಂಡತಿ ಗಂಡನನ್ನೂ ಈ ಆಪ್‌ಗಳ ಮೂಲಕ ಟ್ರ್ಯಾಕ್ ಮಾಡಬಹುದು. ಗಂಡನ ವಾಟ್ಸ್ಯಾಪ್ ಚಾಟ್ ಹಿಸ್ಟರಿಯೆಲ್ಲ ಅವನು ಅಳಿಸಿಹಾಕಿದರೂ ಇವಳಿಗೆ ಗೊತ್ತಾಗಿಬಿಡುತ್ತೆ. ಹಾಗೇ ಈ ಆಪ್ ಬ್ಯಾಕ್‌ಗ್ರೌಂಡ್‌ನಲ್ಲಿ ಕೆಲಸ ಮಾಡುವುದರಿಂದ, ಗಂಡನಿಗೆ ಗೊತ್ತೇ ಆಗೊಲ್ಲ. 

ಭಾರತದ ಮಹಿಳೆಯರು ಹೆಚ್ಚು ಮಾತನಾಡುವ ವಿಷಯ ಯಾವುದು? ಟ್ವಿಟರ್ ವರದಿ ಬಹಿರಂಗ! ...

ಸ್ಪೈಐನ್
ಈ ಆಪ್‌ನಿಂದ ನೀವು ಟಾರ್ಗೆಟ್ ಫೋನ್ ಹೊಂದಿರುವವರ ವಾಟ್ಸ್ಯಾಪ್ ಮೆಸೇಜ್‌ಗಳನ್ನೂ ಚೆಕ್ ಮಾಡಬಹುದು. ಬ್ರೌಸಿಂಗ್ ಹಿಸ್ಟರಿ ಚೆಕ್ ಮಾಡಬಹುದು. ನಿಮ್ಮ ಹೆಂಡತಿ ಯಾವ ವೆಬ್‌ಪೇಜ್ ವಿಸಿಟ್ ಮಾಡಿದ್ದಾಳೆ ಎಂದು ತಿಳಿಯಬಹುದು. ಯಾವ ಮೆಸೇಜ್‌ಗಳನ್ನು, ಎಷ್ಟು ಹೊತ್ತಿಗೆ, ಯಾರಿಗೆ ಕಳಿಸಲಾಗಿದೆ ಹಾಗೂ ಯಾರಿಂದ ಪಡೆಯಲಾಗಿದೆ ಎಂಬುದನ್ನೂ ಈ ಆಪ್ ತಿಳಿಸುತ್ತದೆ. ಯಾವುದಾದರೂ ಮೆಸೇಜ್ ಅಥವಾ ಫೋಟೊಓವನ್ನು ಡಿಲೀಟ್ ಮಾಡಲಾಗಿದೆ ಎಂಬುದ ನಿಮಗೆ ತಿಳಿದರೆ, ನಿಮಗೆ ಅದರ ಮೇಲೆ ಸಂಶಯವಿದ್ದರೆ, ನೀವು ನಿಮ್ಮ ಫೋನ್‌ನಿಂದ ಅದನ್ನು ಕೂಡಲೇ ಪಡೆದುಕೊಳ್ಳಬಹುದು.

click me!