ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಲಾವಾ ಇತ್ತೀಚೆಗಷ್ಟೇ ಭಾರತೀಯ ಮಾರುಕಟ್ಟೆಗೆ ಮೂರು ಟ್ಯಾಬ್‌ಗಳನ್ನು ರಿಲೀಸ್ ಮಾಡಿದೆ. ಈ ಪೈಕಿ ಒಂದು ಟ್ಯಾಬ್ಲೆಟ್ ಅನ್ನು ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಈ ಮೂರು ಟ್ಯಾಬ್ಲೆಟ್‌ಗಳ ಬೆಲೆಯೂ ತುಂಬ ಕಡಿಮೆ ಇದೆ. ಜೊತೆಗೆ ಅತ್ಯುತ್ತಮ ವಿಶೇಷತೆಗಳನ್ನು ಇವು ಒಳಗೊಂಡಿವೆ.
ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಮತ್ತು ಭಾರತೀಯ ಮೂಲದ ಲಾವಾ ಕಂಪನಿಯ ಮೂರು ಟ್ಯಾಬ್‌ಗಳನ್ನು ಬಿಡುಗಡೆ ಮಾಡಿದೆ. ಭಾರತೀಯ ಮಾರುಕಟ್ಟೆಗೆ ಇತ್ತೀಚೆಗಷ್ಟೇ, ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾದ ಲಾವಾ ಮ್ಯಾಗ್ನಮ್ ಎಕ್ಸ್ಎಲ್, ಲಾವಾ ಔರಾ ಮತ್ತು ಲಾವಾ ಐವೋರಿ ಟ್ಯಾಬ್‌ಗಳನ್ನು ಲಾಂಚ್ ಮಾಡಿದೆ.
ಶೀಘ್ರ ಭಾರತಕ್ಕೆ ಮೊಟೋ ಜಿ40 ಫ್ಯೂಸನ್ ಸ್ಮಾರ್ಟ್‌ಫೋನ್?
undefined
ಭಾರತೀಯ ಮೂಲದ ಲಾವಾ ಕಂಪನಿ, ಗ್ರಾಹಕರಿಗೆ ಹೊರೆಯಾಗದಂಥ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಯಶಸ್ವಿಯಾಗುತ್ತ ಬಂದಿದೆ. ಇದೀಗ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಟ್ಯಾಬ್ ಕೂಡ ರಿಲೀಸ್ ಮಾಡಿದೆ. ಕಂಪನಿಯು ಭಾರತ ಮಾತ್ರವಲ್ಲದೇ ಬಾಂಗ್ಲಾದೇಶ, ಶ್ರೀಲಂಕ, ಪಾಕಿಸ್ತಾನ ಸೇರಿ ಇತರ ಹಲವು ರಾಷ್ಟ್ರಗಳಲ್ಲಿ ತನ್ನ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಹೊಂದಿದೆ.
ಈಗ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಮೂರು ಟ್ಯಾಬ್‌ಗಳು ತುಂಬಾ ತುಟ್ಟಿಯಾಗಿಯೇನೂ ಇಲ್ಲ. ಇವು ಬಜೆಟ್ ಟ್ಯಾಬ್‌ಗಳೆಂದು ಹೇಳಬಹುದು. ಲಾವಾ ಮ್ಯಾಗ್ನಮ್ ಎಕ್ಸ್ ಎಲ್ ಬೆಲೆ 15,499 ರೂಪಾಯಿ ಇದ್ದು, 11,999 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ಲಾವಾ 12,999 ರೂಪಾಯಿ ಇದ್ದು ಇ ಕಮರ್ಷಿಯಲ್ ತಾಣಗಳಲ್ಲಿ 9,999 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಅದೇ ರೀತಿ ಲಾವಾ ಐವೋರಿ ಟ್ಯಾಬ್ ಬೆಲೆ 9,499 ರೂಪಾಯಿ ಇದ್ದು, 7,399 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ವಿಶೇಷ ಎಂದರೆ ಈ ಎಲ್ಲ ಮೂರ ಟಾಬ್‌ಗಳು 4ಜಿ ಕನೆಕ್ಟಿವಿಟಿಗೆ ಸಪೋರ್ಟ್ ಮಾಡುತ್ತವೆ.
ಲಾವಾ ಮ್ಯಾಗ್ನಮ್ ಎಕ್ಸ್ ಎಲ್, ಲಾವಾ ಔರಾ ಮತ್ತು ಲಾವಾ ಐವೋರಿ ಮೂರು ಟ್ಯಾಬ್‌ಗಳು ಡುಯಲ್ ಸಿಮ್ ಕನೆಕ್ಟಿವಿಟಿಯನ್ನು ಹೊಂದಿವೆ. ಆಂಡ್ರಾಯ್ಡ್ 10 ಆಪರೇಟಿಂಗ್ ಸಾಫ್ಟ್‌ವೇರ್ ಆಧರಿತವಾಗಿವೆ. ಈ ಮೂರು ಟ್ಯಾಬ್‌ಗಳ ಪೈಕಿ, ಲಾವಾ ಮ್ಯಾಗ್ನಮ್ ಎಕ್ಸ್ ಎಲ್ ಟ್ಯಾಬ್ 10.1 ಇಂಚ್ ಎಚ್‌ಡಿ ಡಿಸ್‌ಪ್ಲೇ ಅಳವಡಿಸಿಕೊಂಡಿದೆ. ಹಾಗೆಯೇ ಲಾವಾ ಔರಾ 8 ಇಂಚ್ ಮತ್ತು ಲಾವಾ ಐವೋರಿ 7 ಇಂಚ್ ಡಿಸ್‌ಪ್ಲೇಯನ್ನು ಒಳಗೊಂಡಿವೆ.
ಆಧಾರ್ ಜೊತೆ ಪಾನ್ ಕಾರ್ಡ್ ಲಿಂಕ್ ಮಾಡಿದವರು ಮತ್ತೆ ಮಾಡಬೇಕಾ?
ಇನ್ನು ಲಾವಾ ಮ್ಯಾಗ್ನಮ್ ಎಕ್ಸ್ಎಳ್ ಮತ್ತು ಔರಾ ಟ್ಯಾಬ್‌ಗಳಲ್ಲಿ ಕ್ವಾಡ್ ಕೋರ್ ಮೀಡಿಯಾ ಟೆಕ್ ಪ್ರೊಸೆಸರ್ ಇದ್ದು, ಲಾವಾ ಐವೋರಿ ಟ್ಯಾಬ್‌ನಲ್ಲಿ ಕ್ವಾಡ್ ಕೋರ್ ಮೀಡಿಯಾ ಟೆಕ್ 1.3 ಗೀಗಾ ಹರ್ಡ್ಸ್ ಪ್ರೊಸೆರ್ ನೀಡಲಾಗಿದೆ. ಈ ಮೂರು ಟ್ಯಾಬ್ಲೆಟ್‌ಗಳು 2 ಜಿಬಿ ರ್ಯಾಮ್ ರ್ಯಾಮ್ ಹೊಂದಿವೆ ಮತ್ತು ಲಾವಾ ಮ್ಯಾಗ್ನಮ್ ಎಕ್ಸ್ಎಲ್ ಮತ್ತು ಔರಾ ಸ್ಮಾರ್ಟ್‌ಫೋನ್‌ಗಳು 32 ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿವೆ. ಹಾಗೆಯೇ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಐವೋರಿ ಟ್ಯಾಬ್‌ಗೆ 16 ಸ್ಟೋರೇಜ್ ಸಾಮರ್ಥ್ಯವಿದೆ. ಜೊತೆಗೆ ಈ ಮೂರು ಟ್ಯಾಬ್‌ಗಳು 256 ಜಿಬಿವರೆಗೂ ಮೆಮೋರಿಯನ್ನು ವಿಸ್ತರಿಸಿಕೊಳ್ಳಬಹುದು.
ಇನ್ನು ಕ್ಯಾಮೆರಾ ಬಗ್ಗೆ ಹೇಳುವುದಾದರೆ ಲಾವಾ ಮ್ಯಾಗ್ನಮ್ ಎಕ್ಸ್ಎಲ್ ಮತ್ತು ಲಾವಾ ಐವೋರಿ ಟ್ಯಾಬ್‌ಗಳು 5 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿದೆ. ಫ್ರಂಟ್‌ನಲ್ಲಿ 2 ಮೆಗಾ ಪಿಕ್ಸೆಲ್ ಕ್ಯಾಮೆರಾಗಳನ್ನು ನೀಡಲಾಗಿದೆ. ಅದೇ ವೇಳೆ, ಲಾವಾ ಔರಾ ಟ್ಯಾಬ್‌ನಲ್ಲಿ ಬ್ಯಾಕ್‌ಸೈಡ್ 8 ಮೆಗಾ ಪಿಕ್ಸೆಲ್ ಮತ್ತು ಫ್ರಂಟ್‌ನಲ್ಲಿ 5 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ.
ಅದೇ ರೀತಿ, ಲಾವಾ ಮ್ಯಾಗ್ನಮ್ ಮತ್ತು ಲಾವಾ ಔರಾ ಟ್ಯಾಬ್‌ಗಳು, 4ಜಿ, ವೈಫೈ, ಬ್ಲೂಟೂಥ್ ವಿ5.0, 3.5 ಎಂಎಂ ಹೆಡ್‌ಫೋನ್ ಜಾಕ್, ಯುಎಸ್‌ಬಿ ಟೈಪ್ ಸಿ ಪೋರ್ಟ್‌ಗೆ ಸಪೋರ್ಟ್ ಮಾಡುತ್ತವೆ. ಅದೇ ವೇಳೆ, ಲಾವಾ ಐವೋರಿ ಟ್ಯಾಬ್‌ನಲ್ಲಿ ಬಹುತೇಕವಾಗಿ ಔರಾ ಮತ್ತು ಮ್ಯಾಗ್ನಮ್ ರೀತಿಯ ವಿಶೇಷತೆಗಳಿವೆ. ಆದರೆ, ಬ್ಲೂಟೂತ್ ವಿ4.2 ಮತ್ತು ಮೈಕ್ರೋ ಯುಎಸ್‌ಬಿ ಸಿ ಪೋರ್ಟ್‌ನಲ್ಲಿ ಮಾತ್ರವೇ ವ್ಯತ್ಯಾಸವಿದೆ.
4ಜಿ ಬಳಿಕ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್20 ಎಫ್ಇ 5ಜಿ ಸ್ಮಾರ್ಟ್‌ಫೋನ್ ಲಾಂಚ್
ಇದೇ ವೇಳೆ, ಲಾವಾ ಮ್ಯಾಗ್ನಮ್ ಎಕ್ಸ್‌ಎಲ್ ಟ್ಯಾಬ್‌ನಲ್ಲಿ 6,100 ಎಂಎಎಚ್ ಬ್ಯಾಟರಿ ಇದೆ. ಹಾಗೆಯೇ ಲಾವಾ ಔರಾದಲ್ಲಿ 5,100 ಎಂಎಎಚ್ ಹಾಗೂ ಲಾವಾ ಐವೋರಿ ಟ್ಯಾಬ್‌ಗಳಲ್ಲಿ 4,100 ಎಂಎಎಚ್ ಸಾಮರ್ಥ್ಯದ ಬ್ಯಾಟರಿಗಳನ್ನು ನೀಡಲಾಗಿದೆ.