ಸಾಂಪ್ರದಾಯಿಕ ಕೈ ಗಡಿಯಾರಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟೈಮೆಕ್ಸ್ ಕೂಡ ಫಿಟ್ನೆಸ್ ಬ್ಯಾಂಡ್, ಸ್ಮಾರ್ಟ್‌ವಾಚ್‌ಗಳ ಮಾರಾಟದಲ್ಲಿ ಯಶಸ್ವಿಯಾಗುತ್ತಿದೆ. ಕಂಪನಿ ಇದೀಗ ಭಾರತೀಯ ಮಾರುಕಟ್ಟೆಗೆ ಮತ್ತೊಂದು ಫಿಟ್ನೆಸ್ ಬ್ಯಾಂಡ್ ಅನ್ನು ಬಿಡುಗಡೆ ಮಾಡಿದೆ.
ಬಹುಶಃ ಟೈಮೆಕ್ಸ್ ಎಂದರೆ ನಮ್ಮ ಕಣ್ಣ ಮುಂದೆ ಸಾಂಪ್ರದಾಯಿಕ ಕೈ ಗಡಿಯಾರಗಳು ಬರುತ್ತವೆ. ತುಸು ಅಗ್ಗದ ಬೆಲೆಗೆ ಕೈ ಗಡಿಯಾರಗಳನ್ನು ಮಾರಾಟ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ತನ್ನದೇ ಪ್ರಾಬಲ್ಯ ಸೃಷ್ಟಿಸಿಕೊಂಡಿರುವ ಟೈಮೆಕ್ಸ್, ಫಿಟ್ನೆಸ್ ಬ್ಯಾಂಡ್, ಅತ್ಯಾಧುನಿಕ ಡಿಜಿಟಲ್ ವಾಚುಗಳನ್ನು ಮಾರುಕಟ್ಟೆಗೆ ಬಿಡಗಡೆ ಮಾಡುತ್ತಿದೆ. ಈ ಸಾಲಿಗೆ ಇತ್ತೀಚೆಗಷ್ಟೇ ಕಂಪನಿ ಫಿಟ್ನೆಸ್ ಬ್ಯಾಂಡ್ ಬಿಡುಗಡೆ ಮಾಡಿ, ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ.
ಭಾರತದಲ್ಲಿ ಫಿಟ್ನೆಸ್ ಬ್ಯಾಂಡ್ ಬಿಡಗುಡೆ ಮಾಡಿರುವ ಟೈಮೆಕ್ಸ್ ಕಂಪನಿ, ಇದು ತನ್ನ ಹೊಸ ಫಸ್ಟ್ ಫ್ಯಾಶನ್ ಫಿಟ್ನೆಸ್ ಬ್ಯಾಂಡ್ ಎಂದು ಹೇಳಿಕೊಂಡಿದೆ. ಇದು ಫಿಟ್ನೆಸ್ ಟ್ರ್ಯಾಕರ್ ಸೌಲಭ್ಯವನ್ನು ಒಳಗೊಂಡಿದೆ. ಟೈಮೆಕ್ಸ್ ಫಿಟ್ನೆಸ್ ಬ್ಯಾಂಡ್ ಮೆಟೆಲ್ ಫಿನಿಶ್ ಮತ್ತು ಎರಡು ಬಣ್ಣದ ಮಾದರಿಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಗ್ರಾಹಕರು ತಮಗೆ ಇಷ್ಟವಾದ ಬಣ್ಣದ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಹಾರ್ಟ್ ರೇಟ್ ಸೆನ್ಸರ್ ಒಳಗೊಂಡಿರುವ ಈ ಟೈಮೆಕ್ಸ್ ಫಿಟ್ನೆಸ್ ಬ್ಯಾಂಡ್ ಟ್ರ್ಯಾಕಿಂಗ್ ಟಾಸ್ಕ್ ಅನ್ನು ತುಂಬ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುತ್ತದೆ ಎಂದು ಹೇಳಬಹುದು.
undefined
ಭಾರತದಲ್ಲಿ ಮತ್ತೆ ಟಿಕ್ ಟಾಕ್ ಕಾರುಬಾರು ಶುರುವಾಗತ್ತಾ?
ಟೈಮೆಕ್ಸ್ ಫಿಟ್ನೆಸ್ ಬ್ಯಾಂಡ್ ಅನ್ನು ನಿಮಗೆ ಎರಡು ಬಣ್ಣದ ಮಾದರಿಗಳಲ್ಲಿ ನೀಡಲಾಗುತ್ತದೆ. ರೋಸ್ ಗೋಲ್ಡ್ ಮತ್ತು ಬ್ಲ್ಯಾಕ್ ಮತ್ತು ಸ್ಟೇನ್‌ಲೆಸ್ ಸ್ಟೀಲ್ ಮೆಶ್ ಸ್ಟ್ರಾಪ್ ವಿನ್ಯಾಸದೊಂದಿಗೆ ಬರುತ್ತದೆ. ಸ್ಟೇನ್‌ಲೆಸ್ ಸ್ಟೀಲ್ ಸ್ಟ್ರಾಪ್ ಹೊಂದಿರುವ ಕೈಗಡಿಯಾರಗಳನ್ನು ಇಷ್ಟಪಡದ ಅಥವಾ ಸೊಗಸಾದ ನೋಟಕ್ಕಾಗಿ ಹೋಗಲು ಬಯಸುವ ಜನರಿಗೆ ಕಪ್ಪು ಸಿಲಿಕೋನ್ ಸ್ರ್ಯಾಪ್‌ನೊಂದಿಗೆ ವಾಚ್ ಗ್ರಾಹಕರಿಗೆ ಲಭ್ಯವಿದೆ. ಹಾಗಾಗಿ, ಈ ಎರಡು ಆಯ್ಕೆಗಳೊಂದಿಗೆ ಬಳಕೆದಾರರು ತಮಗೆ ಯಾವುದು ಇಷ್ಟೋ ಆ ಮಾದರಿಯ ಫಿಟ್ನೆಸ್ ಬ್ಯಾಂಡ್ ಅನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಈ ಬ್ಯಾಂಡ್ ಆಯತಾಕಾರದ ವಿನ್ಯಾಸ ಇದ್ದು, 47.7 ಮಿಲಿಮೀಟರ್‌ನಷ್ಟು ಅಳತೆಯನ್ನು ಹೊಂದಿದೆ. ಈ ಫಿಟ್ನೆಸ್ ಬ್ಯಾಂಡ್ 2.4 ಸೆಂಟಿಮೀಟರ್ ಬಣ್ಣದ ಡಿಸ್‌ಪ್ಲೇ ಹೊಂದಿದ್ದು ಅದು ಟಚ್ ಇನ್‌ಪುಟ್‌ಗೆ ಸಪೋರ್ಟ್ ಮಾಡುತ್ತದೆ. ನೀರು ನಿರೋಧಕ ಪ್ರಮಾಣೀಕರಣವನ್ನು ಪಡೆದುಕೊಂಡಿದ್ದು, 1.5 ಮೀಟರ್ ನೀರಿನೊಳಗೆ ಬ್ಯಾಂಡ್ ಬಿದ್ದರೂ ಅದಕ್ಕೆ ಏನೂ ಆಗುವುದಿಲ್ಲ. ಅಷ್ಟರ ಮಟ್ಟಿಗೆ ನೀರು ನಿರೋಧಕ ಸಾಮರ್ಥ್ಯವನ್ನು ಈ ಟೈಮೆಕ್ಸ್ ಫಿಟ್ನೆಸ್ ಬ್ಯಾಂಡ್ ಪಡೆದುಕೊಂಡಿದೆ.
PUBG is back: ಹೊಸ ಅವತಾರದ ಗೇಮ್‌ಗೆ ಒಪ್ಪಿಗೆ ಸಿಗುತ್ತಾ?
ನಿಮ್ಮ ಹೃದಯ ಬಡಿತವನ್ನು ಲೆಕ್ಕವಿಡುವ ಹಾರ್ಟ್ ರೇಟ್ ಸೆನ್ಸರ್ ಸೌಲಭ್ಯವನ್ನು ಈ ಟೈಮೆಕ್ಸ್ ಫಿಟ್ನೆಸ್ ಟ್ರ್ಯಾಕರ್ ಒಳಗೊಂಡಿದೆ. ಹೆಜ್ಜೆ ಲೆಕ್ಕ ಮತ್ತು ಕ್ಯಾಲೋರಿಸ್ ಕಡಿಮೆ ಮಾಡುವ ಲೆಕ್ಕ ಸೇರಿದಂತೆ ಆಕ್ಟಿವಿಟಿ ಟ್ರ್ಯಾಕಿಂಗ್ ಸೌಲಭ್ಯವನ್ನು ಒದಗಿಸುವ ಫೀಚರ್‌ಗಳನ್ನು ಈ ಟೈಮೆಕ್ಸ್ ಫಿಟ್ನೆಸ್ ಬ್ಯಾಂಡ್ ಒಳಗೊಂಡಿದೆ. ಮೂಸಿಕ್ ಪ್ಲೇ ಬ್ಯಾಕ್ ಕಂಟ್ರೋಲ್ ಸೌಲಭ್ಯ ಒದಗಿಸುವ ಈ ಬ್ಯಾಂಡ್‌ನ ಬ್ಯಾಟರಿ ಸಾಮರ್ಥ್ಯವೂ ಅಗಾದವಾಗಿದೆ. ನೀವು ಒಮ್ಮೆ ಚಾರ್ಚ್ ಮಾಡಿದರೆ ಕನಿಷ್ಠ ಐದು ದಿನಗಳವರೆಗೂ ಬ್ಯಾಟರಿ ಬಾಳಕೆ ಬರುತ್ತದೆ. ಹಾಗಾಗಿ ಈ ಸೆಗ್ಮೆಂಟ್‌ನಲ್ಲಿ ಬ್ಯಾಟರಿ ಸಾಮರ್ಥ್ಯದ ಈ ಫಿಟ್ನೆಸ್ ಬ್ಯಾಂಡ್ ಇತರ ಬ್ಯಾಂಡ್‌ಗಳಿಗಿಂತ ತುಂಬ ಭಿನ್ನವಾಗಿ ನಿಲ್ಲುತ್ತದೆ ಎಂದು ಹೇಳಬಹುದು.
Honor 10X Lite ಸ್ಮಾರ್ಟ್‌ಫೋನ್ ಭಾರತದಲ್ಲಿ ಯಾವಾಗ ಬಿಡುಗಡೆ?
ಈ ಟೈಮೆಕ್ಸ್ ಫಿಟ್ನೆಸ್ ಬ್ಯಾಂಡ್ ಬೆಲೆಯನ್ನು 4,495 ರೂಪಾಯಿಗೆ ನಿಗದಿಗೊಳಿಸಲಾಗಿದೆ ಮತ್ತು ಇದು ಆನ್‌ಲೈನ್ ಖರೀದಿಗೆ ಲಭ್ಯವಿದೆ. ನೀವು ಟೈಮೆಕ್ಸ್ ಸ್ಟೋರ್ ಮ್ತತು ಅಧಿಕೃತ ರಿಟೇಲ್ ಪಾರ್ಟನರ್‌ಗಳಿಂದ ಆಫ್‌ಲೈನ್ ಸ್ಟೋರ್‌ಗಳಲ್ಲೂ ಖರೀದಿಸಬಹುದಾಗಿದೆ. ಆದರೆ, ಪ್ರಮುಖ ಆನ್‌ಲೈನ್ ಮಾರುಕಟ್ಟೆ ತಾಣಗಳಾದ ಅಮೆಜಾನ್ ಅಥವಾ ಫ್ಲಿಪ್‌ಕಾರ್ಟ್‌ಗಳಲ್ಲಿ ಈ ಫಿಟ್ನೆಸ್ ಬ್ಯಾಂಡ್ ದೊರೆಯುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕಡಿಮೆ ದುಡ್ಡಿಗೆ ಹೆಚ್ಚಿನ ಸೌಲಭ್ಯಗಳನ್ನು ಒಳಗೊಂಡಿರುವ ವೀಯರಬಲ್ ಗ್ಯಾಜೆಟ್ ಬಯಸುವವರಿಗೆ ಈ ಟೈಮೆಕ್ಸ್ ಫಿಟ್ನೆಸ್ ಬ್ಯಾಂಡ್ ಅತ್ಯುತ್ತಮ ಸಾಧನವಾಗಿದೆ ಎಂದು ಹೇಳಬಹುದು.