ಕೈಗೆಟಕುವ ದರದ ಪ್ರೀಮಿಯಂ ವಿಭಾಗದಲ್ಲಿ ಮೊದಲ ಸ್ಥಾನ ಪಡೆದ ಒನ್‌ಪ್ಲಸ್!

By Suvarna News  |  First Published Nov 5, 2020, 10:09 PM IST

ಕೌಂಟರ್‌ಪಾಯಿಂಟ್ ವರದಿಯ ಪ್ರಕಾರ ಒನ್‌ಪ್ಲಸ್ ನಾರ್ಡ್ ಮೇಲಿನ ಮಧ್ಯ ಶ್ರೇಣಿಯ ವಿಭಾಗದಲ್ಲಿ ನಂ .1 ಸ್ಮಾರ್ಟ್‌ಫೋನ್ ಮಾರಾಟ ಮಾಡುವ ಸಂಸ್ಥೆಯಾಗಿ ಹೊರಹೊಮ್ಮಿದೆ. ಕೌಂಟರ್‌ಪಾಯಿಂಟ್‌ ಮೂರನೇ ತ್ರೈಮಾಸಿಕ ವರದಿ ಅನುಸಾರ, ಒನ್‌ಪ್ಲಸ್‌ ಮೊಟ್ಟ ಮೊದಲ ಬಾರಿಗೆ 1 ಮಿಲಿಯನ್‌ ಸ್ಮಾರ್ಟ್‌ ಫೋನ್‌ ಸಾಗಣೆಯ ಸಂಖ್ಯೆಯನ್ನು ಮೀರಿದೆ.


ಬೆಂಗಳೂರು(ನ.05) : ಜಾಗತಿಕ ಪ್ರಮುಖ ತಂತ್ರಜ್ಞಾನ ಬ್ರ್ಯಾಂಡ್‌ ಒನ್‌ ಪ್ಲಸ್‌, ಯಶಸ್ವಿಯಾಗಿ ಕೌಂಟರ್‌ಪಾಯಿಂಟ್‌ನ 2020ರ ಮೂರನೇ ತ್ರೈಮಾಸಿಕ ವರದಿಯಲ್ಲಿ ಭಾರತದ ನಂ.1 ಕೈಗೆಟಕುವ ದರದ ಪ್ರೀಮಿಯಂ ವಿಭಾಗದ ಸ್ಥಾನ ಪಡೆದಿದೆ. ಜೊತೆಗೆ, ಇತ್ತೀಚೆಗೆ ಬಿಡುಗಡೆಗೊಂಡಿರುವ ಒನ್‌ಪ್ಲಸ್‌ ನಾರ್ಡ್ ಒನ್‌ಪ್ಲಸ್ ನಾರ್ಡ್ ಮೇಲಿನ ಮಧ್ಯ ಶ್ರೇಣಿಯ ವಿಭಾಗದಲ್ಲಿ ನಂ .1 ಸ್ಮಾರ್ಟ್‌ಫೋನ್ ಮಾರಾಟ ಮಾಡುವ ಸಂಸ್ಥೆಯಾಗಿ ಹೊರಹೊಮ್ಮಿದೆ.

2020ರ ಯಶಸ್ವಿ ಎರಡನೇ ತ್ರೈಮಾಸಿಕದ ನಂತರ, ಒನ್‌ಪ್ಲಸ್‌ 8 ಮಾರಾಟದ ಬ್ರ್ಯಾಂಡ್‌ ಅನ್ನು ಭಾರತದಲ್ಲಿ ಕೈಗೆಟಕುವ ಸ್ಮಾರ್ಟ್‌ ಫೋನ್‌ ವಲಯಕ್ಕೆ ಕೊಂಡೊಯ್ದಿದೆ. (30,000ರೂ 45,000ರೂ.) 2020ರ ಮೇನಲ್ಲಿ, ಬ್ರ್ಯಾಂಡ್‌ ಪ್ರೀಮಿಯಂ ಪ್ರವೇಶಿಸಬಹುದಾದ ಸಂಪರ್ಕಿತ ವ್ಯವಸ್ಥೆಯನ್ನು ನಿರ್ಮಿಸುವ ಉದ್ದೇಶದಿಂದ ತನ್ನ ಪರಿಷ್ಕರಿಸಿದ ವ್ಯಾಪಾರ ತಂತ್ರವನ್ನು ಘೋಷಿಸಿತ್ತು, ಇದು ಬಳಕೆದಾರರಿಗೆ ಕಡಿಮೆ ಬೆಲೆಗೆ ಹೆಚ್ಚಿನ ತಂತ್ರಜ್ಞಾನ ಒದಗಿಸುವ ಗುರಿ ಹೊಂದಿತ್ತು. ಒನ್‌ಪ್ಲಸ್ ಪ್ರಾರಂಭದಿಂದ ಇದು ಮೇಲಿನ ಮಧ್ಯ ಶ್ರೇಣಿಯ ವಿಭಾಗಕ್ಕೆ (20,000ರೂ.-30,000ರೂ.) ಪ್ರವೇಶಿಸಿತು. 2020ರ ಜುಲೈನಲ್ಲಿ ಬಿಡುಗಡೆಗೊಂಡ ಒನ್‌ಪ್ಲಸ್ ನಾರ್ಡ್ ಬೆಲೆ ಕೇವಲ 24,999ರೂ.ಗಳಿಂದ ಆರಂಭವಾಗುತ್ತದೆ.

Tap to resize

Latest Videos

ಇದರಿಂದ ಕಂಪನಿಯ ಮಾರಾಟ ಮೊದಲ ಬಾರಿಗೆ ಒಂದೇ ತ್ರೈಮಾಸಿಕದಲ್ಲಿ 1 ಮಿಲಿಯನ್ ಸ್ಮಾರ್ಟ್‌ಫೋನ್ ಸಾಗಣೆಯನ್ನು ಮೀರಿಸಿದೆ. ಬ್ರ್ಯಾಂಡ್‌ನ ಈ ಸಕಾರಾತ್ಮಕ ಬೆಳವಣಿಗೆಗೆ ಒನ್‌ಪ್ಲಸ್‌ನ ಭಾರತೀಯ ಮಾರುಕಟ್ಟೆ ಮತ್ತು ಮೇಕ್ ಇನ್ ಇಂಡಿಯಾ ಪ್ರೋಗ್ರಾಂ ಕುರಿತ ಬದ್ಧತೆಯೇ ಕಾರಣವಾಗಿದೆ. ಪ್ರಸ್ತುತ ಒನ್‌ಪ್ಲಸ್ ನಾರ್ಡ್ ಮತ್ತು ಭಾರತದಲ್ಲಿ ಒನ್‌ಪ್ಲಸ್ 8 ಸರಣಿ ಫೋನ್‌ಗಳನ್ನು ತಯಾರಿಸುತ್ತಿದೆ.

click me!