ಪ್ರಾಣ ಉಳಿಸುವ ಫೀಚರ್, ಎದೆಬಡಿತ ವ್ಯತ್ಯಾಸವಾದರೆ ಅಲರ್ಟ್ ನೀಡುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್!

By Chethan KumarFirst Published Aug 22, 2024, 8:57 PM IST
Highlights

ಆರೋಗ್ಯ ಕುರಿತು ಆಘಾತಕಾರಿ ಸುದ್ದಿಗಳು ಹೊರಬೀಳುತ್ತಿದ್ದಂತೆ ಕಾಳಜಿ ಹೆಚ್ಚಾಗುತ್ತಿದೆ. ಇದೀಗ ಪ್ರಾಣ ಉಳಿಸುವ ವಿಶೇಷ ಫೀಚರ್‌ನೊಂದಿಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ ಬಿಡುಗಡೆಯಾಗಿದೆ. 

ಬೆಂಗಳೂರು(ಆ.22) ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ವರದಿಯಾಗುತ್ತಿದೆ. ಆಹಾರ ಪದ್ಧತಿ, ಕೆಲಸದ ಒತ್ತಡ, ತಪ್ಪಾದ ಜೀವನ ಕ್ರಮಗಳಿಂದ ಆರೋಗ್ಯ ಸಮಸ್ಯೆಗಳೂ ಹೆಚ್ಚಾಗುತ್ತಿದೆ. ಇದರ ನಡುವೆ ಹೃದಯ ಸಮಸ್ಯೆಗಳಿಂದ ದೂರವಿರಲು ವ್ಯಾಯಾಮ, ಉತ್ತಮ ಆಹಾರ, ನಿದ್ದೆ ಎಲ್ಲವನ್ನೂ ಸರಿಯಾದ ಕ್ರಮದಲ್ಲಿ ಮಾಡಿದವ ವಿಚಾರದಲ್ಲೂ ಕೆಲ ಆಘಾತಕಾರಿ ಘಟನೆ ನಡೆದಿದೆ. ಇದೀಗ ಈ ರೀತಿಯ ದಿಢೀರ್ ಸಮಸ್ಯೆಗಳು ಉದ್ಭವಿಸಿ ಪ್ರಾಣಕ್ಕೆ ಅಪಾಯ ಎದುರಾಗುವುದನ್ನು ತಪ್ಪಿಸಲು ಸ್ಯಾಮ್‌ಸಂಗ್ ಇದೀಗ ಗ್ಯಾಲಕ್ಸಿ ವಾಚ್ ಅನಾವರಣಗೊಂಡಿದೆ.

ಸ್ಯಾಮ್‌ಸಂಗ್ ಅನಾವರಣಗೊಳಿಸಿರುವ ಗ್ಯಾಲಕ್ಸಿ ವಾಚ್ ಅನಿಯಮಿತ ಎದೆಬಡಿ, ಎದೆಬಡಿತದಲ್ಲಿ ಏರುಪೇರು, ವ್ಯತ್ಯಾಸಗಳಾದರೆ ತಕ್ಷಣವೆ ನೋಟಿಫಿಕೇಶನ್ ನೀಡಲಿದೆ. ಹೊಸ ಫೀಚರ್‌ನಲ್ಲಿ ರಕ್ತದೊತ್ತಡ,  ಎಲೆಕ್ಟ್ರೋಕಾರ್ಡಿಯೋಗ್ರಾಮ್ (ಇಸಿಜಿ)  ಮಾನಿಟರಿಂಗ್ ಫೀಚರ್ ಸಂಯೋಜಿಸಲಾಗಿದೆ. ಇದು ಹೃಯದ ಬಡಿತದಲ್ಲಿ ವ್ಯತ್ಯಾಸವನ್ನು ತಕ್ಷಣವೇ ಗಮನಿಸಿ ನೋಟಿಫಿಕೇಶನ್ ನೀಡಲಿದೆ. ಈ ಗ್ಯಾಲಕ್ಸಿ ವಾಚ್ ಬಳಕೆದಾರರ ಹೃದಯ ಸಂಬಂಧಿ ಆರೋಗ್ಯ ಕುರಿತು ಸಂಪೂರ್ಣ ಮಾಹಿತಿ ನೀಡಲಿದೆ. 

Latest Videos

ದೆಹಲಿ ಏರ್‌ಪೋರ್ಟ್‌ನಲ್ಲಿ ಹೃದಯಾಘದಿಂದ ಕುಸಿದ ವ್ಯಕ್ತಿಗೆ ಸಿಪಿಆರ್ ನೀಡಿ ಬದುಕಿಸಿದ ಯೋಧ!
 
ಈ ಗ್ಯಾಲಕ್ಸಿ ವಾಚ್‌ನಲ್ಲಿ ಐಹೆಚ್‌ಆರ್‌ಎನ್ ಫೀಚರ್ ಆ್ಯಕ್ಟೀವೇಟ್ ಮಾಡಿದರೆ ಸಾಕು, ಈ ವಾಚ್‌ನ ಸೆನ್ಸಾರ್ ಬಳಕೆದಾರರ ಎದೆಬಡಿತ, ಕಂಪನ ಸೇರಿದಂತೆ ಎಲ್ಲಾ ಮಾಹಿತಿ ದಾಖಲಿಸಿಕೊಳ್ಳಲಿದೆ. ಸಾಮಾನ್ಯ ಹೃದಯಬಡಿತಕ್ಕಿಂತ ಕೊಂಚ ವ್ಯತ್ಯಾಸವಾದರೂ ಅಲರ್ಟ್ ನೀಡಲಿದೆ. ಜೊತೆಗೆ ಹೃದಯ ಬಡಿತ ಸೇರಿದಂತೆ ಎಲ್ಲಾ ಮಾಹಿತಿಯನ್ನು ಬಳಕೆದಾರರನಿಗೆ ನೀಡಲಿದೆ. ಇದರಿಂದ ಗ್ರಾಹಕನ ಇಸಿಜಿ ಆರೋಗ್ಯ ವರದಿಯನ್ನು ಈ ವಾಚ್ ನೆರವಾಗಲಿದೆ. 

ಈಗಾಗಲೇ ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್‌ನಲ್ಲಿ ರಕ್ತದೊತ್ತಡ, ಹಾರ್ಟ್ ರೇಟ್ ಫೀಚರ್ ಜೊತೆಗೆ ಹೊಸದಾಗಿ ಇಸಿಜಿ ಫೀಚರ್ ಕೂಡ ಲಭ್ಯವಾಗಿದೆ. ಎಎಫ್ಐಬಿ ಸಮಸ್ಯೆಗಳು ಪ್ರಾಣಕ್ಕೆ ಸಂಚಕಾರ ತರಲಿದೆ. ಇದು ಯಾವುದೇ ರೀತಿಯ ಮುನ್ಸೂಚನೆ ನೀಡದೆ ಪ್ರಾಣಕ್ಕೆ ಅಪಾಯ ನೀಡಲಿದೆ. ಹೀಗಾಗಿ ಆರೋಗ್ಯವಾಗಿದ್ದ ವ್ಯಕ್ತಿ ಕೆಲವೇ ಕ್ಷಣಗಳಲ್ಲಿ ಹೃದಯ ಸಂಬಂಧಿ ಸಮಸ್ಯೆಗೆ ತುತ್ತಾಗಿ ಮೃತಪಟ್ಟ ಘಟನೆಗಳು ಇವೆ. ಈ ಅಪಾಯದ ಸೂಚನೆಯನ್ನು ಹೊಸ ಗ್ಯಾಲಕ್ಸಿ ವಾಚ್ ನೀಡಲಿದೆ.  

ಐಹೆಚ್‌ಆರ್‌ಎನ್ ಫೀಚರ್ ಅನ್ನು ಅನಾವರಣಗೊಳಿಸುವ ಮೂಲಕ ಗ್ಯಾಲಕ್ಸಿ ವಾಚ್ ಬಳಕೆದಾರರು ಈಗ ತಮ್ಮ ಹೃದಯದ ಆರೋಗ್ಯದ ಪ್ರಮಖ ಅಂಶಗಳ ಮೇಲೆ ನಿಗಾ ಇಡಬಹುದು. ಸ್ಯಾಮ್‌ಸಂಗ್‌ನ ಬಯೋಆಕ್ಟಿವ್ ಸೆನ್ಸರ್‌ ಹೊಂದಿದ್ದು, ಇದು ಬಳಕೆದಾರರಿಗೆ ಆನ್ ಡಿಮ್ಯಾಂಡ್ ಇಸಿಜಿ ರೆಕಾರ್ಡಿಂಗ್ ಮತ್ತು ಅಸಹಜ ಹೆಚ್ಚು ಅಥವಾ ಕಡಿಮೆ ಹೃದಯ ಬಡಿತವನ್ನು ಪತ್ತೆಹಚ್ಚುವ ಎಚ್ ಆರ್ ಅಲರ್ಟ್ ಫಂಕ್ಷನ್ ಒಳಗೊಂಡು ತಮ್ಮ ಹೃದಯದ ಆರೋಗ್ಯವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಹಲವು ಟೂಲ್ ಗಳನ್ನು ಒದಗಿಸುತ್ತದೆ. 

ರಕ್ತದೊತ್ತಡವನ್ನು ನೈಸರ್ಗಿಕವಾಗಿ ಕಡಿಮೆ ಮಾಡೋದು ಹೇಗೆ?
 
 

click me!