ಮನೆ, ಆಫೀಸ್ ಸೇರಿ ಹತ್ತು ಪ್ರಯೋಜನ, ಅತ್ಯಾಕರ್ಷಕ ಒನ್ ಪ್ಲಸ್ ಪ್ಯಾಡ್ 2 ಲಾಂಚ್!

By Chethan KumarFirst Published Jul 30, 2024, 6:13 PM IST
Highlights

ಹೊಚ್ಚ ಹೊಸ ಒನ್ ಪ್ಲಸ್ ಪ್ಯಾಡ್ 2 ಬಿಡುಗಡೆಯಾಗಿದೆ. ಇದು ಮನೆ , ಆಫೀಸ್, ಪ್ರಯಾಣ, ಪೋಟೋಗ್ರಫಿ ಸೇರಿದಂತೆ ಎಲ್ಲಾ ಅವಶ್ಯಕತೆಗಳಿಗೂ ಹೊಂದಿಕೊಳ್ಳುತ್ತಿದೆ. ಜೊತೆಗೆ ಕೈಗೆಟುಕುವ ದರದಲ್ಲಿ ಒನ್ ಪ್ಲಾಸ್ ಈ ಪ್ಯಾಡ್ ಹೊರತಂದಿದೆ.
 

ಬೆಂಗಳೂರು(ಜು.30) ಡೆಸ್ಕ್‌ಟಾಪುಗಳು ಹೋಗಿ, ಲ್ಯಾಪ್‌ಟಾಪುಗಳ ಕಾಲ ಶುರುವಾದ ನಂತರ, ಅದಕ್ಕಿಂತಲೂ ಹಗುರವಾದ ನೋಟ್‌ಬುಕ್ಕು ಬೇಕು ಅನ್ನಿಸುತ್ತಿರುವ ಹೊತ್ತಿಗೆ ನೋಟ್ ಮತ್ತು ಟ್ಯಾಬ್ಲೆಟ್‌ಗಳ ಯುಗ ಶುರುವಾಯಿತು. ಸ್ಯಾಮ್ಸಂಗ್ ಟ್ಯಾಬ್ಲೆಟ್, ಐಪ್ಯಾಡುಗಳು ಬಂದು ಪ್ರಸಿದ್ಧವಾದವು. ಬೇರೆ ಬೇರೆ ಕಂಪೆನಿಗಳೂ ಯಥಾನುಶಕ್ತಿ ಟ್ಯಾಬ್ಲೆಟ್‌ಗಳನ್ನು ಹೊರತಂದವು. ಅವೆಲ್ಲ ಆಗಿ ಎಷ್ಟೋ ವರ್ಷಗಳ ನಂತರ ಮಾರುಕಟ್ಟೆಗೆ ಬಂದ ವನ್‌ಪ್ಲಸ್ ಕೂಡ ಟ್ಯಾಬ್ಲೆಟ್ಟುಗಳ ಜಗತ್ತಿಗೆ ಕಾಲಿಟ್ಟಿತು. ಇದೀಗ ವನ್‌ಪ್ಲಸ್ ಪ್ಯಾಡ್ 2 ಮಾರುಕಟ್ಟೆಯಲ್ಲಿದೆ. 2023ರ ಇದೇ ಸುಮಾರಿಗೆ ವನ್‌ಪ್ಲಸ್ ಪ್ಯಾಡ್ ಮಾರುಕಟ್ಟೆಗೆ ಬಂದಾಗ ಅತ್ಯುತ್ತಮ ಅಂಡ್ರಾಯಿಡ್ ಟ್ಯಾಬ್ ಅಂತ ಕರೆಸಿಕೊಂಡಿತ್ತು. ಈಗ ಬಂದಿರುವುದು ಸುಧಾರಿತ ತಳಿ.

ಇದನ್ನು ವನ್‌ಪ್ಲಸ್ ನೆಕ್ಸ್ಟ್ ಜನರೇಷನ್ ಫ್ಲಾಗ್‌ಶಿಪ್ ಟ್ಯಾಬ್ಲೆಟ್ ಅಂತ ವರ್ಣಿಸಿಕೊಂಡಿದೆ. ದಕ್ಷತೆ, ನೋಟ, ಆಡಿಯೋ, ಎಐ- ಎಲ್ಲವೂ ಒಂದು ತೆಳುವಾದ ಸ್ಲೇಟಿನಲ್ಲಿ ಕಣ್ಮುಂದೆ ಬಂದರೆ ಹೇಗಿರುತ್ತೆ ಅನ್ನುವ ಪ್ರಶ್ನೆಗೆ ಇದು ಉತ್ತರ. ಸ್ನ್ಯಾಪ್ ಡ್ರ್ಯಾಗನ್ 8, ಜೆನ್ 3 ಹೊಂದಿರುವ ಇದು ಅತ್ಯಂತ ಸುಧಾರಿತ ಎಐ ಹೊಂದಿದೆ. 3ಕೆ ಡಿಸ್‌ಪ್ಲೇ, 6 ಸ್ಪೀಕರ್ ಆಡಿಯೋ, ಸ್ಟೈಲೋ 2 ಮತ್ತು ಕೀಬೋರ್ಡ್- ಇರುವ ಇದು ಲ್ಯಾಪ್‌ಟಾಪ್‌ಗೆ ಹತ್ತಿರವಾಗಿದೆ.

Latest Videos

ಒನ್ ಪ್ಲಸ್ ನೋಡ್ CE4 ಲೈಟ್ 5G, ನಿಮ್ಮ ಹೊಸ ಮನೋರಂಜನೆ ಸಂಗಾತಿ ಫೋನ್ ಲಾಂಚ್!

ಇದರ ಫೀಚರ್‌ಗಳು ಅಚ್ಚರಿ ಹುಟ್ಟಿಸುವಂತಿವೆ. ದೊಡ್ಡ ಸ್ಕ್ರೀನು, ಸ್ಮೂಥ್ ಕನೆಕ್ಟಿವಿಟಿ, ಪವರ್‌ಫುಲ್ ಪರ್ಫಾರ್ಮೆನ್ಸ್, ಎಐ ಅನುಕೂಲಗಳು, ಬೆರಗಾಗಿಸುವ ವಿಷ್ಯುಯಲ್ಸ್, ಸೆಳೆಯುವ ಆಡಿಯೋ, ಅತ್ಯುತ್ತಮ ಗೇಮಿಂಗ್ ಮೋಡ್- ಇಷ್ಟಿದ್ದರೆ ಮತ್ತೇನು ಬೇಕು. ಇಂಥ ಟ್ಯಾಬ್ಲೆಟ್‌ಗಳಲ್ಲಿ ಬೇಕಾಗಿರುವುದು ಬ್ಯಾಟರಿ ಲೈಫ್ ಮತ್ತು ಫಾಸ್ಟ್ ಚಾರ್ಜಿಂಗ್.  ಇದರ 9510 ಎಂಎಎಚ್ ಬ್ಯಾಟರಿಯಿಂದಾಗಿ ಇದರ ಸ್ಟಾಂಡ್‌ಬೈ ಟೈಮು 43 ದಿನ. ಅಂದರೆ ಒಮ್ಮೆ ಚಾರ್ಜ್ ಮಾಡಿ ಇಟ್ಟು, ಐದು ವಾರಗಳ ಕಾಲ ಮುಟ್ಟದೇ ಇದ್ದರೂ ಬ್ಯಾಟರಿ ಸಾಯುವುದಿಲ್ಲ.  ಇದರ ಜತೆಗೆ ಬರುವ 67 ವ್ಯಾಟ್ ಟಾರ್ಜರಿನಿಂದಾಗಿ ಹತ್ತೇ ನಿಮಿಷಕ್ಕೆ 23%, 30 ನಿಮಿಷಕ್ಕೆ 64% ಚಾರ್ಜ್ ಮಾಡಬಹುದು. 13 ಮೆಗಾಪಿಕ್ಸೆಲ್ ಕ್ಯಾಮರಾ, 8 ಎಂಪಿ ಫ್ರಂಟ್ ಕ್ಯಾಮರಾ ಇರುವುದರಿಂದ ಫೋಟೋ ತೆಗೆಯಬಹುದು, ವಿಡಿಯೋ ಕಾಲ್ ಮಾಡಬಹುದು, ಮೀಟಿಂಗ್ ಅಟೆಂಡ್ ಮಾಡಬಹುದು. ಎಲ್ಲೆಂದರಲ್ಲಿ ಕುಳಿತುಕೊಂಡು ಮಾತಾಡಬಹುದು, ಕೆಲಸ ಮಾಡಬಹುದು. ಸುಮಾರು ಅರ್ಧಕೇಜಿ ಭಾರದ, 6.49 ಎಂಎಂ ತೆಳ್ಳಗಿನ ಇದು ಕೈಗೂ ಹಗುರ, ಕಣ್ಣಿಗೂ ಅನುಕೂಲ.

ಇದರ ಜತೆಗೇ ಸ್ಮಾರ್ಟ್ ಕೀಬೋರ್ಡ್ ಕೂಡ ಬರುತ್ತದೆ. ಸ್ಟೈಲೋ ಕೂಡ ಇರುತ್ತದೆ. ನೀವು ಬರೆಯಬಹುದು, ನೋಟ್ಸ್ ಮಾಡಿಕೊಳ್ಳಬಹುದು. ಇದನ್ನೇ ನೋಟ್ ಬುಕ್ಕಿನಂತೆ ಬಳಸಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲಾ ಫೈಲುಗಳನ್ನೂ ಇದರ ಜತೆ ಸಿಂಕ್ ಮಾಡಿಕೊಂಡು ಒಯ್ಯಬಹುದು. ಇದನ್ನು ನಿಮ್ಮ ಮೊಬೈಲ್ ಆಫೀಸು ಅಂದುಕೊಳ್ಳಿ. ಮೀಟಿಂಗ್ ಮಾಡಿ, ಕೆಲಸ ಮಾಡಿ, ಸಿನಿಮಾ ನೋಡಿ. ಫೋಟೋ ತೆಗೆಯಿರಿ, ಚೆಂದದ ಡಿಸ್‌ಪ್ಲೇ, ಕೈಗೆಟಕುವ ಬೆಲೆ ಇರುವ ಇದು ಸ್ಮಾರ್ಟ್ ಫೋನಿನ ಮುಂದಿನ ಹೆಜ್ಜೆಯಂತಿದೆ. ಇದರ ಬೆಲೆ 39,999 ರುಪಾಯಿ.

ದುಬಾರಿ ಸ್ಮಾರ್ಟ್‌ಫೋನ್ ಹುಡುಕ್ತಿದೀರಾ? ಇಲ್ಲಿದೆ ಬೆಸ್ಟ್ 6
 

click me!