ಕಡಿಮೆ ದರದಲ್ಲಿ ಹೆಚ್ಚಿನ ಫೀಚರ್‌ಗಳುಳ್ಳ ಸ್ಮಾರ್ಟ್‌ಫೋನ್‌ಗಳ ಮೂಲಕ ಕಡಿಮೆ ಅವಧಿಯಲ್ಲೇ ಪ್ರಖ್ಯಾತ ಬ್ರಾಂಡ್ ಆಗಿ ಬೆಳೆದಿರುವ ಚೀನಾ ಮೂಲದ ರಿಯಲ್‌ಮಿ ಇದೀಗ ಲ್ಯಾಪ್‌ಟ್ಯಾಪ್ ಸೆಗ್ಮೆಂಟ್‌ಗೂ ಕಾಲಿಡಲು ಮುಂದಾಗಿದೆ. ಮುಂದಿನ ತಿಂಗಳು ಮಾರುಕಟ್ಟೆಗೆ ಬಿಡುಗಡೆಯಾಗಲಿರುವ ಈ ಲ್ಯಾಪ್‌ಟ್ಯಾಪ್ ಬಗ್ಗೆ ಹಲವು ಮಾಹಿತಿಗಳು ಸೋರಿಕೆಯಾಗಿವೆ.
ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಮಧ್ಯಮ ಸ್ಮಾರ್ಟ್‌ಫೋನ್‌ಗಳ ಮೂಲಕ ಭಾರತದಲ್ಲೂ ರಿಯಲ್‌ಮಿ ತನ್ನದೇ ಆದ ಗ್ರಾಹಕವರ್ಗವನ್ನು ಸೃಷ್ಟಿಸಿಕೊಂಡಿದೆ. ಕಂಪನಿ ಈಗ ಕೇವಲ ಸ್ಮಾರ್ಟ್‌ಫೋನ್‌ಗಳ ಉತ್ಪಾದನೆಗೆ ಮಾತ್ರವೇ ಸೀಮಿತವಾಗಿಲ್ಲ. ಅದಾರಚೆಯೂ ಅನೇಕ ಸಾಧನಗಳ ಉತ್ಪಾದನೆಗೆ ಮುಂದಾಗಿದೆ. ಅದರ ಭಾಗವಾಗಿಯೇ ಕಂಪನಿ ಲ್ಯಾಪ್‌ಟ್ಯಾಪ್ ತಯಾರಿಕೆಗೆ ಇಳಿದಿದೆ.
ಜುಲೈ 22ಕ್ಕೆ ಒನ್‌ಪ್ಲಸ್ ನಾರ್ಡ್ 2 ಸ್ಮಾರ್ಟ್‌ಫೋನ್ ಲಾಂಚ್ ಫಿಕ್ಸ್
undefined
ಕಳೆದ ತಿಂಗಳ ನಡೆದ ರಿಯಲ್ ಜಿಟಿ 5ಜಿ ಸ್ಮಾರ್ಟ್‌ಫೋನ್ ಲಾಂಚ್ ಸಂದರ್ಭದಲ್ಲೇ ಕಂಪನಿಯು ಲ್ಯಾಪ್‌ಟ್ಯಾಪ್ ಬಿಡುಗಡೆಯ ಬಗ್ಗೆ ಮಾಹಿತಿ ನೀಡಿತ್ತು. ಆದರೆ, ಲ್ಯಾಪ್‌ಟ್ಯಾಪ್ ಹೇಗಿರಲಿದೆ, ವೈಶಿಷ್ಟ್ಯಗಳೇನು, ಬೆಲೆ ಏನು ಎಂಬಿತ್ಯಾದಿಗಳ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ. ಆದರೆ, ಈಗ ರಿಯಲ್‌ಮಿ ಲ್ಯಾಪ್‌ಟ್ಯಾಪ್ ಬಗ್ಗೆ ಒಂದಿಷ್ಟು ಮಾಹಿತಿಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ. ಆನ್‌ಲೀಕ್ಸ್ ಟ್ವಿಟರ್ ಹ್ಯಾಂಡ್ಲರ್‌ನಲ್ಲಿ ಈ ಲ್ಯಾಪ್‌ಟ್ಯಾಪ್‌ನ ಇಮೇಜ್‌ಗಳನ್ನು ಹಂಚಿಕೊಳ್ಳಲಾಗಿದೆ.
ರಿಯಲ್‌ಮಿ ಹೊರತರಲಿರುವ ಲ್ಯಾಪ್‌ಟ್ಯಾಪ್ ನೋಡಲು ಆಪಲ್‌ನ ಮ್ಯಾಕ್‌ಬುಕ್ ರೀತಿಯಲ್ಲೇ ಕಾಣುತ್ತದೆ. ಬಿಗ್ ಟ್ರ್ಯಾಕ್‌ಪ್ಯಾಡ್ ಮತ್ತು ಅಲ್ಯುಮಿನಿಯಂ ಫಿನಿಶ್ ಅದರ ವಿನ್ಯಾಸವನ್ನು ಮತ್ತಷ್ಟು ಹೆಚ್ಚಿಸಿವೆ. ಕಂಪನಿಯು ಈ ಲ್ಯಾಪ್‌ಟ್ಯಾಪ್ ವಿನ್ಯಾಸದ ಜತೆಗೆ ಒಂದಿಷ್ಟು ಮಾಹಿತಿಯನ್ನುಗಳನ್ನು ಬಿಟ್ಟುಕೊಟ್ಟಿದೆ ಎನ್ನಲಾಗಿದೆ.
ಬಹು ನಿರೀಕ್ಷೆಯ ರಿಯಲ್‌ಮಿ ಕಂಪನಿಯ ಲ್ಯಾಪ್‌ಟ್ಯಾಪ್ ಆಗಸ್ಟ್ ಅಂತ್ಯಕ್ಕೆ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹಲವು ವೆಬ್‌ತಾಣಗಳು ವರದಿ ಮಾಡಿವೆ. ಲ್ಯಾಪ್‌ಟ್ಯಾಪ್ ಬೆಲೆ ಎಷ್ಟಿರಬಹುದು ಎಂಬ ಬಗ್ಗೆ ಕಂಪನಿಯು ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆದರೆ, ರಿಯಲ್‌ಮಿ ಬ್ರ್ಯಾಂಡ್ ಇತಿಹಾಸವನ್ನು ಗಮನಿಸಿದರೆ ಅದರ ಎಲ್ಲ ಸಾಧನಗಳು ಕೈಗೆಟುಕುವ ದರದಲ್ಲೇ ಇವೆ. ಹಾಗಾಗಿ, ಮಾರುಕಟ್ಟೆಗೆ ಬಿಡುಗಡೆಯಾಗಲಿರುವ ಈ ಲ್ಯಾಪ್‌ಟ್ಯಾಪ್ ಬೆಲೆ ಸುಮಾರು 40 ಸಾವಿರ ರೂಪಾಯಿಯಿಂದ ಶುರುವಾಗಬಹುದು ಎಂದು ಅಂದಾಜಿಸಲಾಗುತ್ತಿದೆ.
1,299 ಮತ್ತು 1,799 ರೂಪಾಯಿಗೆ ಡಿಝೋ ಫೋನ್ ಲಾಂಚ್ ಮಾಡಿದ ರಿಯಲ್‌ಮಿ
ಬಹುತೇಕ ಆಗಸ್ಟ್ ಅಂತ್ಯಕ್ಕೆ ಬಿಡುಗಡೆಗೆ ಸಿದ್ಧವಾಗಿರುವ ರಿಯಲ್‌ಮಿ ಲ್ಯಾಪ್‌ಟ್ಯಾಪ್ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸದ್ಯಕ್ಕೆ ಗೊತ್ತಾಗಿರುವ ಮಾಹಿತಿ ಪ್ರಕಾರ, ಈ ಲ್ಯಾಪ್‌ಟ್ಯಾಪ್ ವಿನ್ಯಾಸವು ಆಕರ್ಷವಾಗಿದೆ ಮತ್ತು ನೋಡಲು ಅದು ಆಪಲ್‌ನ ಮ್ಯಾಕ್‌ಬುಕ್ ರೀತಿಯಲ್ಲಿ ಕಾಣುತ್ತದೆ. ರಿಯಲ್‌ಮೀ ಕಂಪನಿಯ ಯುರೋಪ್ ಮತ್ತು ಇಂಡಿಯಾ ಸಿಇಒ ಆಗಿರುವ ಮಾಧವ್ ಸೇಠ್ ತಮ್ಮ ಟ್ವಿಟರ್ ಚಾನೆಲ್‌ನಲ್ಲಿ ಲ್ಯಾಪ್‌ಟ್ಯಾಪ್ ಹಂಚಿಕೊಂಡಿದ್ದಾರೆ. ಈ ಟೀಸರ್‌ನಲ್ಲಿ ಲ್ಯಾಪ್‌ಟ್ಯಾಪ್ ಫೀಚರ್‌ಗಳ ಒಂದಿಷ್ಟು ಮಾಹಿತಿ ದೊರೆಯುತ್ತದೆ. ರಿಯಲ್‌ಮಿ ಈ ಲ್ಯಾಪ್‌ಟ್ಯಾಪ್ ಸ್ಲಿಮ್ ಆಗಿದೆ.
ಈಗ ಗೊತ್ತಿರುವ ಮಾಹಿತಿಯಂತೆ ಈ ರಿಯಲ್‌ಮಿ ಲ್ಯಾಪ್‌ಟ್ಯಾಪ್ ಮ್ಯಾಕ್‌ಬುಕ್‌ನಿಂದ ಹೆಚ್ಚು ಪ್ರೇರಣೆ ಪಡೆದಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಅಲ್ಯುಮಿನಿಯ್ ಫಿನಿಶ್ ಹೊಂದಿರುವ ಲ್ಯಾಪ್‌ಟ್ಯಾಪ್‌ನ ಮುಚ್ಚಳದ ಮೇಲೆ ನೀವು ರಿಯಲ್‌ಮಿ ಲೋಗೋವನ್ನು ಕಾಣಬಹುದು. ಇಷ್ಟು ಮಾತ್ರವಲ್ಲದೇ, ಡಿಸ್‌ಪ್ಲೇ ಸ್ವಲ್ಪ ದಪ್ಪವಾದ ಅಂಚಿನೊಂದಿಗೆ ಕನಿಷ್ಠ ಬೆಜೆಲ್‌ಗಳನ್ನು ಹೊಂದಿದೆ. ಇದು ಐಲ್ಯಾಂಡ್ ಸ್ಟೈಲ್ ಕೀಬೋರ್ಡ್, ಡೆಡಿಕೆಟೆಡ್ ಪವರ್ ಬಟನ್ ಮತ್ತು ದೊಡ್ಡ ಟ್ರ್ಯಾಕ್‌ಪ್ಯಾಡ್ ಹೊಂದಿದೆ. ಇದೇ ವೇಳೆ, ಫಿಂಗರ್ ಪ್ರಿಂಟ್ ರೀಡರ್ ರೀತಿಯಲ್ಲೂ ಪವರ್ ಬಟನ್ ಕಾರ್ಯ ನಿರ್ವಹಿಸಲಿದೆ.
ಇನ್ನು ಈ ರಿಯಲ್‌ಮಿ ಲ್ಯಾಪ್‌ಟ್ಯಾಪ್‌ನಲ್ಲಿ 3.5 ಎಂಎಂ ಆಡಿಯೋ ಜಾಕ್, ಯುಎಸ್‌ಬಿ-ಎ ಪೋರ್ಟ್‌ಗಳನ್ನು ಬಲಬದಿಯಲ್ಲಿ ಕಾಣಬಹುದು. ಇದರ ಜತೆಗೆ ಯುಎಸ್‌ಬಿ ಟೈಪ್-ಸಿ ಪೋರ್ಟ್‌ಗಳನ್ನು ಲ್ಯಾಪ್‌ಟ್ಯಾಪಿನ ಎಡ ಬದಿಯಲ್ಲಿ ನೋಡಬಹುದು. 3: 2 ಅನುಪಾತದಲ್ಲಿ ಆಕಾರವನ್ನು ಹೊಂದಿದೆ ಮತ್ತು 307 X 229 X 16 ಎಂಎಂ ಅಳತೆಯ ಗಾತ್ರವನ್ನು ಅದು ಸೂಚಿಸುತ್ತದೆ ಎಂದು ಹೇಳಲಾಗುತ್ತಿದೆ.
ಸೂಪರ್ ಫೀಚರ್ಸ್: Redmi Note 10T 5G ಫೋನ್ ಭಾರತದಲ್ಲಿ ಬಿಡುಗಡೆ ಪಕ್ಕಾ
ಈ ಲ್ಯಾಪ್‌ಟ್ಯಾಪ್ 14 ಇಂಚ್ ಎಫ್ಎಚ್‌ಡಿ ಎಲ್ಇಡಿ ಆಂಟಿ ಗ್ಲೇರ್ ಡಿಸ್‌ಪ್ಲೇಯನ್ನು ಹೊಂದಿರಲಿದೆ. 11ನೇ ಜನರೇಷನ್ ಇಂಟೆಲ್ ಕೋರ್ ಐ3 ಅಥವಾ ಇಂಟೆಲ್ ಕೋರ್ ಐ5 ಸಿಪಿಯು ಈ ಲ್ಯಾಪ್‌ಟ್ಯಾಪಿನಲ್ಲಿರಲಿದೆ. ಬಹುಶಃ ವಿಂಡೋಸ್ 11 ಆಪರೇಟಿಂಗ್ ಇರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.