ಆತ್ಮನಿರ್ಭರ್ ಭಾರತ್: ಮೇಡ್ ಇನ್ ಇಂಡಿಯಾ ಬ್ಲಾವ್‌ಪಂಕಟ್ ಆ್ಯಂಡ್ರಾಯ್ಡ್ ಸ್ಮಾರ್ಟ್TV ಬಿಡುಗಡೆ!

Published : Jul 12, 2021, 08:26 PM ISTUpdated : Jul 12, 2021, 08:27 PM IST
ಆತ್ಮನಿರ್ಭರ್ ಭಾರತ್:  ಮೇಡ್ ಇನ್ ಇಂಡಿಯಾ ಬ್ಲಾವ್‌ಪಂಕಟ್ ಆ್ಯಂಡ್ರಾಯ್ಡ್ ಸ್ಮಾರ್ಟ್TV ಬಿಡುಗಡೆ!

ಸಾರಾಂಶ

ಬ್ಲಾವ್‍ಪಂಕ್ಟ್‍ ಆ್ಯಂಡ್ರಾಯ್ಡ್ ಸ್ಮಾರ್ಟ್TV ಬಿಡುಗಡೆ,  ರೂ.14,999ರಿಂದ ಪ್ರಾರಂಭ ನೂತನ ಟಿವಿ ಗ್ರಾಹಕರಿಗೆ ಫ್ಲಿಪ್‍ಕಾರ್ಟ್‍ನಲ್ಲಿ ಲಭ್ಯ  ಭಾರತದ ಟೆಲಿವಿಷನ್ ಮಾರುಕಟ್ಟೆಯಲ್ಲಿ ಸಂಚಲನ 

ನವದೆಹಲಿ(ಜು.12):   ಜರ್ಮನಿಯ ಗ್ರಾಹಕ ಎಲೆಕ್ಟ್ರಾನಿಕ್ಸ್ ದೈತ್ಯ ಬ್ಲಾವ್‍ಪಂಕ್ಟ್ ನಾಲ್ಕು `ಮೇಡ್-ಇನ್-ಇಂಡಿಯಾ’ ಆಂಡ್ರಾಯಿಡ್ ಟಿ.ವಿ. ಮಾಡೆಲ್‍ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.  ಈ ಉತ್ಪನ್ನಗಳು ಗ್ರಾಹಕರಿಗೆ ಜುಲೈ 10ರ ನಂತರ ಭಾರತದ ಸ್ಥಳೀಯ ಇ-ಕಾಮರ್ಸ್ ಮಾರ್ಕೆಟ್‍ಪ್ಲೇಸ್ ಫ್ಲಿಪ್‍ಕಾರ್ಟ್‍ನಲ್ಲಿ ದೊರೆಯಲಿದೆ. 

LGಯಿಂದ ಹೊಸ ಟಿವಿ ಮಾರುಕಟ್ಟೆಗೆ: ವೀಕ್ಷಣೆ ಜೊತೆ ಗೇಮಿಂಗ್ ಮಜಾ

ರೂ.14,999ರಿಂದ ಪ್ರಾರಂಭವಾಗುವ ನಾಲ್ಕು ಆಂಡ್ರಾಯಿಡ್ ಟಿ.ವಿ. ಮಾಡೆಲ್‍ಗಳಲ್ಲಿ 32-ಇಂಚು HD ರೆಡಿ ಸೈಬರ್‍ಸೌಂಡ್ ಆಂಡ್ರಾಯಿಡ್ TV, 42-ಇಂಚು FHD ಆಂಡ್ರಾಯಿಡ್ TV, 43-ಇಂಚು ಸೈಬರ್‍ಸೌಂಡ್ 4K ಆಂಡ್ರಾಯಿಡ್ TV ಮತ್ತು 55-ಇಂಚು 4k ಆಂಡ್ರಾಯಿಡ್ TV ಒಳಗೊಂಡಿದೆ. 32-ಇಂಚು ಆವೃತ್ತಿಯು ರೂ.14,999ಕ್ಕೆ ಲಭ್ಯವಿದ್ದು ಆಂಡ್ರಾಯಿಡ್ 9ರಿಂದ ತಂತ್ರಜ್ಞಾನದಿಂದ ಕೂಡಿದೆ.
 
42-ಇಂಚು FHD ಆಂಡ್ರಾಯಿಡ್ TV ಬೆಲೆ ರೂ.21,999 ಆಂಡ್ರಾಯಿಡ್ 9 ತಂತ್ರಜ್ಞಾನ ಹೊಂದಿದೆ. ಟಿ.ವಿ.ಗೆ ರೂ.30,999 ರೂಪಾಯಿ ಆಗಿದೆ.   ವಿಶೇಷವಾದ 55-ಇಂಚು ಮಾಡೆಲ್ .40,999 ರೂಪಾಯಿ.   ದೇಶಾದ್ಯಂತ ಲಕ್ಷಾಂತರ ಗ್ರಾಹಕರು ಅತ್ಯಾಧುನಿಕ `ಮೇಡ್ ಇನ್ ಇಂಡಿಯಾ’ ಟಿ.ವಿ.ಗಳನ್ನು ಅವರ ಮನೆಬಾಗಿಲಿನಲ್ಲಿ ಫ್ಲಿಪ್‍ಕಾರ್ಟ್ ಮೂಲಕ ಕೈಗೆಟುಕುವ, ಸುರಕ್ಷಿತ ಮತ್ತು ಆರೋಗ್ಯಕರ ವಿಧಾನದಲ್ಲಿ ಪಡೆಯಬಹುದು. 

ಫ್ಲಿಪ್‌ಕಾರ್ಟ್‌ನಿಂದ MarQ ಆ್ಯಂಡ್ರಾಯ್ಡ್ 9.0 ಸ್ಮಾರ್ಟ್ TV ಬಿಡುಗಡೆ

ಬ್ಲಾವ್‍ಪಂಕ್ಟ್ ಹೆಜ್ಜೆಗುರುತು ಆಂಡ್ರಾಯಿಡ್ ಟಿ.ವಿ.ಗಳ ಬಿಡುಗಡೆಯಿಂದ ಆರಂಭಗೊಂಡಿದೆ.  `ಆತ್ಮನಿರ್ಭರ ಭಾರತ’ ಅಥವಾ ಸ್ವಾವಲಂಬಿ ಭಾರತದ ಆವೇಗವನ್ನು ಅನುಸರಿಸಲು ನಾವು ಬದ್ಧರಾಗಿದ್ದೇವೆ.   ಫ್ಲಿಪ್‍ಕಾರ್ಟ್‍ನೊಂದಿಗೆ ನಮ್ಮ ಪ್ರಸ್ತುತ ಸಹಯೋಗವು ಹೊಸ ತಲೆಮಾರಿನ ಸ್ಮಾರ್ಟ್ ಟಿ.ವಿ.ಗಳನ್ನು ದೇಶಾದ್ಯಂತ ತನ್ನ ಲಕ್ಷಾಂತರ ಗ್ರಾಹಕರಿಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಬಿಡುಗಡೆಯಿಂದ ನಾವು ಮುಂದಿನ 3 ವರ್ಷಗಳಲ್ಲಿ ಶೇ.15ರಷ್ಟು ಮಾರುಕಟ್ಟೆ ಪಡೆಯುವ ನಿರೀಕ್ಷೆ ಹೊಂದಿದ್ದೇವೆ ಎಂದು ಸೂಪರ್ ಪ್ಲಾಸ್ಟ್ರಾನಿಕ್ಸ್ ಸಿಇಒ ಅವ್‍ನೀತ್ ಸಿಂಗ್ ಮಾರ್ವಾ ಹೇಳಿದ್ದಾರೆ.  

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ನಿಮ್ಮ ಪವರ್‌ ಬ್ಯಾಂಕ್‌ನಲ್ಲಿ ಈ 5 ಸಂಕೇತ ಕಂಡರೆ ಅದು ಟೈಂ ಬಾಂಬ್! ತಕ್ಷಣ ಈ ಕೆಲಸ ಮಾಡಿ, ದುರಂತ ತಪ್ಪಿಸಿ!
ಜಿ ಮೇಲ್ ಫುಲ್ ಆಗಿದ್ಯಾ? Zoho Mail ಟ್ರೈ ಮಾಡಿ