ಮಾ.23ಕ್ಕೆ ಒನ್‌ಪ್ಲಸ್9 ಸೀರೀಸ್ ಫೋನ್ ಜತೆಗೆ ಸ್ಮಾರ್ಟ್ ವಾಚ್ ಬಿಡುಗಡೆ

By Suvarna NewsFirst Published Mar 17, 2021, 4:30 PM IST
Highlights

ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಮನೆಮಾತಾಗಿರುವ ಒನ್‌ಪ್ಲಸ್ ಕಂಪನಿ ಮಾರ್ಚ್ 23ರಂದು ಒನ್‌ಪ್ಲಸ್ 9 ಸೀರೀಸ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಇನ್ನೊಂದು ವಿಶೇಷ ಎಂದರೆ, ಕಂಪನಿಯ ಇದೇ ಮೊದಲ ಬಾರಿಗೆ ಸ್ಮಾರ್ಟ್‌ವಾಚ್ ಕೂಡ ಬಿಡುಗಡೆ ಮಾಡುತ್ತಿದೆ. ಈ ಹಿಂದೆ ಕಂಪನಿ ಫಿಟ್ನೆಸ್ ಬ್ಯಾಂಡ್ ಅನ್ನು ಬಿಡುಗಡೆ ಮಾಡಿತ್ತು.

ಹೆಚ್ಚಾಗಿ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೂಲಕವೇ ಹೆಚ್ಚು ಗಮನ ಸೆಳೆಯುತ್ತಿರುವ ಒನ್‍ಪ್ಲಸ್ ಕಂಪನಿ, ಇದೇ ಮೊದಲ ಬಾರಿಗೆ ಸ್ಮಾರ್ಟ್‌ವಾಚ್ ಅನ್ನು ಮಾರ್ಚ್ 23ರಂದು ಬಿಡುಗಡೆ ಮಾಡಲಿದೆ.

ಹೌದು ನೀವು ಓದುತ್ತಿರುವುದು ಸರಿಯಾಗಿಯೇ ಇದೆ. ಕಂಪನಿಯು ಮಾರ್ಚ್ 23ರಂದು ಒನ್‌ಪ್ಲಸ್ 9 ವ್ಯಾಪ್ತಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಈ ಸ್ಮಾರ್ಟ್‌ಫೋನ್‌ಗಳ ಜತೆಗೆ ಒನ್‌ಪ್ಲಸ್ ವಾಚ್ ಕೂಡ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಕಾಣಲಿರುವ ಈ ವಾಚ್, ಭಾರತದ ಮಾರುಕಟ್ಟೆಗೂ ಲಾಂಚ್ ಆಗಲಿದೆ. ಈ ವಿಷಯವನ್ನು ಟ್ವಿಟರ್‌ನಲ್ಲಿ ಒನ್‌ಪ್ಲಸ್ ಇಂಡಿಯಾ ಖಾತೆಯಲ್ಲಿ ಹಂಚಿಕೊಳ್ಳಲಿದೆ.

ಚುನಾವಣೆ, ಆರ್ಥಿಕ ಮಾಹಿತಿ ನೀಡುವ BolSubol ಆಪ್ ಬಿಡುಗಡೆ

ಮಾರ್ಚ್ 23ರಂದು ಬಿಡುಗಡೆಯಾಗಲಿರುವ ಸ್ಮಾರ್ಟ್ ವಾಚ್, ಒನ್‌ಪ್ಲಸ್‌ನ ಮೊದಲ ಸ್ಮಾರ್ಟ್ ವಾಚ್ ಆಗಿರಲಿದೆ. ಅಂದರೆ ಇದೇ ಮೊದಲ ಬಾರಿಗೆ ಕಂಪನಿ ಮಾರುಕಟ್ಟೆಗೆ ಸ್ಮಾರ್ಟ್‌ವಾಚ್ ಬಿಡುಗಡೆ ಮಾಡುತ್ತಿದೆ. ಈ ವರ್ಷದ ಆರಂಭದಲ್ಲಿ ಕಂಪನಿ ಫಿಟ್ನೆಸ್ ಬ್ಯಾಂಡ್ ಬಿಡುಗಡೆ ಮಾಡಿತ್ತು. ಈ ಫಿಟ್ನೆಸ್ ಬ್ಯಾಂಡ್ ಮೂಲಕ ಒನ್‌ಪ್ಲಸ್ ಕಂಪನಿ ಅಧಿಕೃತವಾಗಿ ವೀಯರೇಬಲ್ ಮಾರುಕಟ್ಟೆಗೆ ಪ್ರವೇಶ ಪಡೆದಿತ್ತು. ಇದೀಗ ಸ್ಮಾರ್ಟ್‌ವಾಚ್ ಮೂಲಕ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತಿದೆ.

ಟ್ವಿಟರ್‌ನಲ್ಲಿ ಬಿಡುಗಡೆಯ ದಿನಾಂಕವನ್ನು ಖಚಿತಪಡಿಸುವುದರೊಂದಿಗೆ ಕಂಪನಿಯು ವಾಚ್‌ನ ಕೆಲವು ವಿಶೇಷತೆಗಳನ್ನು  ಹಂಚಿಕೊಂಡಿದೆ. ಈ ಸ್ಮಾರ್ಟ್ ವಾಚ್ ಸಿಲಿಕೋನ್ ಬ್ಯಾಂಡ್ ಮತ್ತು ವೃತ್ತಾಕಾರದ ಡಿಸ್‌ಪ್ಲೇ ಇರುವ ಸುಳಿವು ನೀಡಿದೆ.

ಕೆಲವು ವರದಿಗಳು ಪ್ರಕಾರ, ಕಂಪನಿ ಒಟ್ಟಾರೆಯಾಗಿ ಎರಡು ಸ್ಮಾರ್ಟ್‌ವಾಚ್‌ಗಳನ್ನು ಬಿಡುಗಡೆ ಮಾಡಲು ಯೋಚಿಸಿದೆ. ಈ ಪೈಕಿ ಮೊದಲನೆಯದು ವಾಚ್ ಅನ್ನು ಒನ್‌ಪ್ಲಸ್ ವಾಚ್ ಎಂದು ಕರೆಯಲಾಗುತ್ತಿದೆ ಮತ್ತು ಅದು ಚೌಕಾರಾದ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಎರಡನೆಯದು ಒನ್‌ಪ್ಲಸ್ ವಾಚ್ ಆರ್‌ಎಕ್ಸ್. ಈ ವಾಚ್ ರೌಂಡ್ ಡಿಸ್‌ಪ್ಲೇ ಅನ್ನು ಒಳಗೊಂಡಿರಲಿದೆ.  

ಈ ಎರಡೂ ವಾಚ್‌ಗಳು ಒಬ್ಸಿಡಿಯನ್ ಬ್ಲ್ಯಾಕ್ ಬಣ್ಣದ ಆಯ್ಕೆಯಲ್ಲಿ ದೊರೆಯಲಿದೆ. ಡಾರ್ಕ್ ಥೀಮ್, ಅಮೋಎಲ್ಇಡಿ ಡಿಸ್‌ಪ್ಲೇಗಳನ್ನು ಈ ಸ್ಮಾರ್ಟ್‌ವಾಚ್‌ಗಳು ಹೊಂದಿರಲಿವೆ. ಇಂಡೋರ್ ಬೈಕಿಂಗ್, ಸ್ವಿಮ್ಮಿಂಗ್, ಯೋಗ ಸೇರಿದಂತೆ ವರ್ಕೌಟ್ ಆಕ್ಟಿವಿಟಿಗಳನ್ನು ಟ್ರ್ಯಾಕ್ ಮಾಡುವ ವರ್ಕೌಟ್ ಮೋಡ್‌ಗಳನ್ನು ಈ ವಾಚ್‌ಗಳ ಹೊಂದಿರುವ ನಿರೀಕ್ಷೆ ಇದೆ ಎಂದು ಇತ್ತೀಚಿಗೆ ಸೋರಿಕೆಯಾದ ಮಾಹಿತಿಯಿಂದ ಗೊತ್ತಾಗಿದೆ. ಇಷ್ಟು ಮಾತ್ರವಲ್ಲದೇ, ಫಿಟ್ನೆಸ್ ವೀಯರೇಬಲ್ ಎನಿಸಿಕೊಂಡಿರುವ ವಾಚ್‌ಗಳು ಸ್ಟೋರ್ಟ್ಸ್ ಟ್ರ್ಯಾಕಿಂಗ್ ಮೋಡ್‌ಗಳನ್ನು ಹೊಂದಿರಲಿದೆ ಎನ್ನಲಾಗುತ್ತಿದೆ.

ಒನ್‌ಪ್ಲಸ್ ಬಿಡುಗಡೆ ಮಾಡಲಿರುವ ಈ ಸ್ಮಾರ್ಟ್‌ವಾಚ್‌ಗಳ ಬಗ್ಗೆ ಪೂರ್ತಿಯಾದ ಮಾಹಿತಿಯನ್ನು ಕಂಪನಿ ಇದುವರೆಗೂ ಬಿಟ್ಟುಕೊಟ್ಟಿಲ್ಲ. ಬಹುಶಃ ಮಾರ್ಚ್ 23ರಂದು ಸಂಪೂರ್ಣವಾದ ಮಾಹಿತಿ ದೊರೆಯಲಿದೆ.

ಮೇರಾ ರೇಷನ್ ಕಾರ್ಡ್ ಆಪ್‌ ಬಿಡುಗಡೆ: ಸಮೀಪದ ರೇಷನ್ ಅಂಗಡಿ ಎಲ್ಲಿದೆ ತಿಳಿಯಿರಿ

ಇನ್ನು ಮಾರ್ಚ್ 23ರಂದೇ ಲಾಂಚ್ ಆಗಲಿರುವ ಒನ್‌ಪ್ಲಸ್ 9 ವ್ಯಾಪ್ತಿಯ ಸ್ಮಾರ್ಟ್‌ಫೋನ್‌ಗಳು ಕೂಡ ವಿಶಿಷ್ಟವಾದ ಫೀಚರ್‌ಗಳನ್ನು ಒಳಗೊಳ್ಳಲಿವೆ.

ಕಂಪನಿ ಒಟ್ಟು ಮೂರು ಮಾಡೆಲ್‌ಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಒನ್‌ಪ್ಲಸ್ 9 ಪ್ರೋ, ಒನ್   ಪ್ಲಸ್ 9 ಮತ್ತು ಒನ್‌ಪ್ಲಸ್ 93 ಎಂಬ ಮೂರು ಮಾಡೆಲ್‌ಗಳು ಭಾರತೀಯ ಮಾರುಕಟ್ಟೆಗೆ ಲಾಂಚ್ ಆಗಲಿವೆ. ಇದಕ್ಕಾಗಿ ಕಂಪನಿ ಈಗಾಗಲೇ ವೆಬ್‌ಪುಟವನ್ನು ರಚಿಸಿದ್ದು, ಅದರಲ್ಲಿ ನೋಟಿಫೈ ಮೀ ಆಪ್ಷನ್ ನೀಡಲಾಗಿದೆ.

ಒನ್‌ಪ್ಲಸ್ 9 ಪ್ರೋ ಸ್ಮಾರ್ಟ್‌ಫೋನ್ ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್ ಆಗಿರಲಿದೆ ಎನ್ನಲಾಗುತ್ತಿದೆ. ಈ ಫೋನ್, 6.7 ಇಂಚ್ ಅಮೋಎಲ್ಇಡಿ ಡಿಸ್‌ಪ್ಲೇ ಹೊಂದಿರಲಿದೆ. ಸ್ನ್ಯಾಪ್‌ಡ್ರಾಗನ್ 888 ಪ್ರೊಸೆಸರ್ ಇರಲಿದ್ದು, 8 ಜಿಬಿ ರ್ಯಾಮ್, 129 ಸ್ಟೋರೇಜ್ ಸಿಗಲಿದೆ. ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್ ಅಪ್ ಇರಲಿದೆ. ಈ ಪೈಕಿ ಮೊದಲನೆಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಇರಬಹುದು. ಎರಡನೆಯದು 50 ಮೆಗಾ ಪಿಕ್ಸೆಲ್, ಮೂರನಡೆಯದು 8 ಮೆಗಾ ಪಿಕ್ಸೆಲ್ ಮತ್ತು ನಾಲ್ಕನೆಯದು 2 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರಲಿದೆ ಎಂದು ಹೇಳಲಾಗುತ್ತಿದೆ.

ಪ್ರಿಪೇಡ್ ಗ್ರಾಹಕರಿಗೆ Viನಿಂದ 4 ಹೊಸ ಪ್ಲ್ಯಾನ್; ಏನೆಲ್ಲ ಲಾಭಗಳಿವೆ ಪರೀಕ್ಷಿಸಿಕೊಳ್ಳಿ!

click me!