ದೇಶದಲ್ಲೇ ಮೊದಲ ಬಾರಿಗೆ ವಿಡಿಯೋ ಕಾಲ್ ಕ್ಯಾಮಾರ ಹೊಂದಿದೆ ಆ್ಯಂಡ್ರಾಯ್ಡ್ ಟಿವಿ ಬಿಡುಗಡೆಯಾಗಿದೆ. ಮೊಬೈಲ್ ರೀತಿಯಲ್ಲೇ ಟಿವಿ ಮೂಲಕ ವಿಡಿಯೋ ಕಾಲ್ ಮಾಡಬಹುದಾದ ಸೌಲಭ್ಯ ಇದರಲ್ಲಿದೆ. ಈ ಕುರಿತ ವಿವರ ಇಲ್ಲಿದೆ
ಬೆಂಗಳೂರು(ಮಾ.11): ದೇಶದಲ್ಲೇ ಪ್ರಪ್ರಥಮ ಬಾರಿಗೆ ವೀಡಿಯೊ ಕಾಲ್ ಕ್ಯಾಮೆರಾ ಹೊಂದಿದ ಆಂಡ್ರಾಯ್ಡ್ 11 ಟಿವಿಯನ್ನು ಟಿಸಿಎಲ್ ಸಂಸ್ಥೆಯು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. P725 ಹೈ-ಎಂಡ್ ಸ್ಮಾರ್ಟ್ ಸರಣಿ ಟಿವಿ ಇದಾಗಿದೆ. ಈ ಹೊಚ್ಚ ಹೊಸ ಮಾದರಿಯು 43, 50, 55, 65 ಇಂಚುಗಳಲ್ಲಿ ಲಭ್ಯವಿದ್ದು 65 ಇಂಚಿನ ಈ TVಯು ಎಕ್ಸ್ ಕ್ಲೂಸಿವ್ ಆಗಿ ಅಮೆಜಾನ್ ನಲ್ಲಿ ಖರೀದಿಗೆ ಲಭ್ಯವಿದೆ. ಇದರ ಬೆಲೆ ರೂ 89,990.
ಅಂತಾರಾಷ್ಟ್ರೀಯ ಮಹಿಳಾ ದಿನ; ಮಹಿಳೆಯರಿಗಾಗಿ ಡಿಜಿಟಲ್ ವೇದಿಕೆ ಹರ್ ಸರ್ಕಲ್ ಆರಂಭ!
ಈ ಹೊಸ ಟವಿಗೆ ಹೊರಗಿನಿಂದ ಕ್ಯಾಮೆರಾವನ್ನು ಅಳವಡಿಸಲಾಗಿದೆ. MEMC, ಡಾಲ್ಬಿ ವಿಷನ್ ಮತ್ತು ಅಟ್ಮೋಸ್ ತಂತ್ರಜ್ಞಾನವನ್ನು ಸಹ ಹೊಂದಿದೆ. ಲಾಕ್ ಡೌನ್ ನಿಂದಾಗಿ ಬಹುತೇಕ ಎಲ್ಲಾರು ಆನ್ಲೈನ್ ವೀಡಿಯೋ ಕಾಲಿಂಗ್ ಮೂಲಕ ಮೀಟಿಂಗ್ ಗಳನ್ನು ಮಾಡುವಂತಹ ಪರಿಸ್ಥಿತಿ ಎದುರಾಗಿದೆ. ಈ ಟಿವಿಯಲ್ಲಿ ವೀಡಿಯೊ ಕಾಲ್ ಕ್ಯಾಮೆರಾ ಇರುವುದರಿಂದ ದೊಡ್ಡ ಪರದೆಯಲ್ಲಿ ಮೀಟಿಂಗ್ ಮಾಡುವ ಅನುಭವವನ್ನು ಈಗ ಪಡೆಯಬಹುದಾಗಿದೆ. ಫೇಸ್ ಬುಕ್, ಯ್ಯೂಟ್ಯೂಬ್ ಮತ್ತು ಟ್ವಿಟರ್ ಹ್ಯಾಂಡಲ್ ಬಳಸಿ ಈ ಟಿವಿಯ ಮೂಲಕ ಲೈವ್ ವೀಡಿಯೊ ಮಾಡಬಹುದಾಗಿದೆ.
ದೀಪಾವಳಿ ಪ್ರಯುಕ್ತ OTT ಚಾನಲ್ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಿ TCL!
ವೀಡಿಯೊ ಕಾಲ್ ಕ್ಯಾಮೆರಾವನ್ನು ಮ್ಯಾಗ್ನೇಟ್ ಬಳಸಿ ಟಿವಿಗೆ ಅಂಟಿಸಲಾಗಿದೆ ಆದ್ದರಿಂದ ಕ್ಯಾಮೆರಾವನ್ನು ಸುಲಭವಾಗಿ ತೆಗೆಯಬಹುದು ಮತ್ತು ಅಂಟಿಸಬಹುದಾಗಿದೆ. ವೀಡಿಯೋ ಚಾಟ್ ಗಾಗಿ ಗೂಗಲ್ ಡ್ಯುಒ ಕೂಡ ಬಳಸಬಹುದಾಗಿದೆ ಮತ್ತು ವಿದ್ಯಾರ್ಥಿಗಳ ಆನ್ ಲೈನ್ ಕ್ಲಾಸಿಗಾಗಿ ಮತ್ತು ವೃತ್ತಿಪರರ ವೀಡಿಯೊ ಕಾಲ್ ಗಳಿಗಾಗಿ ಈ ಟಿವಿಯು ಬಹಳ ಪ್ರಯೋಜನಕಾರಿ.
ಎಂಇಎಂಇ (ಮೋಷನ್ ಎಸ್ಟಿಮೆಷನ್ ಮತ್ತು ಮೋಷನ್ ಕಂಪೆನ್ಷೆಷನ್) ತಂತ್ರಜ್ಞಾನದಿಂದಾಗಿ ಚಿತ್ರಗಳು ಸ್ಪಷ್ಟವಾಗಿ ಗೋಚರಿಸುತ್ತವೆ ಮತ್ತು ಈ ತಂತ್ರಜ್ಞಾನದಿಂದಾಗಿ ಯ್ಯಾಕ್ಷನ್ ಸೀನ್ ಗಳು ಕೂಡ ಬ್ಲರ್ ಆಗುವುದಿಲ್ಲ. ಹ್ಯಾಂಡ್ಸ್-ಫ್ರೀ ವಾಯ್ಸ್ ಕಂಟ್ರೊಲ್ 2.0, ಟಿಸಿಎಲ್ ಚಾನೆಲ್ 3.0, ಡಾಲ್ಬಿ ಆಡಿಯೊ ವೀಡಿಯೊ ತಂತ್ರಜ್ಞಾನ ಸೇರಿದಂತೆ ಆಧುನಿಕ ತಂತ್ರಜ್ಞಾನವನ್ನೆಲ್ಲ ಒಳಗೊಂಡಿದೆ.
“ಗ್ರಾಹಕರ ಬೇಡಿಕೆ ಮತ್ತು ಹೊಸ ತಂತ್ರಜ್ಞಾನವನ್ನು ಪರಿಚಯಿಸುವ ತಮ್ಮ ಬದ್ದತೆಗೆ ಬಿಡುಗಡೆ ಮಾಡಿರುವ ಹೊಸ ಉತ್ಪನ್ನ ಕೈಗನ್ನಡಿಯಾಗಿದೆ. ಪಿ725 ಸರಣಿಯು ಪ್ರಥಮ 4ಕೆಎಚ್ಡಿಆರ್ ಟಿವಿಯಾಗಿ ಇದು ಆಂಡ್ರಾಯ್ಡ್ 11 ಮತ್ತು ವೀಡಿಯೊ ಕಾಲ್ ಕ್ಯಾಮೆರಾ ಸೌಲಭ್ಯ ಹೊಂದಿದೆ. ಅಷ್ಟೇ ಅಲ್ಲದೆ ಅತ್ಯಾಧುನಿಕ ಸೌಲಭ್ಯಗಳಾದ ಎಂಇಎಂಸಿ, ಡಾಲ್ಬಿ ವಿಷನ್ ಮತ್ತು ಅಟ್ಮೊಸ್, ಹ್ಯಾಂಡ್-ಫ್ರೀ ವಾಯ್ಸ್ ಕಂಟ್ರೋಲ್ 2.0 ಮತ್ತಿತರ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಎಲ್ಲಾ ಸೌಲಭ್ಯಗಳಿಂದ ಗ್ರಾಹಕರಿಗೆ ಅತ್ಯುತ್ತಮವಾಗಿ ಮನರಂಜನೆ ದೊರೆಯಲಿದೆ” ಎಂದು ಟಿಸಿಎಲ್ ಇಂಡಿಯಾ ಸಂಸ್ಥೆಯ ಜನರಲ್ ಮ್ಯಾನೇಜರ್ ಮೈಕ್ ಚೇನ್ ಹೇಳಿದರು.