ಏಪ್ರಿಲ್ ತಿಂಗಳಿನಿಂದ ಎಲ್‌ಇಡಿ ಟಿವಿಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಲಿದೆ. ಭಾರತದಲ್ಲಿ ಅತಿಹೆಚ್ಚು ಮಾರಾಟವಾಗುವ 32 ಇಂಚಿನ ಟೀವಿಗಳ ದರವು ಸುಮಾರು 5000-6000 ರು.ವರೆಗೆ ಏರಿಕೆಯಾಗಬಹುದಾಗಿದೆ.
ನವದೆಹಲಿ (ಮಾ.12): ಮುಂದಿನ ಏಪ್ರಿಲ್‌ನಿಂದ ಎಲ್‌ಇಡಿ ಟೀವಿ ದರದಲ್ಲಿ ಗಣನೀಯ ಏರಿಕೆ ಆಗಲಿದೆ. ಟೀವಿಯಲ್ಲಿ ಪ್ರಮುಖ ಭಾಗವಾಗಿರುವ ಓಪನ್-ಸೆಲ್ ಪ್ಯಾನೆಲ್‌ಗಳ ದರ ಶೇ.35ರವರೆಗೂ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ದರ ಏರಿಕೆ ಅನಿವಾರ್ಯ ಎಂದು ಟೀವಿ ಉತ್ಪಾದನಾ ಕಂಪನಿಗಳು ಹೇಳಿವೆ.
ಒಟ್ಟು ಟೀವಿ ವೆಚ್ಚದಲ್ಲಿ ಪ್ಯಾನೆಲ್‌ಗಳ ದರವೇ ಶೇ.60ರಷ್ಟಾಗಿರುವ ಹಿನ್ನೆಲೆಯಲ್ಲಿ ದರ ಏರಿಕೆ ಮಾಡದೇ ವಿಧಿಯಿಲ್ಲ ಎಂದು ಕಂಪನಿಗಳು ಹೇಳಿವೆ. ಈ ಲೆಕ್ಕಾಚಾರದಲ್ಲಿ, ಭಾರತದಲ್ಲಿ ಅತಿಹೆಚ್ಚು ಮಾರಾಟವಾಗುವ 32 ಇಂಚಿನ ಟೀವಿಗಳ ದರವು ಸುಮಾರು 5000-6000 ರು.ವರೆಗೆ ಏರಿಕೆಯಾಗಬಹುದು.
undefined
ವಿಡಿಯೋ ಕಾಲ್ ಕ್ಯಾಮಾರ ಹೊಂದಿದೆ ದೇಶದ ಮೊದಲ ಆ್ಯಂಡ್ರಾಯ್ಡ್ ಟಿವಿ ಬಿಡುಗಡೆ! ..
ಎಲ್‌ಜಿ ಸೇರಿದಂತೆ ಕೆಲ ಕಂಪನಿಗಳು ಈಗಾಗಲೇ ದರ ಏರಿಕೆ ಮಾಡಿದ್ದು, ಪ್ಯಾನಾಸೋನಿಕ್, ಹೇಯರ್, ಥಾಮ್ಸನ್ ಸೇರಿದಂತೆ ಇನ್ನಿತರ ಕಂಪನಿಗಳು ಏಪ್ರಿಲ್‌ನಿಂದ ಬೆಲೆಯನ್ನು ಶೇ.5ರಿಂದ 7ರವರೆಗೆ ಏರಿಕೆ ಮಾಡುವ ಸುಳಿವು ನೀಡಿವೆ.