ದೀಪಾವಳಿ ಬಂಪರ್‌ ಆಫರ್ ನೀಡಿದ ಮುಕೇಶ್ ಅಂಬಾನಿ; ಕೇವಲ 2599 ರೂ. ಸಿಗ್ತಿದೆ ಜಿಯೋ ಸ್ಮಾರ್ಟ್‌ಫೋನ್‌

By Vinutha Perla  |  First Published Nov 4, 2023, 9:07 AM IST

ಲಿಯನೇರ್‌ ಮುಕೇಶ್‌ ಅಂಬಾನಿ ಸಹ ಪ್ರತಿ ದೀಪಾವಳಿ ಹಬ್ಬಕ್ಕೆ ಹೊಸ ಪ್ರಾಡಕ್ಟ್‌ ಲಾಂಚ್‌ ಮಾಡೋದನ್ನು ಮರೆಯೋದಿಲ್ಲ. ಹಾಗೆಯೇ ಈ ವರ್ಷದ ದೀಪಾವಳಿಗೆ ಜನಸಾಮಾನ್ಯರಿಗೂ ಖರೀದಿಸಬಹುದಾದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ನ್ನು ಬಿಡುಗಡೆ ಮಾಡಿದ್ದಾರೆ.  ಅದರ ಬೆಲೆ ಎಷ್ಟು? ಇಲ್ಲಿದೆ ಹೆಚ್ಚಿನ ಮಾಹಿತಿ.


ಪ್ರತಿ ದೀಪಾವಳಿ ಹಬ್ಬಕ್ಕೆ ಹಲವಾರು ಬ್ರ್ಯಾಂಡ್‌ಗಳು ತಮ್ಮ ಉತ್ಪನ್ನದ ಮೇಲೆ ಡಿಸ್ಕೌಂಟ್‌ನ್ನು ಘೋಷಿಸುತ್ತವೆ. ಹೊಸ ಉತ್ಪನ್ನಗಳನ್ನು ಪರಿಚಯಿಸುತ್ತವೆ. ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ, ಬಿಲಿಯನೇರ್‌ ಮುಕೇಶ್‌ ಅಂಬಾನಿ ಸಹ ಪ್ರತಿ ದೀಪಾವಳಿ ಹಬ್ಬಕ್ಕೆ ಹೊಸ ಪ್ರಾಡಕ್ಟ್‌ ಲಾಂಚ್‌ ಮಾಡೋದನ್ನು ಮರೆಯೋದಿಲ್ಲ. ಮುಕೇಶ್ ಅಂಬಾನಿ ಕಳೆದ ಕೆಲವು ವರ್ಷಗಳಿಂದ ದೀಪಾವಳಿ ಹಬ್ಬದ ಸಮಯದಲ್ಲಿ ಹಲವಾರು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದಾರೆ. ಹಾಗೆಯೇ ಈ ವರ್ಷದ ದೀಪಾವಳಿಗೆ ಜನಸಾಮಾನ್ಯರಿಗೂ ಖರೀದಿಸಬಹುದಾದ ಕಡಿಮೆ ಬೆಲೆಯ ಆಂಡ್ರ್ಯಾಯ್ಡ್ ಮೊಬೈಲ್‌ನ್ನು ಬಿಡುಗಡೆ ಮಾಡಿದ್ದಾರೆ. 

ಭಾರತದಲ್ಲಿ ಕೈಗೆಟುಕುವ ಬೆಲೆಯ JioPhone Prima 4G ಅನ್ನು ಬಿಡುಗಡೆ ಮಾಡಲಾಗಿದೆ. ಇದರ ಬೆಲೆ ಕೇವಲ 2,599 ರೂ. ಜಿಯೋಫೋನ್‌ ಪ್ರೈಮಾ 4Gಯಲ್ಲಿ ವಾಟ್ಸಾಪ್‌ ಮತ್ತು ಯೂಟ್ಯೂಬ್‌ ಸಹ ದೊರಕಲಿದೆ ಅನ್ನೋದು ವಿಶೇಷ. ಇದು ಭಾರತದ ಅಗ್ಗದ ಫೋನ್‌ಗಳಲ್ಲಿ ಒಂದಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಮುಕೇಶ್ ಅಂಬಾನಿ ಬಿಡುಗಡೆ ಮಾಡಿದ ಎರಡನೇ 4G ಫೋನ್ ಇದಾಗಿದೆ. ಮುಕೇಶ್ ಅಂಬಾನಿ ಮತ್ತು ಅವರ ಮಗ ಆಕಾಶ್ ಅಂಬಾನಿ 2G ಯುಗದಲ್ಲಿ ಇನ್ನು  25 ಕೋಟಿ ಫೀಚರ್ ಫೋನ್ ಬಳಕೆದಾರರು ಆಂಡ್ರ್ಯಾಯ್ಡ್ ಫೋನ್‌ ಬಳಸುವಂತಾಗಲು ಹೊಸ ಹೊಸ ಪ್ರಾಡಕ್ಟ್ ಲಾಂಚ್ ಮಾಡುತ್ತಲೇ ಇದ್ದಾರೆ.

Tap to resize

Latest Videos

undefined

ಕೇವಲ 999ಕ್ಕೆ ಜಿಯೋ ಕಂಪನಿಯಿಂದ ಮೊಬೈಲ್‌: 400 ಮಂದಿಗೆ ಗಿಫ್ಟ್‌

ರಿಲಯನ್ಸ್‌ನಿಂದ ಜಿಯೋಫೋನ್‌ ಪ್ರೈಮಾ 4G ಬಿಡುಗಡೆ
ರಿಲಯನ್ಸ್‌ ಕಂಪನಿಯು ಈ ಹಿಂದೆ ಭಾರತದಲ್ಲಿ 999 ರೂ.ಗೆ Jio Bharat V2 ಫೋನ್‌ನ್ನು ಬಿಡುಗಡೆ ಮಾಡಿತ್ತು. ಸದ್ಯ ಇದಕ್ಕಿಂತ ಹೆಚ್ಚಿನ ವೈಶಿಷ್ಟ್ಯಗಳು ಮತ್ತು ಪ್ರವೇಶವನ್ನು ನೀಡಲು, ರಿಲಯನ್ಸ್ ಜಿಯೋ ಈಗ ದೀಪಾವಳಿಯ ಮುಂಚೆಯೇ ಭಾರತದಲ್ಲಿ ಜಿಯೋಫೋನ್‌ ಪ್ರೈಮಾ 4Gಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್‌, ಜಿಯೋ ನ್ಯೂಸ್ ಮೊದಲಾದವುಗಳನ್ನು ಬಳಸಬಹುದು.

ಮುಕೇಶ್ ಅಂಬಾನಿಯವರ ಹೊಸ ಜಿಯೋಫೋನ್‌ ಪ್ರೈಮಾ 4G, JioMartನಲ್ಲಿ ನೀಲಿ ಮತ್ತು ಹಳದಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಫೋನ್ ಕ್ಯಾಶ್‌ಬ್ಯಾಕ್ ಡೀಲ್‌ಗಳು, ಬ್ಯಾಂಕ್ ಆಫರ್‌ಗಳು ಮತ್ತು ಕೂಪನ್‌ಗಳನ್ನು ಒಳಗೊಂಡಿರುವ ಹಲವಾರು ಕೊಡುಗೆಗಳನ್ನು ಸಹ ಹೊಂದಿದೆ. ವಿನ್ಯಾಸಕ್ಕೆ ಬಂದಾಗ, ಹೊಸ ಜಿಯೋಫೋನ್‌ ಪ್ರೈಮಾ 4G ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಗೆ ಲಭ್ಯವಿರುವ ಮತ್ತೊಂದು ವೈಶಿಷ್ಟ್ಯದ ಫೋನ್‌ನಂತೆ ಕಾಣುತ್ತದೆ.

JioPhone ಕೇವಲ 4,999 ರೂಪಾಯಿಗೆ ಸ್ಮಾರ್ಟ್‌ಫೋನ್ ಜಿಯೋಫೋನ್ NEXT ಬದಲಾಯಿಸಿ!

ಹೆಸರೇ ಸೂಚಿಸುವಂತೆ, ಫೋನ್ 4G ಸಂಪರ್ಕ ಮತ್ತು 23 ಭಾಷೆಗಳಿಗೆ ಬೆಂಬಲದೊಂದಿಗೆ ಬರುತ್ತದೆ. ಜಿಯೋಫೋನ್‌ ಪ್ರೈಮಾ 4G 128GB ವಿಸ್ತರಿಸಬಹುದಾದ ಸಂಗ್ರಹಣೆಯೊಂದಿಗೆ ARM ಕಾರ್ಟೆಕ್ಸ್ A53 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಸಾಧನವು KaiOS ನಲ್ಲಿ ಕಾರ್ಯನಿರ್ವಹಿಸುತ್ತದೆ, ಇದು 1200 ಅಪ್ಲಿಕೇಶನ್‌ಗಳನ್ನು ಬೆಂಬಲಿಸುವ Firefox OS ಅನ್ನು ಆಧರಿಸಿದ ಆಪರೇಟಿಂಗ್ ಸಿಸ್ಟಮ್ ಆಗಿದೆ. ಫೋನ್ ಒಂದೇ ಸಿಮ್ ಮತ್ತು 3.5 ಎಂಎಂ ಆಡಿಯೊ ಜ್ಯಾಕ್‌ನೊಂದಿಗೆ ಬರುತ್ತದೆ. ಈ ಎಲ್ಲಾ ವೈಶಿಷ್ಟ್ಯಗಳು 1800mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.

click me!