ನವರಾತ್ರಿ ಹಬ್ಬಕ್ಕೆ ಒನ್‌ಪ್ಲಸ್ ಬಂಪರ್ ಕೊಡುಗೆ, ಅ.19 ರಂದು ಫೋಲ್ಡೇಬಲ್ ಫೋನ್ ಬಿಡುಗಡೆ!

By Suvarna NewsFirst Published Oct 16, 2023, 5:55 PM IST
Highlights

ನವರಾತ್ರಿ ಹಬ್ಬಕ್ಕೆ ಒನ್‌ಪ್ಲಸ್ ಭಾರತೀಯ ಗ್ರಾಹಕರಿಗೆ ಹೊಸ ಫೋನ್ ಬಿಡುಗಡೆ ಮಾಡುತ್ತಿದೆ.ಸದ್ಯ ಮಾರುಕಟ್ಟೆಯಲ್ಲಿ ಫೋಲ್ಡೇಬಲ್ ಫೋನ್ ಹೊಸ ಸಂಚಲನ ಸೃಷ್ಟಿಸಿದೆ. ಇದೀಗ ಒನ್‌ಪ್ಲಸ್ ಕೂಡ ಆಕರ್ಷಕ ಬೆಲೆಯಲ್ಲಿ ಫೋಲ್ಡೇಬಲ್ ಫೋನ್ ಬಿಡುಗಡೆ ಮಾಡುತ್ತಿದೆ. ಇದರ ವಿಶೇಷತೆ ಇಲ್ಲಿದೆ.

ನವದೆಹಲಿ(ಆ.16) ಭಾರತದ ಫೋನ್ ಮಾರುಕಟ್ಟೆಯಲ್ಲಿ ಪ್ರತಿ ದಿನ ಹೊಸ ಹೊಸ ಫೋನ್ ಬಿಡುಗಡೆಯಾಗುತ್ತಿದೆ. ಒನ್‌ಪ್ಲಸ್ ಒಪನ್ ಫೋನ್ ಅಕ್ಟೋಬರ್ 19 ರಂದು ಬಿಡುಗಡೆಯಾಗುತ್ತಿದೆ. ಈ ಕುರಿತು ಒನ್‌ಪ್ಲಸ್ ಎಕ್ಸ್ ಖಾತೆಯಲ್ಲಿ ಅಧಿಕೃತ ಘೋಷಣೆ ಮಾಡಿದೆ. ಮುಂಬೈನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಒನ್‌ಪ್ಲಸ್ ಒಪನ್ ಪೋಲ್ಡೇಬಲ್ ಫೋನ್ ಬಿಡುಗಡೆಯಾಗಲಿದೆ. ಚೀನಾ ಮೂಲದ ಒನ್‌ಪ್ಲಸ್ ಈಗಾಗಲೇ ಭಾರತದ ಮಾರುಕಟ್ಟೆ ಪ್ರಾಬಲ್ಯ ಸಾಧಿಸುತ್ತಿದೆ. ಇದರ ಬೆನ್ನಲ್ಲೇ ಫೋಲ್ಡೇಬಲ್ ಫೋನ್ ಬಿಡುಗಡೆ ಮೂಲಕ ಸಂಚಲನ ಸೃಷ್ಟಿಸಲು ಸಜ್ಜಾಗಿದೆ.

ನೂತನ ಫೋನ್‌ನಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನರೇಶನ್ 2 SoC ಸಿಸ್ಟಮ್ ಸಾಧ್ಯತೆ ಇದೆ. ಒನ್‌ಪ್ಲಸ್ 11 ಫೀಚರ್ಸ್‌ಗಿಂತ ಅತ್ಯಾಧುನಿಕ ಹಾಗೂ ಹೆಚ್ಚುವರಿ ಫೀಚರ್ಸ ಈ ಫೋನ್‌ನಲ್ಲಿರುವ ಸಾಧ್ಯತೆ ಇದೆ. 100W ರ್ಯಾಪಿಡ್ ಚಾರ್ಜಿಂಗ್, ಟ್ರಿಪಲ್ ಕ್ಯಾಮೆರಾ ಸೇರಿದಂತೆ ಹಲವು ಫೀಚರ್ಸ್ ಈ ಫೋನ್‌ನಲ್ಲಿರುವ ಸಾಧ್ಯತೆ ಇದೆ. ಇನ್ನು ಈ ಫೋನ್ ಬೆಲೆ 1,20,000 ರೂಪಾಯಿ ಎಂದು ಅಂದಾಜಿಸಲಾಗಿದೆ.  

OnePlus ಬಳಕೆದಾರರಿಗೆ ಸೂಪರ್‌ ಆಫರ್‌: ಫೋನ್‌ ಸ್ಕ್ರೀನ್‌ಗೆ ಲೈಫ್‌ಟೈಮ್‌ ವಾರಂಟಿ, 30 ಸಾವಿರ ರೂ. ವೋಚರ್!

16GB RAM ಹಾಗೂ 1TB ಸ್ಟೋರೇಜ್ ಸ್ಪೇಸ್, 7.82 AMOLED ಡಿಸ್‌ಪ್ಲೇ, 6.31 AMOLED ಸ್ಕ್ರೀನ್, 4,805mAh ಬ್ಯಾಟರಿ ಸಾಮರ್ಥ್ಯ ಸೇರಿದಂತೆ ಫಾಸ್ಟ್ ಚಾರ್ಜಿಂಗ್ ಫೀಚರ್ಸ್ ಲಭ್ಯವಿದೆ.  48 ಮೆಗಾಪಿಕ್ಸಲ್ ಮೈನ್ ಸೆನ್ಸಾರ್, 48 ಮೆಗಾಪಿಕ್ಸಲ್ ಅಲ್ಟ್ರಾವೈಡ್ ಹಾಗೂ 64 ಮೆಗಾಪಿಕ್ಸಲ್ ಪೆರಿಸ್ಕೋಪ್ ಲೆನ್ಸ್ ಸೇರಿದಂತೆ ಹಲವು ಫೀಚರ್ಸ್ ಹೊಂದಿರುವ ಸಾಧ್ಯತೆ ಇದೆ.

ಒನ್‌ಪ್ಲಸ್ ಒಪನ್ ಫೋನ್ ನೇರವಾಗಿ ಸ್ಯಾಮ್ಸಂಗ್ ಗ್ಯಾಲಕ್ಸಿ Z ಫೋಲ್ಡ್ 5 ಫೋನ್‌ಗೆ ಪ್ರತಿಸ್ಪರ್ಧಿಯಾಗಿದೆ. ಅಕ್ಟೋಬರ್ 19 ರಂದು ಭಾರತದಲ್ಲಿ ಬಿಡುಗಡೆಯಾಗಲಿರು ಈ ಫೋನ್, ಅಕ್ಟೋಬರ್ 27 ರಿಂದ ಮಾರಾಟಕ್ಕೆ ಲಭ್ಯವಾಗಲಿದೆ.  ಹೊಚ್ಚ ಹೊಸ ಒನ‌್‌ಪ್ಲಸ್ ಒಪನ್ ಫೋನ್ ನಿಖರ ಬೆಲೆ, ಫೀಚರ್ಸ್ ಹಾಗೂ ಇತರ ಸ್ಪೆಸಿಫಿಕೇಶನ್ ಮಾಹಿತಿ ಅಕ್ಟೋಬರ್ 19ರ ಸಂಜೆ 7.30ಕ್ಕೆ ಬಹಿರಂಗವಾಗಲಿದೆ.

OnePlus 11 ಮೊದಲ ಅಧಿಕೃತ ಟೀಸರ್ ಲಾಂಚ್! ಏನೆಲ್ಲ ವಿಶೇಷತೆಗಳಿವೆ?

ಒನ್‌ಪ್ಲಸ್ ಒಪನ್ ಫೋನ್ ಬಿಡುಗಡೆ ಕಾರ್ಯಕ್ರಮ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಒನ್‌ಪ್ಲಸ್ ಅಧಿಕೃತ ವೆಬ್‌ಸೈಟ್‌ನಲ್ಲಿ ಲೈವ್ ವೀಕ್ಷಿಸಲು ಸಾಧ್ಯವಿದೆ.
 

click me!