ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಆಮದು ನಿರ್ಬಂಧ ಸಡಿಲಿಕೆ, ಲೈಸೆನ್ಸ್‌ ಬದಲು ದೃಢೀಕರಣ ಕಡ್ಡಾಯ

Published : Oct 20, 2023, 09:58 AM ISTUpdated : Oct 20, 2023, 09:59 AM IST
ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಆಮದು ನಿರ್ಬಂಧ ಸಡಿಲಿಕೆ, ಲೈಸೆನ್ಸ್‌ ಬದಲು ದೃಢೀಕರಣ ಕಡ್ಡಾಯ

ಸಾರಾಂಶ

ಲ್ಯಾಪ್‌ಟಾಪ್‌, ಕಂಪ್ಯೂಟರ್‌ ಸೇರಿದಂತೆ ಇತರ ಎಲೆಕ್ಟ್ರಾನಿಕ್‌ ವಸ್ತುಗಳ ಆಮದಿನ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಿದೆ.

ನವದೆಹಲಿ (ಅ.20): ಲ್ಯಾಪ್‌ಟಾಪ್‌, ಕಂಪ್ಯೂಟರ್‌ ಸೇರಿದಂತೆ ಇತರ ಎಲೆಕ್ಟ್ರಾನಿಕ್‌ ವಸ್ತುಗಳ ಆಮದಿನ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಿದೆ. ಆಮದಿಗೆ ಲೈಸೆನ್ಸ್‌ ಕಡ್ಡಾಯ ಎಂಬ ನಿಯಮ ತೆಗೆದುಹಾಕಿ ಅವುಗಳ ಆನ್ಲೈನ್‌ ದೃಢೀಕರಣ ಕಡ್ಡಾಯಗೊಳಿಸಿದೆ.

ವಾಟ್ಸಾಪ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌: ಇನ್ಮುಂದೆ ಒಂದೇ ಫೋನ್‌ನಲ್ಲಿ 2

ವಿದೇಶಗಳಿಂದ ತರಿಸಿಕೊಳ್ಳಲಾಗುವ ಎಲೆಕ್ಟ್ರಾನಿಕ್‌ ವಸ್ತುಗಳ ಮೇಲೆ ನಿಗಾ ವಹಿಸಲು ಈ ನಿಯಮ ಜಾರಿ ಮಾಡಿರುವುದಾಗಿ ಸರ್ಕಾರ ತಿಳಿಸಿದೆ. ಆಮದಿನ ಮೇಲೆ ನಿರ್ಬಂಧ ವಿಧಿಸಿದ್ದರಿಂದ ಸಮಸ್ಯೆಗೆ ಸಿಲುಕಿದ್ದ ಕಂಪನಿಗಳಿಗೆ ಇದೀಗ ಕೊಂಚ ಸಮಾಧಾನ ಸಿಕ್ಕಂತಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ವಿದೇಶಿ ವ್ಯಾಪಾರದ ನಿರ್ದೇಶಕ ಸಂತೋಷ್ ಕುಮಾರ್‌ ಸಾರಂಗಿ, ‘ಈ ಹೊಸ ನಿಯಮ ತಕ್ಷಣದಿಂದಲೇ ಜಾರಿಗೆ ಬರಲಿದೆ. ಆಮದಾಗುತ್ತಿರುವ ಉತ್ಪನ್ನಗಳು ನಂಬಲರ್ಹ ಸಂಸ್ಥೆಗಳಿಂದ ಬರುತ್ತಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಈ ಆನ್ಲೈನ್‌ ದೃಢೀಕರಣ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ’ ಎಂದು ಹೇಳಿದ್ದಾರೆ.

ಫೇಸ್‌ಬುಕ್ ಬಳಕೆದಾರರಿಗೆ ಗುಡ್ ನ್ಯೂಸ್, ವ್ಯಾಟ್ಸ್ಆ್ಯಪ್

ಆಮದು ಮಾಡಿಕೊಳ್ಳಲಾದ ಉತ್ಪನ್ನಗಳ ಸಾರಾಂಶ, ಈ ಮೊದಲ ಆಮದು ಮತ್ತು ರಫ್ತಿನ ಮಾಹಿತಿ ಮತ್ತು ಇವುಗಳ ಮೌಲ್ಯದ ಮಾಹಿತಿಯನ್ನು ದೃಢೀಕರಿಸುವುದು ಕಡ್ಡಾಯವಾಗಿದೆ. ಎಚ್‌ಸಿಎಲ್‌, ಸ್ಯಾಮ್‌ಸಂಗ್‌, ಡೆಲ್‌, ಎಲ್‌ಜಿ, ಏಸರ್‌, ಆ್ಯಪಲ್‌, ಲೆನವೋ ಮತ್ತು ಎಚ್‌ಪಿ ಕಂಪನಿಯ ಲ್ಯಾಪ್‌ಟಾಪ್‌ ಮತ್ತು ಕಂಪ್ಯೂಟರ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿತ್ತು.

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ನಿಮ್ಮ ಪವರ್‌ ಬ್ಯಾಂಕ್‌ನಲ್ಲಿ ಈ 5 ಸಂಕೇತ ಕಂಡರೆ ಅದು ಟೈಂ ಬಾಂಬ್! ತಕ್ಷಣ ಈ ಕೆಲಸ ಮಾಡಿ, ದುರಂತ ತಪ್ಪಿಸಿ!
ಜಿ ಮೇಲ್ ಫುಲ್ ಆಗಿದ್ಯಾ? Zoho Mail ಟ್ರೈ ಮಾಡಿ