55 ಇಂಚಿನ Mi QLED TV 4K ಟಿವಿ ಬಿಡುಗಡೆ, ಬೆಲೆ ಇಷ್ಟು

By Suvarna NewsFirst Published Dec 17, 2020, 4:47 PM IST
Highlights

ಶಿಯೋಮಿ ಬುಧವಾರ ಭಾರತೀಯ ಮಾರುಕಟ್ಟೆಗೆ ಎಂಐ ಕ್ಯೂಎಲ್ಇಡಿ ಟಿವಿ 4ಕೆ ಟಿವಿಯನ್ನು ಬಿಡುಗಡೆ ಮಾಡಿದೆ. ಆಕರ್ಷಕ ಫೀಚರ್‌ಗಳನ್ನು ಒಳಗೊಂಡಿರುವ ಈ ಟಿವಿ ಕೇವಲ 55 ಇಂಚಿನ ಕೆಟಗರಿಯಲ್ಲಿ ಮಾತ್ರವೇ ಮಾರಾಟಕ್ಕೆಲಭ್ಯವಿದೆ.

ಪ್ರೀಮಿಯಂ ಮತ್ತು ಬಜೆಟ್ ಸ್ಮಾರ್ಟ್‌ಫೋನ್‌ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುವ ಚೀನಾ ಮೂಲದ ಶಿಯೋಮಿ ಸ್ಮಾರ್ಟ್ ಟಿವಿಗಳನ್ನೂ ಮಾರಾಟ ಮಾಡುತ್ತದೆ. ಇದೀಗ, ಶಿಯೋಮಿ ಹೊಸ ಸ್ಮಾರ್ಟ್ ಟಿವಿಯೊಂದನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

55 ಇಂಚಿನ Mi QLED TV 4K ಟಿವಿಯನ್ನು ಬುಧವಾರ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಈ ಟಿವಿಯ ಬೆಲೆ 54,999 ರೂಪಾಯಿ. ಈ ಟಿವಿ 55 ಇಂಚು ಬಿಟ್ಟು ಬೇರೆ ಯಾವುದೇ ಮಾದರಿಯಲ್ಲಿ ಮಾರಾಟಕ್ಕೆ ಲಭ್ಯವಿಲ್ಲ. ಬುಧವಾರ ಬಿಡುಗಡೆಯಾಗಿದ್ದರೂ ಡಿಸೆಂಬರ್ 21 ಮಧ್ಯಾಹ್ನ 12 ಗಂಟೆಗೆ mi.com ವೆಬ್‌ಸೈಟ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ. ಜೊತೆಗೆ, ಎಂಐ ಹೋಮ್, ಫ್ಲಿಪ್‌ಕಾರ್ಟ್, ವಿಜಯ್ ಸೇಲ್ಸ್ ಇತರ ರಿಟೇಲ್‌  ಸ್ಟೋರ್‌ಗಳಲ್ಲೂ ಮಾರಾಟಕ್ಕೆ ಲಭ್ಯವಾಗಲಿದೆ.

ಆಕರ್ಷಕ ವಿನ್ಯಾಸದ ರೆಡ್‌ಮಿ ಕೆ40 ಇಮೇಜ್ ಸೋರಿಕೆ

ಕಳೆದ ಎರಡು ವರ್ಷಗಳಿಂದ ಗ್ರಾಹಕರಿಂದ ಸಿಗುತ್ತಿರುವ ಪ್ರತಿಕ್ರಿಯೆಯು ನಮ್ಮಲ್ಲಿಟ್ಟಿರುವ ವಿಶ್ವಾಸದ ಪ್ರತೀಕವಾಗಿದ್ದು, ಈ ವಿಭಾಗದಲ್ಲಿ ನಮ್ಮ ನಾಯಕತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಕಳೆದ ಒಂದು ವರ್ಷದಲ್ಲಿ 4ಕೆ ಸೀರಿಸ್ ಟಿವಿಗಳನ್ನು ಬಿಡುಗಡೆ ಮಾಡಿದ ಬಳಿಕ, ಈ ವಿಭಾಗದಲ್ಲಿ ನಾವು ಶೇ.55ರಷ್ಟು ಬೆಳವಣಿಗೆಗೆ ಸಾಕ್ಷಿಯಾಗಿದ್ದೇವೆ. ಕ್ಯೂಎಲ್ಇಡಿ ಸ್ಮಾರ್ಟ್ ಟಿವಿಯನ್ನು ಬಿಡುಗಡೆ ಮಾಡುವ ಮೂಲಕ ನಾವು ಮತ್ತಷ್ಟು ನಮ್ಮ ಸ್ಥಾನವನ್ನು ಗಟ್ಟಿಗೊಳಿಸುತ್ತಿದ್ದೇವೆ ಎಂದು ಎಂಐ ಟಿವಿ ಎಂಐ ಇಂಡಿಯಾ ಕೆಟಗರಿ ಲೀಡ್ ಈಶ್ವರ್ ನೀಲಕಂಠನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಟಿವಿ ವಿಶೇಷತೆಗಳೇನು?
ಎಂಐ ಕ್ಯೂಎಲ್ಇಡಿ ಟಿವಿ 4ಕೆ 55 ಇಂಚು, ಅಲ್ಟ್ರಾ ಎಚ್‌ಡಿ ಕ್ಯೂಎಲ್ಇಡಿ ಸ್ಕ್ರೀನ್ ಹೊಂದಿದ್ದು, ಎಚ್ಎಲ್ಜಿ, ಎಚ್‌ಡಿಆರ್10, ಎಚ್‌ಡಿಆರ್10 ಪ್ಲಸ್ ಮತ್ತು ಡಾಲ್ಬಿ ವಿಷನ್‌ ಸೇರಿದಂತೆ ಅನೇಕ ಎಚ್‌ಡಿಆರ್ ನಮೂನೆಗಳಿವೆ. ಆಂಡ್ರಾಯ್ಡ್‌ನ ಹೊಸ ಆವೃತ್ತಿಯ ಆಧರಿತ ಬಿಡುಗಡೆಯಾಗಿರುವ ಭಾರತದ ಮೊದಲ ಟಿವಿ ಇದಾಗಿದೆ. ಹಾಗಿದ್ದೂ, ಗೂಗಲ್ ಟಿವಿ ಲಾಂಚರ್ ಇದರಲ್ಲಿ ರನ್ ಆಗುವುದಿಲ್ಲ.

ಜನವರಿಯಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ S21 ಸೀರಿಸ್ ಫೋನ್‌ ಬಿಡುಗಡೆ

ಮೀಡಿಯಾ ಟೆಕ್ ಎಂಟಿ9611 ಕ್ವಾಡ್ ಕೋರ್ ಪ್ರೊಸೆಸರ್ ಇದ್ದು, ಇಂಟರ್ಫೇಸ್ ಆಧರಿತವಾಗಿದೆ. ಆಪ್‌ಗಳಿಗಾಗಿ 2ಜಿಬಿ ರ್ಯಾಮ್ ಮತ್ತು 32 ಜಿಬಿ ಅಂತರ್ಗತ ಸ್ಟೋರೇಜ್ ಇದೆ. 6 ಸ್ಪೀಕರ್ ಸಿಸ್ಟಮ್‌ನೊಂದಿಗೆ 30w ಸೌಂಡ್ ಔಟ್‌ಪುಟ್ ಇದ್ದು, ಈ ಪೈಕಿ ನಾಲ್ಕು ಪೂರ್ಣ ವ್ಯಾಪ್ತಿಯ ಟ್ರೈವರ್ಸ್ ಇದ್ದರೆ ಉಳಿದ ಎರಡು ಸ್ವೀಕರ್‌ಗಳು ಟ್ವೀಟರ್ಸ್ ಆಗಿವೆ.

ಮೂರು ಎಚ್‌ಡಿಎಂಐ ಪೋರ್ಟ್ಸ್ ಮತ್ತು ಎರಡು ಯುಎಸ್‌ಬಿ ಪೋರ್ಟ್‌ಗಳು ಈ ಟಿವಿಯಲ್ಲಿವೆ.  ಶಿಯಮೊಮಿಯ ಇನ್ನುಳಿದ ಟಿವಿಗಳಂತೆ, ಪ್ಯಾಚ್‌ವಾಲ್ 3.5 ಹೊಸ ಆವೃತ್ತಿಯ ಪ್ಯಾಚ್‌ವಾಲ್ ಲಾಂಚರ್‌ ಆಧರಿತವಾಗಿದೆ ಈ ಹೊಸ ಟಿವಿ. ಈ ಹಿಂದಿನ ಎಂಐ ಟಿವಿ ಮಾಡೆಲ್‌ಗಳಿರುವ ರಿಮೋಟ್ ಕಂಟ್ರೋಲ್ ಈ ಟಿವಿಗೂ ಇದೆ. ರಿಮೋಟ್ ಮೂಲಕವೇ ನೀವು ನೇರವಾಗಿ ನೆಟ್‌ಫ್ಲಿಕ್ಸ್, ಅಮಜಾನ್ ಪ್ರೈಮ್ ವಿಡಿಯೋ, ಗೂಗಲ್  ಅಸಿಸ್ಟಂಟ್‌ಗೆ ಪ್ರವೇಸ ಪಡೆದುಕೊಳ್ಳಬಹುದು.

Mi QLED TV 4K ಬೆಲೆ 54,999 ರೂಪಾಯಿ ಎಂದು ಶಿಯೋಮಿ ನಿಗದಿ ಮಾಡಿದೆ. ಕೇವಲ 55 ಇಂಚಿನ ಕೆಟಗರಿಯಲ್ಲಿ ಈ ಟಿವಿ ಮಾರಾಟಕ್ಕೆ ದೊರೆಯಲಿದೆ. ಈ ಟಿವಿ ಒನ್‌ಪ್ಲಸ್ ಟಿವಿ ಕ್ಯೂ1 ಟಿಸಿಎಲ್ 55ಸಿ715 ಟಿವಿಗಳಿಗೆ ಸ್ಪರ್ಧೆಯೊಡ್ಡಲಿದೆ. ವಾಸ್ತವದಲ್ಲಿ ಈ ಟಿವಿಗಳಿಗೆ ಹೋಲಿಸಿದರೆ ಬೆಲೆಯಲ್ಲಿ ತುಸು ಅಗ್ಗವಾಗಿದ್ದು, ಅಷ್ಟೇ ಫೀಚರ್‌ಗಳನ್ನು ನೀಡುತ್ತಿದೆ ಎನ್ನುತ್ತಾರೆ ವಿಶ್ಲೇಷಕರು.

ಜಾಗತಿಕ ಬಿಡುಗಡೆ ಸಿದ್ಧವಾದ Mi Watch Lite: ಇದು ಬಜೆಟ್ ಫ್ರೆಂಡ್ಲೀ

click me!