ಕಿವಿಯೊಳಗೇ ಸಿಡಿದ ಜೆಬಿಎಲ್ ಇಯರ್ ಬಡ್: ಎಂಬಿಬಿಎಸ್ ವಿದ್ಯಾರ್ಥಿನಿಗೆ ಗಂಭೀರ ಗಾಯ

Published : Apr 11, 2026, 10:03 PM IST
JBL Earbud blasted while using

ಸಾರಾಂಶ

ರಾಜಸ್ತಾನದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರ ಕಿವಿಯಲ್ಲಿದ್ದ ಜೆಬಿಎಲ್ ಇಯರ್‌ಬಡ್ ಸ್ಫೋಟಗೊಂಡು ಕಿವಿಗೆ ಹಾನಿಯಾಗಿದೆ. ಈ ಘಟನೆಯನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವೈರ್‌ಲೆಸ್ ಇಯರ್‌ಬಡ್‌ಗಳ ಸುರಕ್ಷತೆಯ ಬಗ್ಗೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.

ಕಿವಿಯೊಳಗೇ ಸಿಡಿದ ಜೆಬಿಎಲ್ ಇಯರ್ ಬಡ್:

ಇತ್ತೀಚೆಗೆ ಬಹುತೇಕ ಯುವಕ ಯುವತಿಯರು ಇಯರ್ ಬಡ್‌ಗಳನ್ನೇ ಬಳಸುತ್ತಾರೆ. ವೈರ್‌ಲೆಸ್ ಆಗಿರುವ ಈ ಇಯರ್ ಬಡ್‌ಗಳನ್ನು ಕಿವಿಗೆ ಹಾಕಿ ಒಬ್ಬರೇ ಮಾತನಾಡಿಕೊಂಡು ಹೋಗುತ್ತಿದ್ದರೆ ಹಿಂದಿನ ತಲೆಮಾರಿನ ಜನರು ಇವನಿಗೇನು ಮಾನಸಿಕವೇ ಒಬ್ಬನೇ ಮಾತಾಡಿಕೊಂಡು ಹೋಗ್ತಿದ್ದಾನಲ್ಲ ಎಂಬಂತೆ ನೋಡುತ್ತಾರೆ. ಬಹುತೇಕ ಯುವ ಜನರ ಫೇವರೇಟ್ ಇಯರ್ ಬಡ್ ಎನಿಸಿರುವ ಈ ಇಯರ್ ಬಡ್‌ ಕಿವಿಯಲ್ಲಿದ್ದಾಗಲೇ ಸ್ಫೋಟಗೊಂಡಿದೆ ಎಂದು ಯುವತಿಯೊಬ್ಬರು ಹೇಳಿಕೊಂಡಿದ್ದು, ಈ ವಿಚಾರ ಈಗ ತೀವ್ರ ಕಳವಳಕ್ಕೆ ಕಾರಣವಾಗಿದೆ.

ರಾಜಸ್ತಾನದ ಮೆಡಿಕಲ್ ವಿದ್ಯಾರ್ಥಿನಿಗೆ ಗಾಯ

ಹೌದು ರಾಜಸ್ತಾನದ ಮೆಡಿಕಲ್ ವಿದ್ಯಾರ್ಥಿಯೊಬ್ಬರು, ಜೆಬಿಎಲ್ ಇಯರ್‌ಬಡ್‌ ಕಿವಿಗೆ ಹಾಕಿರುವಾಗಲೇ ಸ್ಪೋಟಗೊಂಡು ತಮ್ಮ ಕಿವಿಗೆ ಹಾನಿಯಾಗಿರುವುದಾಗಿ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹೇಳಿಕೊಂಡಿದ್ದು, ಅವರ ಪೋಸ್ಟ್ ಈಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್‌ಗೆ ಜೆಬಿಎಲ್ ಸಂಸ್ಥೆಯೂ ಕೂಡ ಪ್ರತಿಕ್ರಿಯಿಸಿದು ಅವರಿಗೆ ಕೆಲವು ಸಲಹೆಗಳನ್ನು ನೀಡಿದೆ.

ಎಂಬಿಬಿಎಸ್ ವಿದ್ಯಾರ್ಥಿ ಮಾಡಿದ ಪೋಸ್ಟ್‌ನಲ್ಲಿ ಏನಿದೆ. JBL ಬಲಭಾಗದ ಇಯರ್‌ಫೋನ್ ನನ್ನ ಕಿವಿಯಲ್ಲಿ ಸಿಡಿದು ಟಿಎಂ ಪೊರೆಯ ಉರಿಯೂತಕ್ಕೆ ಕಾರಣವಾಯಿತು. ಇದು ಒಂದು ತಿಂಗಳ ಹಿಂದೆ ನನ್ನ ಸಹೋದರಿ ನನಗೆ ಉಡುಗೊರೆಯಾಗಿ ನೀಡಿದ್ದಳು, ಜೆಬಿಎಲ್ ಟ್ಯೂನ್ ಬೀಮ್ 2 ಎಂದು ಬರೆದು ಅವರು @JBLaudioಗೆ ಟ್ಯಾಗ್ ಮಾಡಿದ್ದಾರೆ. ಜೊತೆಗೆ ಅವರು ಘಟನೆಯ ಬಳಿಕ ವೈದ್ಯರ ಬಳಿ ತಮ್ಮನ್ನು ತಾವು ತೋರಿಸಿಕೊಂಡ ಬಳಿಕ ವೈದ್ಯರು ನೀಡಿದ ಪ್ರಿಸ್ಕ್ರಿಪ್ಸನ್‌ ಫೋಟೋವನ್ನು ಕೂಡ ಅವರು ಹಂಚಿಕೊಂಡಿದ್ದಾರೆ.

ಕಿವಿಗೆ ಹಾನಿ, ತಲೆತಿರುಗುವಿಕೆ, ವಾಂತಿ:  ಕಂಪನ ಸೃಷ್ಟಿಸಿದ ವೈದ್ಯಕೀಯ ವರದಿ

ಆ ವೈದ್ಯಕೀಯ ಪ್ರಿಸ್ಕ್ರಿಪ್ಷನ್‌ನಲ್ಲಿ ಘಟನೆಯ ಬಳಿಕ ಯುವತಿಗೆ ತಲೆತಿರುಗುವಿಕೆ, ವಾಕರಿಕೆ ಮತ್ತು ವಾಂತಿಯಂತಹ ಲಕ್ಷಣಗಳು ಕಂಡುಬಂದಿದ್ದು, ಗಾಯಕ್ಕೆ ವೈದ್ಯಕೀಯ ಮೌಲ್ಯಮಾಪನ ಮತ್ತು ಚಿಕಿತ್ಸೆಯ ಅಗತ್ಯವಿದೆ ಎಂದು ಸೂಚಿಸಲಾಗಿದೆ. ಈ ವಿಚಾರದ ಬಗ್ಗೆ ನೆಟ್ಟಿಗರು ಚರ್ಚಿಸಲು ಆರಂಭಿಸಿದ್ದರಿಂದ ಈ ಪೋಸ್ಟ್ ಶೀಘ್ರದಲ್ಲೇ ವೈರಲ್ ಆಯ್ತು. ಹೀಗಾಗಿ ಜೆಬಿಎಲ್ ಇಯರ್ ಬಡ್ ಕಂಪನಿ ಯುವತಿಯ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದು, ಈ ದೂರನ್ನು ಗಮನಿಸಿದ್ದಾಗಿ ಹೇಳಿದೆ. ಅಲ್ಲದೇ ಈ ವಿಚಾರವನ್ನು ಭಾರತದ ತಂಡಕ್ಕೆ ಮುಂದಿನ ಕ್ರಮಕ್ಕಾಗಿ ಹಸ್ತಾಂತರಿಸಿರುವುದಾಗಿ ಹಾಗೂ ಬಳಕೆದಾರರ ಜೊತೆ ನೇರ ಸಂಪರ್ಕಕ್ಕೆ ಸೂಚಿಸಿರುವುದಾಗಿಯೂ ಹೇಳಿದೆ.

ಇದನ್ನೂ ಓದಿ: ಭೂಮಿಗೆ ಭಾರವಾದ ಜನಸಂಖ್ಯೆ: ನಾವಿರೋದು 8.3 ಶತಕೋಟಿ : ಆದರೆ ಭೂಮಿಯ ಸಾಮರ್ಥ್ಯ ಇರೋದೆಷ್ಟು?

ಜೊತೆಗೆ ಬ್ರ್ಯಾಂಡ್ ಪರಿಸ್ಥಿತಿಯನ್ನು ತನಿಖೆ ಮಾಡುತ್ತಿದೆ ಎಂದು ದೃಢಪಡಿಸಿದೆ ಆದರೆ ಡಿವೈಸ್‌ನ ಸ್ಫೋಟದಿಂದ ಹೀಗಾಯ್ತೆ ಅಥವಾ ಹಾರ್ಡ್‌ವೇರ್ ವೈಫಲ್ಯದಿಂದ ಹೀಗಾಗಿರಬಹುದೇ ಎಂದು ಅದು ಖಚಿತಪಡಿಸಿಲ್ಲ. ಆದರೆ ಈ ಘಟನೆ ಆನ್‌ಲೈನ್‌ನಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ.. ಕೆಲವು ಬಳಕೆದಾರರು ವೈರ್‌ಲೆಸ್ ಇಯರ್‌ಬಡ್‌ಗಳ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು ಮತ್ತು ಅಧಿಕ ಬಿಸಿಯಾಗುವುದು ಅಥವಾ ಸಾಧನದ ಹಠಾತ್ ಸ್ಥಗಿತಕ್ಕೆ ಸಂಬಂಧಿಸಿದ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡರು. ಇತರರು ವಾಲ್ಯೂಮ್ ಮಟ್ಟಗಳು, ನಿರಂತರ ಬಳಕೆ ಅಥವಾ ಸಂಬಂಧವಿಲ್ಲದ ವೈದ್ಯಕೀಯ ಅಂಶಗಳಿಂದ ಗಾಯ ಉಂಟಾಗಿರಬಹುದೇ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಇಂದಿನ ಶೇಕಡಾ 90ರಷ್ಟು ಯುವ ಸಮೂಹ ಇಂತಹದ್ದೇ ಇಯರ್ ಬಡ್ ಬಳಸುತ್ತಿರುವುದರಿಂದ ಈ ವಿಚಾರ ಈಗ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಮಗಳ ಕನಸಿಗೆ ರೆಕ್ಕೆ ಕಟ್ಟಿದ ಅಪ್ಪ: ಪೊಲೀಸ್ ಇಲಾಖೆಗೆ ಆಯ್ಕೆಯಾದ ಸಂಭ್ರಮದಲ್ಲಿ ಅಪ್ಪನನ್ನೇ ಹೊತ್ತು ಕುಣಿದ ಸುಮೇಧಾ!

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಯೂಟ್ಯೂಬ್ ನಂತೆ WhatsApp ನಲ್ಲೂ ಸಾವಿರಾರು ರೂ. ಅರ್ನ್ ಮಾಡಲು ಬರ್ತಿದೆ ಹೊಸ ಫೀಚರ್‌
ಹಳೆಯ ಸ್ಮಾರ್ಟ್ ಟಿವಿಗಳಲ್ಲಿ ನೆಟ್‌ಫ್ಲಿಕ್ಸ್ ಇನ್ಮುಂದೆ ಬರಲ್ಲ; ಯಾವುದೇ ಮುನ್ಸೂಚನೆ ಇಲ್ಲದೆ ಶಾಕ್ ನೀಡಿದ ಸ್ಟ್ರೀಮಿಂಗ್ ದೈತ್ಯ!