ಬೆಂಗಳೂರು(ಸೆ.24): ಆಧುನಿಕ ಗ್ರಾಹಕರಿಗೆ ಕಂಪ್ಯೂಟಿಂಗ್ ಅನುಭವವನ್ನು ಮರುವ್ಯಾಖ್ಯಾನಿಸುವ ನಿಟ್ಟಿನಲ್ಲಿ HP ಆಲ್-ಇನ್-ಒನ್ ಪಿಸಿ ಗಳನ್ನು (AIO) ಬಿಡುಗಡೆ ಮಾಡಿದೆ. ಮನೆಯಲ್ಲೇ ಇದ್ದುಕೊಂಡು ಕುಟುಂಬ, ಸಹಪಾಠಿಗಳು ಮತ್ತು ಸ್ನೇಹಿತರೊಂದಿಗೆ ಕಚೇರಿ ಕೆಲಸಗಳನ್ನು ಮಾಡುವುದು, ಕಲಿಯುವುದು ಮತ್ತು ಆಟವಾಡಲು ಗ್ರಾಹಕರಿಗೆ ಪರ್ಸನಲ್ ಕಂಪ್ಯೂಟರ್ ಅತ್ಯಂತ ಅಗತ್ಯವಾದ ಸಾಧನವಾಗಿದೆ. ಪಿಸಿ ಬಳಕೆದಾರರು ತಮ್ಮ ಹಲವಾರು ಕಾರ್ಯಗಳಿಗಾಗಿ ದಿನದಲ್ಲಿ ಹೆಚ್ಚಿನ ಸಮಯವನ್ನು ತಮ್ಮ ಡಿವೈಸ್ ಗಳೊಂದಿಗೆ ಕಳೆಯುತ್ತಾರೆ. HP AIOಗಳು ತಮ್ಮ ವಿಸ್ತಾರವಾದ ಡಿಸ್ ಪ್ಲೇ ಮತ್ತು ಕಾಂಪ್ಯಾಕ್ಟ್ ಡಿಸೈನ್ ಅನ್ನು ಹೊಂದಿದ್ದು ಅವುಗಳ ಶಕ್ತಿಶಾಲಿ ವೈಶಿಷ್ಟ್ಯತೆಗಳು ಮತ್ತು ಅತ್ಯಮೂಲ್ಯವಾದ ಪ್ರಯೋಜನಗಳು ಬಳಕೆದಾರರ ಅನುಭವವನ್ನು ವೃದ್ಧಿಸಲಿವೆ.
HP ಅಪ್‌ಡೇಟೆಡ್ ವರ್ಶನ್ ಸ್ಪೆಕ್ಟರ್ 360* 13 ಲ್ಯಾಪ್‌ಟಾಪ್ ಬಿಡುಗಡೆ!
ಇಂದು HP AIO 24 ಮತ್ತು HP ಪೆವಿಲಿಯನ್ AIO 27 ಡಿವೈಸ್ ಗಳನ್ನು ಬಿಡುಗಡೆ ಮಾಡಲಾಗಿದೆ. ಎಚ್ ಪಿ ಎಈಒ 24 ಆಲ್-ಇನ್-ಒನ್ ಪಿಸಿ ಸ್ಲಿಮ್ ಅಗಿ ಸುಂದರವಾಗಿದ್ದು, ಆಧುನಿಕ ಡಿಸ್ ಪ್ಲೇ ಯನ್ನು ಹೊಂದಿದೆ. ಎಚ್ ಪಿ ಪೆವಿಲಿಯನ್ ಆಲ್-ಇನ್-ಒನ್ ಪಿಸಿಯು ಬೇಡಿಕೆ ಇರುವ ಪ್ರಾಜೆಕ್ಟ್ ಗಳನ್ನು ನಿಭಾಯಿಸಲು ಹಾಗೂ ನಿರಂತರವಾಗಿ ಮೂವಿಗಳನ್ನು ವೀಕ್ಷಿಸಿ ಆನಂದಪಡಲು ಸಾಧ್ಯವಾಗುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಮೂಲಕ ಇದು ಅಲ್ಟ್ರಾ-ಸ್ಮಾರ್ಟ್ ಪ್ಯಾಕೇಜ್ ಆಗಿದೆ. ಈ ಎರಡೂ ಎಐಒಗಳು ವೈರ್ ಲೆಸ್ ಮತ್ತು ಸ್ಮಾರ್ಟ್ ತಂತ್ರಜ್ಞಾನದ ಮೂಲಕ ಪರಿಪೂರ್ಣವಾದ ಬ್ಲೆಂಡ್ ಮತ್ತು ಕಾರ್ಯನಿರ್ವಹಣೆಯನ್ನು ನೀಡುತ್ತವೆ. ಇವುಗಳನ್ನು ಯಾವುದೇ ಆಧುನಿಕ ಸ್ಥಳಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಸೊಗಸಾಗಿ ಜೋಡಿಸಲಾಗಿದೆ.
ಗ್ರಾಹಕರು ಇಂದು ಬಹು ಪಾತ್ರಗಳನ್ನು ನಿರ್ವಹಣೆ ಮಾಡುವಂತಹ ಡಿವೈಸ್ ಗಳನ್ನು ಬಯಸುತ್ತಿದ್ದಾರೆ. ಸುಲಭವಾಗಿ ಕಚೇರಿ ಕೆಲಸಗಳನ್ನು ಮಾಡುವಂತಹವು, ಮಕ್ಕಳ ಕಲಿಕೆಗೆ ಆರಾಮವಾಗಿರುವಂತಹವು ಅಥವಾ ವಾರಾಂತ್ಯದಲ್ಲಿ ಮೂವಿಗಳನ್ನು ನೋಡಲು ಅನುಕೂಲವಾಗುವಂತಹ ಡಿವೈಸ್ ಗಳನ್ನು ಬಯಸುತ್ತಿದ್ದಾರೆ. ದೊಡ್ಡ ಸ್ಕ್ರೀನ್ ಗಳು ಮತ್ತು ಎರ್ಗೋನೊಮಿಕ್ ಕಂಟ್ರೋಲ್ ಗಳನ್ನು ಹೊಂದಿರುವ ಹೊಸ ಎಚ್ ಪಿ ಆಲ್ ಇನ್ ಒನ್ ಪಿಸಿಗಳು ಒಂದು ಕುಟುಂಬಕ್ಕೆ ಹೇಳಿ ಮಾಡಿಸಿದ ಪರಿಪೂರ್ಣವಾದ ಡಿವೈಸ್ ಗಳಾಗಿವೆ. ಹಲವಾರು ಅಪ್ ಗ್ರೇಡ್ ಆಯ್ಕೆಗಳ ಜೊತೆಗೆ ಬಳಕೆದಾರರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಗರಿಷ್ಠ ಮಟ್ಟದಲ್ಲಿ ಕಾರ್ಯವನ್ನು ನೀಡುವಂತಹ ರೀತಿಯಲ್ಲಿ ಈ ನಮ್ಮ ಡಿವೈಸ್ ಗಳನ್ನು ವಿನ್ಯಾಸಗೊಳಿಸಿದ್ದೇವೆ ಎಂದು HP ಇಂಡಿಯಾ ಮಾರ್ಕೆಟ್ ಪರ್ಸನಲ್ ಸಿಸ್ಟಮ್ಸ್ ವಿಭಾಗದ ಹಿರಿಯ ನಿರ್ದೇಶಕ ವಿಕ್ರಂ ಬೇಡಿ ಹೇಳಿದರು.
HPಯಿಂದ ಹೊಸ ಲ್ಯಾಪ್ ಟಾಪ್; ಎಷ್ಟು ತೆಳು ಇದೆ ಎಂದರೆ
ಈ ಡಿವೈಸ್ ಗಳು ದೀರ್ಘಾವಧಿಯ ಕೆಲಸ ಮತ್ತು ಕಲಿಕೆಗೆ ಪೂರಕವಾಗಿವೆ. ಈ ಆಲ್-ಇನ್-ಒನ್ ಪಿಸಿ ಪೋರ್ಟ್ ಫೋಲಿಯೋ ಸ್ಲೀಕ್ ಕ್ಲಟರ್-ಫ್ರೀ ವಿನ್ಯಾಸದೊಂದಿಗೆ ದೊಡ್ಡ ಸ್ಕ್ರೀನ್ ಅನ್ನು ಹೊಂದಿವೆ. ವಿದ್ಯಾರ್ಥಿಗಳಿಗೆ, ಮನೆಯಿಂದಲೇ ಕೆಲಸ ಮಾಡುತ್ತಿರುವ ವೃತ್ತಿಪರರಿಗೆ ಮತ್ತು ಮನೆಯಲ್ಲಿ ಮನೋರಂಜನೆಯನ್ನು ಬಯಸುವವರಿಗೆ ಸೂಕ್ತವಾದ ರೀತಿಯ ಡಿವೈಸ್ ಗಳಾಗಿವೆ. ಈ ಡಿವೈಸ್ ಗಳು ಸುಲಭವಾಗಿ ವೈಫೈ ಸಂಪರ್ಕವನ್ನು, ಅಲೆಕ್ಸಾ ವಾಯ್ಸ್ ಅಸಿಸ್ಟೆನ್ಸ್ ಗೆ ಬೆಂಬಲಿಸುತ್ತವೆ. ಎಚ್ ಡಿ ಪಾಪ್-ಅಪ್ ಕ್ಯಾಮೆರಾವನ್ನು ಸುಸಜ್ಜಿತಗೊಳಿಸಲಾಗಿದೆ. ಇದಲ್ಲದೇ, ಡ್ಯುಯೆಲ್ ಮೈಕ್ರೋಫೋನ್ ಮತ್ತು ಇನ್-ಬಿಲ್ಟ್ ಸ್ಪೀಕರ್ ಗಳನ್ನು ಒಳಗೊಂಡಿವೆ. ಈ ಮೂಲಕ ಬಳಕೆದಾರರು ತಮ್ಮ ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳುವ ಸಂದರ್ಭದಲ್ಲಿ ಸಂಪರ್ಕದಲ್ಲಿರಲು ಇವು ಅನುವು ಮಾಡಿಕೊಡುತ್ತವೆ.