'ಮೀ' ಲ್ಯಾಪ್‌ಟಾಪ್‌ಗಳೂ ಬಂದಿವೆ: ಇದರ ವಿಶೇಷತೆಗಳು ಇಂತಿವೆ

By Suvarna NewsFirst Published Jun 13, 2020, 9:59 PM IST
Highlights

ಮೀ ನೋಟ್‌ಬುಕ್‌ ಸೀರೀಸಿನಲ್ಲಿ ಎರಡು ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ಇದರ ವಿಶೇಷತೆಗಳು ಮತ್ತು ಬೆಲೆ ಈ ಕೆಳಗಿನಂತಿದೆ ನೋಡಿ

ಮುಂಬೈ, (ಜೂನ್.13): ಕೊರೋನಾದಿಂದಾಗಿ ಈಗ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ವಿಧಾನವೂ ಬದಲಾಗಿದೆ. ಮೊದಲಾದರೆ ದೊಡ್ಡದೊಂದು ಕಾರ್ಯಕ್ರಮ ಮಾಡಿ ಮೊಬೈಲ್‌, ಲ್ಯಾಪ್‌ಟಾಪ್‌ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದ್ದ ಕಂಪನಿಗಳು ಈಗ ಝೂಮ್‌ ಆ್ಯಪ್‌ ಮೂಲಕವೇ ಹೊಸ ಉತ್ಪನ್ನ ಬಿಡುಗಡೆ ಮಾಡುವಷ್ಟರ ಮಟ್ಟಿಗೆ ಬದಲಾಗಿವೆ. 

ಈ ಸಂದರ್ಭದಲ್ಲಿ ಖ್ಯಾತ ಮೊಬೈಲ್‌ ತಯಾರಿಕಾ ಕಂಪನಿ ಶವೋಮಿ ಲ್ಯಾಪ್‌ಟಾಪ್‌ ತಯಾರಿಕೆಗೂ ಕೈ ಹಾಕಿದ್ದು, ಸದ್ಯ ಮೀ ನೋಟ್‌ಬುಕ್‌ ಸೀರೀಸಿನಲ್ಲಿ ಎರಡು ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ಈ ಮೀ ನೋಟ್‌ಬುಕ್‌ ಸೀರೀಸಿನ ಆರಂಭಿಕ ಬೆಲೆ ರು.41,999.

HP ಅಪ್‌ಡೇಟೆಡ್ ವರ್ಶನ್‌ ಸ್ಪೆಕ್ಟರ್‌ 360* 13 ಲ್ಯಾಪ್‌ಟಾಪ್ ಬಿಡುಗಡೆ

ಈ ಸೀರೀಸಿನಲ್ಲಿ ಮೀ ನೋಟ್‌ಬುಕ್‌ 14 ಮತ್ತು ಮೀ ನೋಟ್‌ಬುಕ್‌ ಹಾರಿಜನ್‌ ಎಡಿಷನ್‌ ಎಂಬ ಎರಡು ಲ್ಯಾಪ್‌ಟಾಪ್‌ ಬಿಡುಗಡೆ ಆಗಿದೆ. 10ನೇ ಜನರೇಷನ್‌ ಇಂಟೆಲ್‌ ಕೋರ್‌ ಪ್ರೊಸೆಸರ್‌ ಹೊಂದಿರುವ ಲ್ಯಾಪ್‌ಟಾಪ್‌ಗಳಿವು. 

ಒಂಜು ಎ4 ಸೈಜ್‌ ಪೇಪರ್‌ ಶೀಟಿನಷ್ಟೇ ಗಾತ್ರದಲ್ಲಿರುವ ಈ ಉತ್ಪನ್ನಗಳು ನೋಡಲು ಸಣ್ಣದಾಗಿ ಮುದ್ದಾಗಿವೆ. 8ಜಿಬಿ ಡಿಡಿಆರ್‌4 ರಾಮ್‌ ಇದರ ವಿಶೇಷತೆ. ಸುಮಾರು 10 ಗಂಟೆ ಬ್ಯಾಟರಿ ಬ್ಯಾಕಪ್‌ ನೀಡಲಿದೆ ಅನ್ನುವುದು ಕಂಪನಿ ಭರವಸೆ.

ಮೀ ನೋಟ್‌ಬುಕ್‌ 14 ಹಾರಿಜನ್‌ ಎಡಿಷನ್‌ ಐ7 ಮತ್ತು ಮೀ ನೋಟ್‌ಬುಕ್‌ 14 ಐ5 ಪ್ರೊಸೆಸರ್‌ ಹೊಂದಿವೆ. 65 ವ್ಯಾಟ್‌ ಫಾಸ್ಟ್‌ ಚಾರ್ಜರ್‌ ಇದರೊಂದಿಗೆ ಸಿಗಲಿದೆ. ಎಷ್ಟುಸ್ಪೀಡ್‌ ಚಾಜ್‌ರ್‍ ಆಗುತ್ತದೆ ಎಂದರೆ ಹಾರಿಜನ್‌ ಎಡಿಷನ್‌ ಲ್ಯಾಪ್‌ಟಾಪ್‌ನಲ್ಲಿ ಮೂವತ್ತು ನಿಮಿಷದಲ್ಲಿ ಅರ್ಧ ಚಾಜ್‌ರ್‍ ಆಗಿಬಿಡುತ್ತದೆ. ಜೂನ್‌ 17ರಿಂದ ಈ ಲ್ಯಾಪ್‌ಟಾಪ್‌ಗಳು ಮಾರಾಟಕ್ಕೆ ಲಭ್ಯವಾಗಲಿದೆ.

ಮೀ ನೋಟ್‌ಬುಕ್‌ 14 ಬೆಲೆ ರು.41,999, ಮೀ ನೋಟ್‌ಬುಕ್‌ 14 ಹಾರಿಜನ್‌ ಎಡಿಷನ್‌ ಬೆಲೆ ರು.54,999

click me!