ಫ್ಲಿಪ್‌ಕಾರ್ಟ್‌ನಿಂದ MarQ ಆ್ಯಂಡ್ರಾಯ್ಡ್ 9.0 ಸ್ಮಾರ್ಟ್ TV ಬಿಡುಗಡೆ

By Suvarna News  |  First Published Sep 18, 2020, 2:36 PM IST
  • 32 ಇಂಚುಗಳ HD ಮತ್ತು 43 ಇಂಚುಗಳ ಪೂರ್ಣವಾದ HD ಹಾಗೂ  4ಕೆ ಅಲ್ಟ್ರಾ HD ರೂಪಾಂತರಗಳಲ್ಲಿ ಲಭ್ಯ
  • ಬೆಲೆ 11,999 ರೂಪಾಯಿಗಳಿಂದ ಆರಂಭ
  • ಆ್ಯಂಡ್ರಾಯ್ಡ್ ಸ್ಮಾರ್ಟ್ ಟಿವಿಯಲ್ಲಿ ರೆಟಿನಾ ಸೇಫ್ ತಂತ್ರಜ್ಞಾನ ಅಳವಡಿಕೆ

ಬೆಂಗಳೂರು(ಸೆ.18): ಭಾರತದ ಸ್ವದೇಶಿ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್, ಇಂದು ಹೊಸ ಶ್ರೇಣಿಯ ಆ್ಯಂಡ್ರಾಯ್ಡ್ 9.0 ಹೊಂದಿರುವ MarQ Smart TVಗಳನ್ನು ಬಿಡುಗಡೆ ಮಾಡಿದೆ. MarQ ಇದರೊಂದಿಗೆ ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಗ್ರಾಹಕರನ್ನು ವೇಗವಾಗಿ ಸೆಳೆಯುತ್ತಿರುವ ಫ್ಲಿಪ್ ಕಾರ್ಟ್ ಅನ್ನು ಪ್ರವೇಶಿಸಿದಂತಾಗಿದೆ. MarQ ಸ್ಮಾರ್ಟ್ ಟಿವಿಗಳು ಫ್ಲಿಪ್ ಕಾರ್ಟ್ ನಲ್ಲಿ 32 ಇಂಚುಗಳ ಎಚ್ ಡಿ ಮತ್ತು 43 ಇಂಚುಗಳ ಪೂರ್ಣವಾದ ಎಚ್ ಡಿ ಹಾಗೂ  4ಕೆ ಅಲ್ಟ್ರಾ ಎಚ್ ಡಿ ರೂಪಾಂತರಗಳನ್ನು ಹೊಂದಿದ್ದು, ಇವುಗಳ ಬೆಲೆ 11,999 ರೂಪಾಯಿಗಳಿಂದ ಆರಂಭವಾಗುತ್ತದೆ.

ಫ್ಲಿಪ್ ಕಾರ್ಟ್ ಮೂಲಕ ಮೊಟೊರೋಲಾ ಸ್ಮಾರ್ಟ್ ಹೋಂ ಅಪ್ಲೈಯನ್ಸಸ್ ಬಿಡುಗಡೆ!

Tap to resize

Latest Videos

undefined

ಭಾರತೀಯ ಸ್ಮಾರ್ಟ್ ಟಿವಿ ಮಾರುಕಟ್ಟೆ ಒಟಿಟಿ ಬಳಕೆಯಲ್ಲಿ ಗಣನೀಯ ಪ್ರಮಾಣದ ಹೆಚ್ಚಳ ಕಾಣುತ್ತಿದೆ. ಇದರ ಜತೆಗೆ ಇಂಟರ್ನೆಟ್ ಬೆಂಬಲಿತ ಸ್ಮಾರ್ಟ್ ಟಿವಿಗಳ ಬಳಕೆಯಲ್ಲಿಯೂ ಗಮನಾರ್ಹವಾದ ಬೆಳವಣಿಗೆಯನ್ನು ಕಾಣುತ್ತಿದೆ. ಇತ್ತೀಚಿನ ಡಿಎಎನ್ ಇಂಡಿಯಾ ವರದಿ ಪ್ರಕಾರ, ಭಾರತದಲ್ಲಿ ಹಿಂದೆಂದಿಗಿಂತಲೂ ಒಟಿಟಿ ಕಂಟೆಂಟ್ ಬಳಕೆ ಅತ್ಯಧಿಕವಾಗಿದೆ. ವಿಶೇಷವಾಗಿ ಪ್ರಸ್ತುತ ಸನ್ನಿವೇಶದಲ್ಲಿ ಮಿಲೇನಿಯಲ್ಸ್ ಮತ್ತು ಜೆನ್ ಝಡ್ ಪ್ರತಿದಿನ ನಾಲ್ಕು ಗಂಟೆಗಳ ಕಂಟೆಂಟ್ ಅನ್ನು ಬಳಸುತ್ತಿದ್ದಾರೆ. ಈ ಅಂಶವನ್ನು ಮನಗಂಡು MarQ Android 9.0 ಸ್ಮಾರ್ಟ್ ಟಿವಿಗಳು ರೆಟಿನಾ ಸೇಫ್ ತಂತ್ರಜ್ಞಾನ ಸೇರಿದಂತೆ ಇನ್ನಿತರೆ ವಿಶೇಷ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಯನ್ನು ಪ್ರವೇಶ ಮಾಡಿವೆ. ಈ ತಂತ್ರಜ್ಞಾನವು ಟಿವಿ ವೀಕ್ಷಕರ ಕಣ್ಣಿನ ಒತ್ತಡವನ್ನು ಕಡಿಮೆ ಮಾಡಲಿದೆ.

ಇದಲ್ಲದೇ, MarQ Android 9.0 ಸ್ಮಾರ್ಟ್ ಟಿವಿಗಳು ಎಲಿಗೆಂಟ್ ರಿಬನ್ ಮೆಟಲ್ ಸ್ಟಾಂಡ್ ಒಳಗೊಂಡಿದ್ದು, ಕಡಿಮೆ ಜಾಗವನ್ನು ತೆಗೆದುಕೊಳ್ಳುತ್ತವೆ. ಅದೇ ರೀತಿ ಪ್ರೀಮಿಯಂ ಮತ್ತು ಸ್ಲೀಕ್ ಲುಕ್ ಅನ್ನು ನೀಡುತ್ತವೆ. ಡಾಲ್ಬಿ ಆಡಿಯೋ ಅನ್ನು ಒಳಗೊಂಡಿರುವ MarQ Android 9.0 ಸ್ಮಾರ್ಟ್ ಟಿವಿಗಳು ಶೇ.1 ಕ್ಕಿಂತ ಕಡಿಮೆ ಹಾರ್ಮೋನಿಕ್ ಅಸ್ಪಷ್ಟತೆಯನ್ನು ಹೊಂದಿವೆ( ಸಾಮಾನ್ಯವಾಗಿ ಬಹುತೇಕ ಟಿವಿಗಳು ಶೇ.7 ರಷ್ಟು ಅಸ್ಪಷ್ಟತೆಯ ಪ್ರಮಾಣವನ್ನು ಹೊಂದಿರುತ್ತವೆ). ಅತ್ಯುತ್ತಮ ಧ್ವನಿ ಗುಣಮಟ್ಟವನ್ನು ಹೊಂದಿದ್ದು, ಗ್ರಾಹಕರಿಗೆ ಕರ್ಕಶ ಧ್ವನಿಯ ಬಾಧೆ ಇರುವುದಿಲ್ಲ. 3 ಎಚ್ ಡಿಎಂಐ ಮತ್ತು 2 ಯುಎಸ್ ಬಿ ಪೋರ್ಟ್ ಗಳನ್ನು ಹೊಂದುವ ಮೂಲಕ ಗ್ರಾಹಕರಿಗೆ ಅಡ್ಡಿ ರಹಿತ ಮನೋರಂಜನೆಯನ್ನು ನೀಡಲಿವೆ. 43 ಇಂಚುಗಳ ಅಲ್ಟ್ರಾ ಎಚ್ ಡಿ ಶ್ರೇಣಿಯು 4 ಎಚ್ ಡಿಎಂಐ ಮತ್ತು 3 ಯುಎಸ್ ಬಿ ಪೋರ್ಟ್ ಗಳನ್ನು ಒಳಗೊಂಡಿರುತ್ತದೆ.

ಹಬ್ಬದ ಈ ಸಂದರ್ಭದಲ್ಲಿ ಗ್ರಾಹಕರು ತಮ್ಮ ಜೀವನಶೈಲಿಗಳಿಗೆ ಹೆಚ್ಚು ಮೌಲ್ಯವನ್ನು ತಂದುಕೊಡುವಂತಹ ಹೊಸ ಉತ್ಪನ್ನಗಳನ್ನು ಎದುರು ನೋಡುತ್ತಿರುತ್ತಾರೆ. ಇಂತಹ ವಿಭಾಗದಲ್ಲಿ ಸ್ಮಾರ್ಟ್ ಟಿವಿಯೂ ಒಂದಾಗಿದೆ. ಈ ತಿಂಗಳುಗಳಲ್ಲಿ ಸ್ಮಾರ್ಟ್ ಟಿವಿಗಳ ಬಗ್ಗೆ ಹೆಚ್ಚು ಗ್ರಾಹಕರು ಒಲವು ತೋರುವುದನ್ನು ಕಾಣಬಹುದಾಗಿದೆ. ವಿಶೇಷವಾಗಿ ಮನೆಯಲ್ಲೇ ಹೆಚ್ಚು ಸಮಯ ಇರುವ ಈ ಸಮಯದಲ್ಲಿ ಗ್ರಾಹಕರು ಸ್ಮಾರ್ಟ್ ಟಿವಿಯನ್ನು ಹೆಚ್ಚು ಬಯಸುತ್ತಿದ್ದಾರೆ. ಫ್ಲಿಪ್ ಕಾರ್ಟ್ ನಿಂದ MarQ ಸದಾ ಕಾಲ ಗ್ರಾಹಕರ ಅಗತ್ಯತೆ ಮತ್ತು ಅಭಿರುಚಿಗೆ ತಕ್ಕಂತೆ ಇರಲಿದೆ. ಹೊಸ ಶ್ರೇಣಿಯ ಸ್ಮಾರ್ಟ್ ಟಿವಿಗಳು ಈ ದಿಸೆಯಲ್ಲಿ ಹೆಜ್ಜೆ ಇಟ್ಟಿವೆ. ಭಾರತವು ಸ್ಮಾರ್ಟರ್ ಮತ್ತು ಸಂಪರ್ಕಿತ ಜೀವನಶೈಲಿಯನ್ನು ಅಳವಡಿಕೆ ಮಾಡಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ MarQ ಆಂಡ್ರಾಯ್ಡ್ 9.0 ಸ್ಮಾರ್ಟ್ ಟಿವಿಗಳು ಗುಣಮಟ್ಟದಲ್ಲಿ, ವೈಶಿಷ್ಟ್ಯತೆಗಳಲ್ಲಿ ಮತ್ತು ಆಕರ್ಷಣೆಯಲ್ಲಿ ರಾಜೀ ಮಾಡಿಕೊಳ್ಳದೇ ಗ್ರಾಹಕರಿಗೆ ಕೈಗೆಟುಕುವಂತಿವೆ ಎಂದು ಫ್ಲಿಪ್ ಕಾರ್ಟ್ ನ ಪ್ರೈವೇಟ್ ಬ್ರ್ಯಾಂಡ್ ವಿಭಾಗದ ಉಪಾಧ್ಯಕ್ಷ ದೇವ್ ಅಯ್ಯರ್ ಹೇಳಿದರು. 

ಫ್ಲಿಪ್ ಕಾರ್ಟ್ ನ MarQ ತನ್ನ ಹಬ್ಬದ ಸಡಗರದಲ್ಲಿ ಭಾರತದಲ್ಲಿಯೇ ವಿನ್ಯಾಸಗೊಂಡು, ತಯಾರಾಗಿರುವ MarQ ಸ್ಮಾರ್ಟ್ ಹೋಂ ಸ್ಪೀಕರ್ ಗಳನ್ನೂ ಬಿಡುಗಡೆ ಮಾಡುತ್ತಿದೆ. MarQ ಸ್ಮಾರ್ಟ್ ಹೋಂ ಸ್ಪೀಕರ್ಸ್ ಸುಪೀರಿಯರ್ ಆಡಿಯೋ & ಬಾಸ್ ಗುಣಮಟ್ಟ ಹಾಗೂ ಹೆಚ್ಚಿಸಿದ ಧ್ವನಿ ಸಾಮರ್ಥ್ಯದಿಂದ ಗ್ರಾಹಕರ ಮನೋರಂಜನೆ ಅನುಭವವನ್ನು ಹೆಚ್ಚಳ ಮಾಡಲಿದೆ. ಈ MarQ ಸ್ಮಾರ್ಟ್ ಹೋಂ ಸ್ಪೀಕರ್ಸ್ ಫ್ಲಿಪ್ ಕಾರ್ಟ್ ನಲ್ಲಿ 3499 ರೂಪಾಯಿಗಳಿಗೆ ಲಭ್ಯವಿವೆ. MarQ Android 9.0 Smart TVs and Smart Home Speakers ಮನೆಯಲ್ಲಿನ ಎಲ್ಲಾ ಸ್ಮಾರ್ಟ್ ಸಾಧನಗಳಿಗೆ ಸಂಪರ್ಕಿಸಬಹುದಾದ ವೈಶಿಷ್ಟ್ಯತೆಗಳನ್ನು ಹೊಂದಿವೆ.

click me!