ಏಸರ್ ಅಡ್ವಾನ್ಸ್‌ಡ್ ಐ ಸೀರೀಸ್ 32 ಇಂಚಿನ ಸ್ಮಾರ್ಟ್ ಟಿವಿ, ಬೆಲೆ ಕೇವಲ ರೂ.10,999 ರೂಪಾಯಿ. ಆದರೆ ಇದರಲ್ಲಿನ ಫೀಚರ್ಸ್ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದೆ. ಈ ಏಸರ್ ಟಿವಿ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
ಬೆಂಗಳೂರು(ನ.09) ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮನೆಗೆ ಬೇಕಾಗುವ ಟಿವಿ, ಲ್ಯಾಪ್‌ಟಾಪ್ ಇತ್ಯಾದಿಗಳನ್ನು ಖರೀದಿಸುವ ಆಲೋಚನೆ ಹಲವಾರು ಮಂದಿಗೆ ಇರುತ್ತದೆ. ಅದಕ್ಕೆ ಕಾರಣ ಒಳ್ಳೆಯ ಉತ್ಪನ್ನಗಳನ್ನು ಒಳ್ಳೆಯ ಆಫರ್ ಬೆಲೆಗೆ ಖರೀದಿಸಬಹುದು ಅನ್ನುವುದೇ ಆಗಿದೆ. ಈ ಸಂದರ್ಭದಲ್ಲಿ ಬಹುತೇಕ ಬ್ರಾಂಡ್‌ಗಳು ಆಕರ್ಷಕ ಆಫರ್‌ಗಳನ್ನು ಒದಗಿಸುತ್ತವೆ ಕೂಡ. ಹಬ್ಬದ ಸಮಯದಲ್ಲಿ ಕಡಿಮೆ ಬೆಲೆಗೆ ಆಕರ್ಷಕ ಟಿವಿಯನ್ನು ಖರೀದಿಸುವ ಆಸಕ್ತಿ ಉಳ್ಳವರಿಗೆ ಒಂದು ಆಯ್ಕೆ ಇದೆ. ಅದರ ಹೆಸರು ಏಸರ್. ಏಸರ್‌ನ 32 ಇಂಚಿನ ಐ ಸೀರೀಸ್ ಅಡ್ವಾನ್ಸ್‌ಡ್ ಟಿವಿ ರೂ.10,999ಕ್ಕೆ ಲಭ್ಯವಿದೆ.
ಈ ಏಸರ್ ಟಿವಿ ಹೇಗಿದೆ ಎಂದು ನೋಡಿದರೆ ಈ ಸೆಗ್‌ಮೆಂಟಿನಲ್ಲಿ ಕೊಂಚ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಈ ಟಿವಿ ಖರೀದಿಸಿದರೆ ಬಾಕ್ಸಿನಲ್ಲಿ ಟಿವಿ, ರಿಮೋಟ್ ಮತ್ತು ಎರಡು ರಿಮೋಟ್ ಬ್ಯಾಟರಿಗಳು ಇರುತ್ತವೆ. ಟೇಬಲ್ ಮೇಲೆ ಟಿವಿ ಇಡಲು ಪ್ಲಾಸ್ಟಿಕ್ ಸ್ಟ್ಯಾಂಡನ್ನೂ ಕೊಟ್ಟಿರುತ್ತಾರೆ. ಆದರೆ ಗೋಡೆಗೆ ಸಿಕ್ಕಿಸಲು ವಾಲ್‌ಮೌಂಟ್ ಇರುವುದಿಲ್ಲ.
undefined
Acer Aspire Vero: ಲ್ಯಾಪ್‌ಟ್ಯಾಪ್ ಲಾಂಚ್, ಬೆಲೆ ಎಷ್ಟು ಗೊತ್ತಾ?
ಮೊದಲು ಇದರ ರಿಮೋಟ್ ವಿಶೇಷತೆ ನೋಡೋಣ. ತೆಳುವಾಗಿ, ಹಗುರವಾಗಿ ಇರುವ ರಿಮೋಟ್ ಕೈಯಲ್ಲಿ ಆರಾಮದಾಯಕವಾಗಿ ಕೂರುತ್ತದೆ. ಇಂಟರೆಸ್ಟಿಂಗ್ ಎಂದರೆ ಈ ರಿಮೋಟ್‌ನಲ್ಲಿ ಧ್ವನಿ ಮೂಲಕವೇ ಸೂಚನೆ ಕೊಟ್ಟು ಕೆಲಸ ಮಾಡಿಸಬಹುದು. ಧ್ವನಿಯನ್ನು ಶೀಘ್ರವೇ ಸ್ವೀಕರಿಸಿ ತಕ್ಷಣ ನಿಮ್ಮ ಆದೇಶ ಪಾಲಿಸುವುದು ಇದರ ವಿಶೇಷತೆ.
ಇನ್ನು ಈ ಗೂಗಲ್ ಟಿವಿ 1.5 ಜಿಬಿ ರ್‍ಯಾಮ್, 16 ಜಿಬಿ ಸ್ಟೋರೇಜ್, 30 ವ್ಯಾಟ್ ಸ್ಪೀಕರ್, ಡಾಲ್ಬಿ ಆಡಿಯೋ ಸಿಸ್ಟಮ್ ಹೊಂದಿದೆ. ಇದು ಗೂಗಲ್ ಟಿವಿ ಆಗಿರುವುದರಿಂದ ನೀವು ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಜೀ5, ಜಿಯೋ ಸಿನಿಮಾ, ಸೋನಿ ಲೈವ್, ಡಿಸ್ನಿ ಹಾಟ್‌ಸ್ಟಾರ್‌ನಂತಹ ಆ್ಯಪ್‌ಗಳನ್ನು ಸುಲಭವಾಗಿ ಬಳಸಬಹುದು. ಅವೆಲ್ಲವೂ ಇಂಟರ್‌ನೆಟ್ ಲಭ್ಯತೆಗೆ ತಕ್ಕಂತೆ ವೇಗವಾಗಿ ಕೆಲಸ ಮಾಡುತ್ತದೆ. ಡಿಫಾಲ್ಟ್ ಆಗಿ ಅನೇಕ ಆ್ಯಪ್‌ಗಳು ಇದರಲ್ಲಿ ಲಭ್ಯವಿವೆ. ಆಯಾ ಆ್ಯಪ್‌ಗಳಲ್ಲಿ ನಿಮ್ಮ ಅಕೌಂಟ್ ಇದ್ದರೆ ಸುಲಭವಾಗಿ ಅವುಗಳನ್ನು ಬಳಸಬಹುದು.ಇಂಟರ್‌ನೆಟ್ ಹೊರತಾಗಿ ಚಾನಲ್‌ಗಳನ್ನು ನೋಡುತ್ತೀರಿ ಎಂದಾದರೂ ಇದರ ವೇಗ ಮನಸ್ಸು ಗೆಲ್ಲುವಂತೆ ಇದೆ. ಗೇಮ್ ಆಡುವ ಅವಕಾಶವೂ ಇಲ್ಲುಂಟು. 1.5 ಜಿಬಿ ರ್‍ಯಾಮ್ ಸಾಮರ್ಥ್ಯಕ್ಕೆ ತಕ್ಕಂತೆ ಈ ಟಿವಿಯಲ್ಲಿ ಗೇಮ್ ಆಡಬಹುದಾಗಿದೆ.
ಈ ಟಿವಿಯ ಪಿಚ್ಚರ್ ಗುಣಮಟ್ಟ ಸೊಗಸಾಗಿದೆ. ಕಪ್ಪು ಬಿಳುಪಿನ ಜೊತೆಗೆ ಬಣ್ಣಗಳನ್ನೂ ಕಣ್ಣಿಗೆ ಹಿತ ಅನ್ನಿಸುವಂತೆ ಕಾಣಿಸುತ್ತದೆ. ಡಾಲ್ಬಿ ಆಡಿಯೋ ವ್ಯವಸ್ಥೆ ಇರುವುದರಿಂದ ನೀವು ಯಾವ ಥರದ ವಿಡಿಯೋಗಳನ್ನು ನೋಡುತ್ತೀರೋ ಅದಕ್ಕೆ ತಕ್ಕಂತೆ ಆಡಿಯೋ ವ್ಯವಸ್ಥೆಯನ್ನು ಬದಲಿಸಿಕೊಳ್ಳಬಹುದು.
ಟಿವಿಯ ಹಿಂಭಾಗದಲ್ಲಿ 2 ಯುಎಸ್‌ಬಿ ಪೋರ್ಟ್, ಆ್ಯಂಟೆನಾ ಪೋರ್ಟ್, 2 ಎಚ್‌ಡಿಎಂಐ ಪೋರ್ಟ್, ಎವಿ ಪೋರ್ಟ್, ಹೆಡ್‌ಫೋನ್ ಜ್ಯಾಕ್‌ಗಳನ್ನು ನೀಡಲಾಗಿದೆ. ಲ್ಯಾಪ್‌ಟಾಪ್, ಸೆಟ್‌ಟಾಪ್ ಬಾಕ್ಸ್, ಸ್ಪೀಕರ್‌ಗಳು ಇತ್ಯಾದಿಗಳನ್ನು ಕನೆಕ್ಟ್ ಮಾಡುವುದು ಸೇರಿದಂತೆ ನಿಮ್ಮ ನಿಮ್ಮ ಅವಶ್ಯಕತೆಗಳಿಗೆ ತಕ್ಕಂತೆ ಅವುಗಳನ್ನು ನೀವು ಬಳಸಿಕೊಳ್ಳಬಹುದು.
India PC Shipments Q3 2021: ಪರ್ಸ್‌ನಲ್ ಕಂಪ್ಯೂಟರ್ ದಾಖಲೆಯ 53 ಲಕ್ಷ ಮಾರಾಟ: ಲೆನೊವೊ ನಂ.1!
ಸಾಮಾನ್ಯವಾಗಿ ಬಹುತೇಕರು ತಮ್ಮ ಬಜೆಟ್ ಅನ್ನು ನೋಡಿಕೊಂಡು ಆದಷ್ಟು ಕಡಿಮೆ ಬೆಲೆಗೆ ಅತ್ಯುತ್ತಮ ಉತ್ಪನ್ನಗಳನ್ನು ಹುಡುಕುತ್ತಿರುತ್ತಾರೆ. ಈ ಟಿವಿಗೆ ಸಂಬಂಧಿಸಿದಂತೆ ಹೇಳುವುದಾದರೆ ಈ ಸೆಗ್‌ಮೆಂಟಿನ, ಈ ಬೆಲೆಗೆ ದೊರಕುವ ಟಿವಿಗಳಲ್ಲಿ ಇದು ಆಕರ್ಷಕವಾಗಿದೆ. ಎಲ್ಲದರ ಜೊತೆಗೆ ಒಂದು ವರ್ಷಗಳ ವಾರಂಟಿಯೂ ಲಭ್ಯವಿದೆ.