ಎತ್ತರವಿರುವ ಆಟಗಾರರಲ್ಲಿ ಓಟದ ವೇಗ ಹಾಗೂ ಗಾಳಿಯಲ್ಲಿ ಹಾರುವ ಸಾಮರ್ಥ್ಯ ಸಾಮಾನ್ಯ ಆಟಗಾರರಿಗಿಂತ ಹೆಚ್ಚಿರುತ್ತದೆ. ಭಾರತಕ್ಕೆ ಹೋಲಿಸಿದರೆ ವಿದೇಶಿ ತಂಡಗಳ ಆಟಗಾರರ ಎತ್ತರ ಜಾಸ್ತಿ. ಹೀಗಾಗಿ ಭಾರತ ಸದ್ಯ ಎತ್ತರವಿರುವ ಆಟಗಾರರ ಹುಡುಕಾಟದಲ್ಲಿದೆ.
ಜೈಪುರ: ಭಾರತ ಫುಟ್ಬಾಲ್ ತಂಡದಲ್ಲಿ ಪ್ರತಿಭಾವಂತ ಯುವ ಆಟಗಾರರಿದ್ದರೂ ಎತ್ತರವಿರುವ ಆಟಗಾರರ ಕೊರತೆಯಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್) ಎತ್ತರದ ಆಟಗಾರರಿಗಾಗಿ ಹುಡುಕಾಟ ಆರಂಭಿಸಿದೆ.
ರಾಜಸ್ಥಾನದಲ್ಲಿ ಎತ್ತರವಿರುವ ಆಟಗಾರರಿಗೆ ಹುಡುಕಾಟ ನಡೆಸುವಂತೆ ಅಲ್ಲಿನ ಕ್ಲಬ್‌ಗಳಿಗೆ ಎಐಎಫ್‌ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ಸೂಚಿಸಿದ್ದಾರೆ. ರಾಜಸ್ಥಾನದ ಚಿತ್ತೋರ್‌ಗಢ, ಗಂಗಾನಗರ ಹಾಗೂ ಹನುಮಾನ್‌ಗಢದಲ್ಲಿ ಎತ್ತರದ ವ್ಯಕ್ತಿಗಳು ಜಾಸ್ತಿ ಇದ್ದಾರೆ. ಹೀಗಾಗಿ ಅಲ್ಲಿ ಹೆಚ್ಚಿನ ಪ್ರತಿಭಾನ್ವೇಷನೆ ನಡೆಸಿ, 14-15 ವರ್ಷದ ಪ್ರತಿಭಾವಂತ ಆಟಗಾರರನ್ನು ಗುರುತಿಸುವಂತೆ ಚೌಬೆ ಸೂಚನೆ ನೀಡಿದ್ದಾರೆ.
ಏನು ಲಾಭ?: ಎತ್ತರವಿರುವ ಆಟಗಾರರಲ್ಲಿ ಓಟದ ವೇಗ ಹಾಗೂ ಗಾಳಿಯಲ್ಲಿ ಹಾರುವ ಸಾಮರ್ಥ್ಯ ಸಾಮಾನ್ಯ ಆಟಗಾರರಿಗಿಂತ ಹೆಚ್ಚಿರುತ್ತದೆ. ಭಾರತಕ್ಕೆ ಹೋಲಿಸಿದರೆ ವಿದೇಶಿ ತಂಡಗಳ ಆಟಗಾರರ ಎತ್ತರ ಜಾಸ್ತಿ. ಹೀಗಾಗಿ ಭಾರತ ಸದ್ಯ ಎತ್ತರವಿರುವ ಆಟಗಾರರ ಹುಡುಕಾಟದಲ್ಲಿದೆ.
ಮಹಿಳಾ ಟಿ20 ವಿಶ್ವಕಪ್: ಇಂದು ಭಾರತ Vs ಪಾಕ್ ಡು ಆರ್ ಡೈ ಕದನ; ಗೆದ್ದರಷ್ಟೇ ಸೆಮೀಸ್ ಕನಸು ಜೀವಂತ
ಶೂಟಿಂಗ್: ಭಾರತಕ್ಕೆ ಮತ್ತೆ 5 ಪದಕ
ಲಿಮಾ(ಪೆರು): ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಕಿರಿಯರ ವಿಶ್ವ ಶೂಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಭಾರತ ಪ್ರಾಬಲ್ಯ ಮುಂದುವರಿಸಿದೆ. ಭಾರತ ಮತ್ತೆ 5 ಪದಕ ಗೆದ್ದಿದ್ದು, ಒಟ್ಟಾರೆ 21 ಪದಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. ಭಾರತೀಯರು ಒಟ್ಟು 13 ಚಿನ್ನ, 2 ಬೆಳ್ಳಿ ಹಾಗೂ 6 ಕಂಚು ಜಯಿಸಿದ್ದಾರೆ.
ಶನಿವಾರ ಮಹಿಳೆಯರ 25 ಮೀ. ಸ್ಟಾಂಡರ್ಸ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತ ಕ್ಲೀನ್ ಸ್ವೀಪ್ ಸಾಧಿಸಿತು. ದಿವಾನಿ ಚಿನ್ನ, ಪರಿಶಾ ಗುಪ್ತಾ ಬೆಳ್ಳಿ, ಮಾನ್ವಿ ಜೈನ್ ಕಂಚು ಗೆದ್ದರು. ಪುರುಷರ ವಿಭಾಗದಲ್ಲಿ ಸೂರಜ್ ಶರ್ಮಾ ಚಿನ್ನ ಗೆದ್ದರೆ, ಮುಕೇಶ್ ನೆಲವಲ್ಲಿ ಕಂಚು ತಮ್ಮದಾಗಿಸಿಕೊಂಡರು. ಮುಕೇಶ್ ಈಗಾಗಲೇ 4 ಚಿನ್ನದ ಪದಕ ಗೆದ್ದಿದ್ದಾರೆ.
7 ವರ್ಷ ಬಳಿಕ ಮತ್ತೆ ಹಾಕಿ ಇಂಡಿಯಾ ಲೀಗ್ ಆರಂಭ; ಮಹಿಳೆಯರಿಗೆ ಚೊಚ್ಚಲ ಲೀಗ್ ಆಯೋಜನೆ!
ರಾಷ್ಟ್ರೀಯ ರೋಲರ್ ಸ್ಕೇಟಿಂಗ್: ರಾಜ್ಯದ ಮೋನಿಶಾಗೆ ಚಿನ್ನ, ಬೆಳ್ಳಿ
ಬೆಂಗಳೂರು: ಇತ್ತೀಚೆಗೆ ಮುಂಬೈನಲ್ಲಿ ನಡೆದ ರಾಷ್ಟ್ರೀಯ ಸಿಐಸಿಎಸ್‌ಇ ರೋಲರ್ ಸ್ಕೇಟಿಂಗ್‌ನಲ್ಲಿ ಬೆಂಗಳೂರಿನ ಮೋನಿಶಾ ಚಿನ್ನ ಹಾಗೂ ಬೆಳ್ಳಿ ಪದಕ ಗೆದ್ದಿದ್ದಾರೆ. ನಗರದ ಆರ್ಕಿಡ್ಸ್ ದಿ ಇಂಟರ್‌ನ್ಯಾಶನಲ್ ಸ್ಕೂಲ್‌ನ 7ನೇ ತರಗತಿಯ ವಿದ್ಯಾರ್ಥಿನಿ ಮೋನಿಶಾ 1 ಲ್ಯಾಪ್ ರೋಡ್‌ನಲ್ಲಿ ಚಿನ್ನದ ಪದಕ ಮತ್ತು 1000 ಮೀಟರ್ ಟ್ರ್ಯಾಕ್ ರೇಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದರು. ಮೋನಿಶಾ ಮುಂಬರುವ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾದ ರಾಷ್ಟ್ರೀಯ ಮಟ್ಟದ ಟೂರ್ನಿಗೆ ಆಯ್ಕೆಯಾಗಿದ್ದಾರೆ.