ಶುರುವಾಗುತ್ತಿದೆ ISL ಟೂರ್ನಿ, 8 ತಿಂಗಳ ಬಳಿಕ ಭಾರತದಲ್ಲಿ ಮೊದಲ ಕ್ರೀಡಾ ಸಂಭ್ರಮ!

By Suvarna News  |  First Published Nov 19, 2020, 8:24 PM IST

8 ತಿಂಗಳ ಬಳಿಕ ಭಾರತದಲ್ಲಿ ಆಯೋಜನೆಯಾಗುತ್ತಿರುವ ಮೊದಲ ಕ್ರೀಡಾ ಸಂಭ್ರಮ ಅನ್ನೋ ಹೆಗ್ಗಳಿಕೆಗೆ ಇಂಡಿಯನ್ ಸೂಪರ್ ಲೀಗ್ ಟೂರ್ನಿ ಪಾತ್ರವಾಗಿದೆ. ನವೆಂಬರ್ 20 ರಿಂದ 7ನೇ ಆವೃತ್ತಿ ಐಎಸ್ಎಲ್ ಟೂರ್ನಿ ಆರಂಭಗೊಳ್ಳುತ್ತಿದೆ. ಉದ್ಘಟನಾ ಪಂದ್ಯದಲ್ಲಿ ಬಲಿಷ್ಠ ತಂಡ ಹೋರಾಟ ನಡೆಸಲಿದೆ.


ಗೋವಾ(ನ.19): ಅದ್ಭುತ ಆಟ ಪ್ರದರ್ಶಿಸಬಲ್ಲ ಸ್ಟಾರ್ ಆಟಗಾರರಿಂದ ಕೂಡಿರುವ ಎರಡು ಬಲಿಷ್ಠವಾದ ತಂಡಗಳು ಹೀರೋ ಇಂಡಿಯನ್ ಸೂಪರ್ ಲೂಗ್ ನ ಮೊದಲ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ಎಟಿಕೆ ಹಾಗೂ ಕೇರಳ ಬ್ಲಾಸ್ಟರ್ಸ್ ತಂಡಗಳು ಏಳನೇ ಅವತರಣಿಕೆಯ ಇಂಡಿಯನ್ ಸೂಪರ್ ಲೀಗ್ ನ ಮೊದಲ ಪಂದ್ಯದಲ್ಲಿ ಅಂಕಕ್ಕಾಗಿ ಹೋರಾಟ ನಡೆಸಲಿವೆ.‌  ಶುಕ್ರವಾರದ ಮೊದಲ  ಪಂದ್ಯಕ್ಕೆ ಬಾಂಬೊಲಿಮ್ ಜಿಎಂಸಿ ಕ್ರೀಡಾಂಗಣ ಸಾಕ್ಷಿಯಾಗಲಿ.

ಫುಟ್ಬಾಲ್ ದಿಗ್ಗಜ ಮರಡೋನಾಗೆ ಯಶಸ್ವಿ ಶಸ್ತ್ರ ಚಿಕಿತ್ಸೆ

Tap to resize

Latest Videos

undefined

ಎಂಟು ತಿಂಗಳ ನಂತರ ಮೊದಲ ಬಾರಿಗೆ ದೇಶದಲ್ಲಿ ನಡೆಯುತ್ತಿರುವ ಕ್ರೀಡಾ ಸಂಭ್ರಮದಲ್ಲಿ ಸತತ ಎರಡನೇ ಋತುವಿನಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಲಿವೆ. ಈ ಹಿಂದಿನ ಎರಡು ಆರಂಭಿಕ ಪಂದ್ಯಗಳಲ್ಲಿ ಜಯ ಗಳಿಸಿ ಶುಭಾರಂಭ ಕಂಡಿರುವ ಕೇರಳ ಎರಡು ಬಾರಿ ಫೈನಲ್ ತಲುಪಿತ್ತು. ಈ ಬಾರಿ ಯಾವ ರೀತಿಯಲ್ಲಿ ಅದೃಷ್ಟ ತಂಡದ ಪಾಲಾಗಲಿದೆ ಎಂಬುದರ ನಿರೀಕ್ಷೆ.

100+ ಗೋಲು ಬಾರಿಸಿ ಅಪರೂಪದ ದಾಖಲೆ ಬರೆದ ಕ್ರಿಸ್ಟಿಯಾನೋ ರೋನಾಲ್ಡೋ.

ಕಳೆದ ಎರಡು ಆರಂಭಿಕ ಪಂದ್ಯಗಳ ನಂತರ ಸಾಕಷ್ಟು ಬದಲಾವಣೆ ಆಗಿವೆ. ಕೇರಳ  ತಂಡದಲ್ಲಿ ಎಲ್ಕೊ ಷೆಟೋರಿ ಬದಲಿಗೆ ಕಿಬು ವಿಕುನಾ ಪ್ರಧಾನ  ಕೊಚ್ ಆಗಿ ಜವಾಬ್ದಾರಿ ವಹಿಸಲಿದ್ದಾರೆ. 

ಕಳೆದ ಋತುವಿನಲ್ಲಿ ವಿಕುನಾ ಮೋಹನ್ ಬಾಗನ್ ತಂಡ ಐ-ಲೀಗ್ ಚಾಂಪಿಯನ್‌ ಪಟ್ಟಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆಕ್ರಮಣಕಾರಿ ಫುಟ್ಬಾಲ್ ಆಡುವ ವಿಕುನಾ ತನ್ನ ಮಾಜಿ ಆಟಗಾರರಿಂದ ಕೂಡಿದ ತಂಡದ ವಿರುದ್ದ ಸವಾಲನ್ನು ಎದುರಿಸಬೇಕಾಗಿದೆ.

ಎರಡೂ ತಂಡಗಳು ಮುಖಾಮುಖಿ ಯಾದ ನಂತರ ಸಾಕಷ್ಟು ಬದಲಾವಣೆಗಳಾಗಿವೆ. "ಮೋಹನ್ ಬಾಗನ್ ಬಗ್ಗೆ ನನಗೆ ಉತ್ತಮ ಅಭಿಪ್ರಾಯ ಇದೆ" ಎಂದಿರುವ ವಿಕುನಾ, "ಒಂದು ಋತುವಿನುದ್ದಕ್ಕೂ ನಾನು ತಂಡದೊಂದಿಗೆ ಇದ್ದೇನೆ. ಅವರು ನನ್ನನ್ನು ಉತ್ತಮವಾಗಿ ನೋಡಿಕೊಂಡಿದ್ದಾರೆ. ಅಲ್ಲಿ ನನಗೆ ಉತ್ತಮ ಗೆಳೆಯರಿದ್ದಾರೆ. ಆದರೆ ಕೇರಳ ಬ್ಲಾಸ್ಟರ್ಸ್ ತಂಡವನ್ನು ಸೇರಿರುವುದು ನನಗೆ ಖುಷಿ ಕೊಟ್ಟಿದೆ. ನನ್ನಿಂದಾದ ಉತ್ತಮ ಪ್ರಯತ್ನವನ್ನು ಮಾಡುವೆ. ಇಲ್ಲಿಯ ಜನ ನನ್ನನ್ನು ಉತ್ತಮ ರೀತಿಯಲ್ಲಿ ಸ್ವಾಗತಿಸಿದ್ದಾರೆ. ಇಲ್ಲಿಯ ಆಟಗಾರರೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇನೆ. ಉತ್ತಮ ತಂಡವನ್ನು ಕಟ್ಟುವುದುದು ನನ್ನ ಗುರಿ. ಉತ್ತಮ ಫುಟ್ಬಾಲ್ ಆಡುವ ಆಟಗಾರರಿಂದ ನಮ್ಮ ತಂಡ ನಿರ್ಮಾಣ ಆಗಬೇಕು" ಎಂದು ಹೇಳಿದರು.

ಇದೇ ವೇಳೆ ಹಾಲಿ ಚಾಂಪಿಯನ್ ಮತ್ತು ಮೂರು ಬಾರಿ ಪ್ರಶಸ್ತಿ ಗೆದ್ದಿರುವ ತಂಡ ಈ ಋತುವನ್ನು ಜಯದೊಂದಿಗೆ ಆರಂಭಿಸಬೇಕು ಎಂಬ ಧ್ಯೇಯದೊಂದಿಗೆ ಅಂಗಣಕ್ಕಿಳೊಯಲಿದೆ. ಆಂಟೋನಿಯೋ ಲೊಪೇಜ್ ಪಡೆ ತನ್ನ ತಂಡವನ್ನು ಬಲಿಷ್ಠಗೊಳಿಸುವ ಗುರಿ ಹೊಂದಿದ್ದಾರೆ. "ಮೋಹನ್ ಬಗಾನ್ ನಲ್ಲಿ ವಿಕುನಾ ಅವರು ಉತ್ತಮ ಕೆಲಸವನ್ನು ಮಾಡಿದ್ದಾರೆ. ಆದರೆ ಐಎಸ್ ಎಲ್ ಒಂದು ವಿಭಿನ್ನ ಸ್ಪರ್ಧೆ, " ಎಂದು ಹಬ್ಬಾಸ್ ಹೇಳಿದ್ದಾರೆ. " ಅವರನ್ನು ನಾನು ಗೌರವಿಸುತ್ತೇನೆ, ಆದರೆ ನಾವು ಮೂರು ಅಂಕಗಳನ್ನು ಗಳಿಸುವುದು ನಮ್ಮ ಗುರಿ  ಅದಕ್ಕಾಗಿ ನಾವು ಕಠಿಣ ಶ್ರಮ ವಹಿಸಿದ್ದೇವೆ." ಎಂದರು.

ಎರಡೂ ತಂಡದಲ್ಲಿ ಸ್ಪೇನ್ ನ ರಣಯಂತ್ರ ನಾಳೆಯ ಪಂದ್ಯದಲ್ಲಿ ಕಾಣಲಿದೆ. ಎರಡೂ ತಂಡದಲ್ಲಿ ಬಲಿಷ್ಟ ಆಟಗಾರರಿದ್ದಾರೆ.‌ಅಭಿಮಾನಿಗಳು ರೋಚಕ ಪಂದ್ಯವನ್ನು ನಿರೀಕ್ಷಿಸಬಹುದು.‌ಹೊಸ ಬದುಕಿನಲ್ಲಿ ಫಟ್ಬಾಲ್ ಹೊಸತನವನ್ನು ತುಂಬಲಿದೆ.

click me!