ಫುಟ್ಬಾಲ್ ದಿಗ್ಗಜ ಮರಡೋನಾಗೆ ಯಶಸ್ವಿ ಶಸ್ತ್ರ ಚಿಕಿತ್ಸೆ

By Suvarna NewsFirst Published Nov 4, 2020, 11:32 AM IST
Highlights

ಫುಟ್ಬಾಲ್ ದಿಗ್ಗಜ ಡಿಗೊ ಮರಡೋನಾ ಅವರ ಮೆದಳು ಶಸ್ತ್ರಚಿಕಿತ್ಸೆ  ಯಶಸ್ವಿಯಾಗಿ ನಡೆದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಬ್ಯೂನಸ್‌ ಐರಿಸ್(ನ.04)‌: ಫುಟ್ಬಾಲ್‌ ದಂತಕಥೆ ಅರ್ಜೆಂಟೀನಾದ ಡಿಗೊ ಮರಡೋನಾ ಅನಾರೋಗ್ಯ ಹಿನ್ನೆಲೆಯಲ್ಲಿ ಇಲ್ಲಿನ ಲಾ ಪ್ಲಾಟಾದಲ್ಲಿನ ಇಪೆನ್ಸಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. 

ಡಿಗೋ ಮರಡೋನಾ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿನ ತಜ್ಞ ವೈದ್ಯರು ಯಶಸ್ವಿಯಾಗಿ ಮೆದುಳು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ನಾವು ಮೆದುಳಿನಲ್ಲಿ ಹೆಪ್ಪುಗಟ್ಟಿದ್ದ ರಕ್ತವನ್ನು ಯಶಸ್ವಿಯಾಗಿ ಹೊರತೆಗೆದಿದ್ದೇವೆ. ಸರ್ಜರಿಯ ಬಳಿಕ ಮರಡೋನಾ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಶಸ್ತ್ರಚಿಕಿತ್ಸೆ ಮಾಡಿದ ವೈದ್ಯ ಲಿಯೋಪೋಲ್ಡೋ ಲಾಕ್ಯೂ ತಿಳಿಸಿದ್ದಾರೆ.

ಮರಡೋನಾ ಆಸ್ಪತ್ರೆಗೆ ದಾಖಲಾಗಿರುವುದು ತಿಳಿಯುತ್ತಿದ್ದಂತೆ ಸಾವಿರಾರು ಮಂದಿ ಆಸ್ಪತ್ರೆಯ ಮುಂದೆ ಜಮಾಯಿಸಿದ್ದಾರೆ. ಆದಷ್ಟು ಬೇಗ ಫುಟ್ಬಾಲ್ ದಿಗ್ಗಜ ಗುಣಮುಖವಾಗಲಿ ಎಂದು ಶುಭಹಾರೈಸಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೋನಾಲ್ಡೋಗೆ ಕೊರೋನಾ; ಆತಂಕ ಬೇಡ ಎಂದ ಫೆಡರೇಶನ್!

ಮರಡೋನಾ ಈಗಾಗಲೇ ಎರಡು ಬಾರಿ ಹೃದಯಾಘಾತಕ್ಕೆ ಒಳಗಾಗಿ ಬದುಕುಳಿದಿದ್ದಾರೆ. ಇದರ ಜತೆಗೆ ಹೆಪಟೈಟಿಸ್ ಹಾಗೂ ಗ್ಯಾಸ್ಟ್ರಿಕ್ಟ್‌ ಸಮಸ್ಯೆಗೆ ಒಳಗಾಗಿ ಎರಡು ಬೈಪಾಸ್ ಸರ್ಜರಿಯನ್ನು ಮಾಡಿಸಿಕೊಂಡಿದ್ದಾರೆ ಫುಟ್ಬಾಲ್ ವಿಶ್ವಕಪ್ ವಿಜೇತ ಆಟಗಾರ.

ಕಳೆದ ತಿಂಗಳು ಮರಡೋನಾ 60 ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಕೆಲ ದಿನಗಳ ಹಿಂದಷ್ಟೇ ಮರಡೋನಾರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷಾ ವರದಿ ನೆಗೆಟಿವ್‌ ಬಂದಿತ್ತು.

click me!