ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೋನಾಲ್ಡೋಗೆ ಕೊರೋನಾ; ಆತಂಕ ಬೇಡ ಎಂದ ಫೆಡರೇಶನ್!

By Suvarna News  |  First Published Oct 13, 2020, 10:10 PM IST

ಫುಟ್ಬಾಲ್ ಅಭಿಮಾನಿಗಳಿಗೆ ಇದೀಗ ಆತಂಕ ಶುರುವಾಗಿದೆ. ಪೋರ್ಚುಗಲ್ ಸ್ಟಾರ್ ಫುಟ್ಬಾಲ್ ಪಟು ಕ್ರಿಸ್ಟಿಯಾನೋ ರೋನಾಲ್ಡೋಗೆ ಕೊರೋನಾ ವಕ್ಕರಿಸಿದೆ. ಹೀಗಾಗಿ ಸ್ವೀಡನ್ ವಿರುದ್ಧದ ಪಂದ್ಯ ಮಾತ್ರವಲ್ಲ, ಯುವೆಂಟಸ್ ತಂಡಕ್ಕೂ ರೋನಾಲ್ಡೋ ಲಭ್ಯರಿಲ್ಲ.


ಪೋರ್ಚುಗಲ್(ಅ.13): ಪೋರ್ಚುಗಲ್ ಹಾಗೂ ಯುವೆಂಟಸ್ ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೋನಾಲ್ಡೊಗೆ ಕೊರೋನಾ ವಕ್ಕರಿಸಿದೆ. 35 ವರ್ಷದ ರೋನಾಲ್ಡೋ ಬುಧವಾರ(ಅ.14) ನಡೆಯಲಿರುವ ಸ್ವೀಡನ್ ವಿರುದ್ಧದ  UEFA ರಾಷ್ಟ್ರೀಯ ಲೀಗ್ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ಫುಟ್ಬಾಲ್ ಫೆಡರೇಶನ್ ಸ್ಪಷ್ಟಪಡಿಸಿದೆ.

ವಿಶ್ವದ ಅತ್ಯಂತ ದುಬಾರಿ ಕಾರು ಖರೀದಿಸಿದ ರೋನಾಲ್ಡೋ; ಕೇವಲ 10 ಮಂದಿಯಲ್ಲಿದೆ ಈ ಕಾರು!.

Latest Videos

undefined

ಕ್ರಿಸ್ಟಿಯಾನೋ ರೋನಾಲ್ಡೋಗೆ ಕೊರೋನಾದ ಯಾವುದೇ ಗುಣ ಲಕ್ಷಣಗಳಿಲ್ಲ. ಜೊತೆಗೆ ಆರೋಗ್ಯವಾಗಿದ್ದಾರೆ. ಆದರೆ ಪರೀಕ್ಷೆಯಲ್ಲಿ ಪಾಸಿಟೀವ್ ಬಂದಿದೆ. ಹೀಗಾಗಿ ಐಸೊಲೇಶನ್‌ಗೆ ಒಳಗಾಗಿದ್ದಾರೆ ಎಂದು ಫೆಡರೇಶನ್ ಹೇಳಿದೆ. 

ರೋನಾಲ್ಡೋಗೆ ಕೊರೋನಾ ಪಾಸಿಟೀವ್ ಬಂದ ಹಿನ್ನಲೆಯಲ್ಲಿ ಪೋರ್ಚುಗಲ್ ತಂಡದ ಇತರ ಆಟಗಾರರಿಗೆ ಕೊರೋನಾ ವೈರಸ್ ಪರೀಕ್ಷೆ ಮಾಡಿಸಲಾಗಿದೆ. ಆದರೆ ಎಲ್ಲಾ ಆಟಗಾರರ ವರದಿ ನೆಗಟೀವ್ ಬಂದಿದೆ. ಹೀಗಾಗಿ ರೋನಾಲ್ಡೋ ಹೊರತು ಪಡಿಸಿ ಇನ್ನುಳಿದ ಎಲ್ಲಾ ಆಟಗಾರರು ಸ್ವೀಡನ್ ವಿರುದ್ಧದ ಪಂದ್ಯಕ್ಕೆ ಲಭ್ಯರಿದ್ದಾರೆ ಎಂದು ಪೋರ್ಚುಗಲ್ ಫುಟ್ಬಾಲ್ ಫಡರೇಶನ್ ಹೇಳಿದೆ.

ಕೊರೋನಾ ಎಫೆಕ್ಟ್: 82 ಕೋಟಿ ಸಂಬಳವನ್ನು ಕ್ಲಬ್‌ಗೆ ಬಿಟ್ಟುಕೊಟ್ಟ ರೊನಾಲ್ಡೋ.

ರೋನಾಲ್ಡೋಗೆ ಕೊರೋನಾ ಪಾಸಿವೀಟ್ ಬಂದ ಕಾರಣ ಮುಂದಿನ ವಾರದಲ್ಲಿ ಆರಂಭಗೊಳ್ಳಲಿರುವ ಚಾಂಪಿಯನ್ಸ್ ಲೀಗ್ ಗ್ರೂಪ್ ಸ್ಟೇಜ್ ಪಂದ್ಯಕ್ಕೆ ರೋನಾಲ್ಡೋ ಅಲಭ್ಯರಾಗಲಿದ್ದಾರೆ. ಇದು ಯುವೆಂಟಸ್ ಫುಟ್ಬಾಲ್ ಕ್ಲಬ್ ತಂಡಕ್ಕೆ ಅತೀ ದೊಡ್ಡ ಹೊಡೆತ ನೀಡಲಿದೆ.

click me!