
ಬಾರ್ಸಿಲೋನಾ(ಆ.27): 2 ದಶಕಗಳು, ನೂರಾರು ಗೋಲು, ಹತ್ತಾರು ಪ್ರಶಸ್ತಿಗಳು, ಲೆಕ್ಕವಿಲ್ಲದಷ್ಟು ದಾಖಲೆಗಳ ಬಳಿಕ ಕೊನೆಗೂ ದಿಗ್ಗಜ ಫುಟ್ಬಾಲಿಗ ಲಿಯೋನೆಲ್ ಮೆಸ್ಸಿ ಸ್ಪೇನ್‌ನ ಅತ್ಯಂತ ಜನಪ್ರಿಯ ಫುಟ್ಬಾಲ್ ಕ್ಲಬ್ ಬಾರ್ಸಿಲೋನಾ ಎಫ್‌ಸಿಯಿಂದ ಹೊರಬರಲು ನಿರ್ಧರಿಸಿದ್ದಾರೆ.
ಕ್ಲಬ್ ತೊರೆಯಲು ತಾವು ಸಿದ್ಧರಿರುವುದಾಗಿ ಮಂಗಳವಾರ ತಂಡದ ಮಾಲಿಕರಿಗೆ ಮೆಸ್ಸಿ ತಿಳಿಸಿದ್ದು, ಅವರನ್ನು ಸ್ವಾಗತಿಸಲು ಇಂಗ್ಲಿಷ್ ಪ್ರೀಮಿಯರ್ ಲೀಗ್‌ನ ಪ್ರತಿಷ್ಠಿತ ತಂಡಗಳಾದ ಮ್ಯಾಂಚೆಸ್ಟರ್ ಸಿಟಿ, ಮ್ಯಾಂಚೆಸ್ಟರ್ ಯುನೈಟೆಡ್, ಇಟಲಿಯನ್ ಲೀಗ್‌ನ ಇಂಟರ್ ಮಿಲಾನ್, ಫ್ರಾನ್ಸ್‌ನ ಪಿಎಸ್‌ಜಿ ತಂಡಗಳು ಸಿದ್ಧವಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
2020ರಲ್ಲಿ ಬ್ಯಾಲನ್ ಡಿ ಓರ್ ಪ್ರಶಸ್ತಿ ಇಲ್ಲ..!
ಲಿಯೋನೆಲ್ ಮೆಸ್ಸಿ ಬಾರ್ಸಿಲೋನಾ ಹಾಗೂ ಅರ್ಜೆಂಟೀನಾ ಪರ 700 ಗೋಲ್ ಬಾರಿಸಿ ದಾಖಲೆ ಬರೆದಿದ್ದಾರೆ. ಇದರೊಂದಿಗೆ 700 ಗೋಲು ಬಾರಿಸಿದ ಎರಡನೇ ಸಕ್ರಿಯ ಹಾಗೂ ಒಟ್ಟಾರೆ 7ನೇ ಆಟಗಾರ ಎನ್ನುವ ಗೌರವಕ್ಕೆ ಮೆಸ್ಸಿ ಭಾಜನರಾಗಿದ್ದರು. ಕ್ರಿಸ್ಟಿಯಾನೋ ರೊನಾಲ್ಡೋ ಕೂಡಾ 700+ ಗೋಲು ಬಾರಿಸಿದ ಮತ್ತೊಬ್ಬ ಸಕ್ರಿಯ ಫುಟ್ಬಾಲಿಗ ಎನಿಸಿದ್ದಾರೆ. ಗ್ರೆಡ್ ಮುಲ್ಲರ್, ಫೆರ್ನೆಕ್ ಪುಸ್ಕಾಸ್, ಪೀಲೆ, ರೊಮ್ಯಾರಿಯೋ ಹಾಗೂ ಜೋಸೆಫ್ ಬಿಕಾನ್ 700ಕ್ಕೂ ಅಧಿಕ ಗೋಲು ಬಾರಿಸಿದ ಸಾಧನೆ ಮಾಡಿದ್ದಾರೆ.
ಈ ಹಿಂದೆ ಇಟಲಿಯ ಇಂಟರ್ ಮಿಲಾನ್ ಫುಟ್ಬಾಲ್ ಕ್ಲಬ್, ಮೆಸ್ಸಿಗೆ 4 ವರ್ಷದ ಅವಧಿಗೆ ಬರೋಬ್ಬರಿ 2300 ಕೋಟಿ ರು. (235 ಮಿಲಿಯನ್ ಪೌಂಡ್) ಒಪ್ಪಂದದ ಪ್ರಸ್ತಾಪವಿರಿಸಿದೆ ಎಂದು ಬ್ರಿಟನ್‌ನ ಪ್ರತಿಷ್ಠಿತ ಪತ್ರಿಕೆ ‘ದಿ ಸನ್’ ವರದಿ ಮಾಡಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.