ಫಿಫಾ ವಿಶ್ವ ವಿಜೇತ ಸ್ಪೇನ್‌ ಟೀಂಗೆ ತವರಿನಲ್ಲಿ 20 ಲಕ್ಷ ಜನರ ಸ್ವಾಗತ! ಮ್ಯಾಡ್ರಿಡ್‌ನಲ್ಲಿ ಸಂಭ್ರಮದ ಮಹಾಪೂರ

Kannadaprabha News   | Kannada Prabha
Published : Jul 22, 2026, 10:35 AM IST
Spain World Cup

ಸಾರಾಂಶ

ಫುಟ್ಬಾಲ್‌ ವಿಶ್ವ ಚಾಂಪಿಯನ್‌ ಆದ ಸ್ಪೇನ್‌ ತಂಡಕ್ಕೆ ತವರಿನ ಮ್ಯಾಡ್ರಿಡ್‌ನಲ್ಲಿ ಲಕ್ಷಾಂತರ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು. ಇನ್ನೊಂದೆಡೆ, ಫೈನಲ್‌ನಲ್ಲಿ ಸ್ಪೇನ್‌ ವಿರುದ್ಧ ಸೋತ ಅರ್ಜೆಂಟೀನಾ ತಂಡದ ಆಟಗಾರರ ದುರ್ವರ್ತನೆಗೆ ಸಂಬಂಧಿಸಿದಂತೆ ಫಿಫಾ ತನಿಖೆ ಆರಂಭಿಸಿದೆ.

ಮ್ಯಾಡ್ರಿಡ್‌: ಫುಟ್ಬಾಲ್‌ ವಿಶ್ವ ಚಾಂಪಿಯನ್‌ ಸ್ಪೇನ್‌ ತಂಡಕ್ಕೆ ತವರಿನಲ್ಲಿ ಅದ್ಧೂರಿ ಸ್ವಾಗತ ಲಭಿಸಿದೆ. ಸೋಮವಾರ ಅಮೆರಿಕದಿಂದ ಸ್ಪೇನ್‌ ರಾಜಧಾನಿ ಮ್ಯಾಡ್ರಿಡ್‌ಗೆ ಬಂದಿಳಿದ ಆಟಗಾರರನ್ನು ಸಹಸ್ರಾರು ಅಭಿಮಾನಿಗಳು ಸಂಭ್ರಮದಿಂದ ಬರಮಾಡಿಕೊಂಡರು. ಅಧಿಕಾರಿಗಳ ಮಾಹಿತಿ ಪ್ರಕಾರ, ಸಂಭ್ರಮಾಚರಣೆಯಲ್ಲಿ 20 ಲಕ್ಷಕ್ಕೂ ಹೆಚ್ಚಿನ ಅಭಿಮಾನಿಗಳು ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ.

26 ಆಟಗಾರರ ತಂಡ ಹಾಗೂ ಕೋಚಿಂಗ್‌ ಸಿಬ್ಬಂದಿ ಮೊದಲು ಸ್ಪೇನ್‌ ರಾಜಮನೆತನವನ್ನು ಭೇಟಿ ಮಾಡಿತು. ದೊರೆ 6ನೇ ಫಿಲಿಪ್‌, ರಾಣಿ ಲೆಟಿಜಿಯಾ ಅವರು ತಂಡವನ್ನು ಗೌರವಿಸಿದರು. ಬಳಿಕ ಪ್ರಧಾನ ಮಂತ್ರಿ ಪೆಡ್ರೊ ಸ್ಯಾಂಚೆಜ್‌ ಅವರನ್ನು ತಂಡ ಭೇಟಿಯಾಯಿತು. ಅಲ್ಲಿಂದ ಮ್ಯಾಡ್ರಿಡ್‌ನ ಪ್ರಮುಖ ಸ್ಥಳಗಳಲ್ಲಿ ತೆರೆದ ಬಸ್‌ನಲ್ಲಿ ವಿಜಯಯಾತ್ರೆ ನಡೆಯಿತು. ‘ನಾವು ವಿಶ್ವ ಚಾಂಪಿಯನ್ಸ್‌’ ಎಂದು ಬರೆಯಲಾಗಿದ್ದ ವಿಶೇಷ ಟಿ-ಶರ್ಟ್‌ ಧರಿಸಿದ್ದ ಆಟಗಾರರು, ವಿಶ್ವಕಪ್‌ ಎತ್ತಿ ತೋರಿಸಿ ಸಂಭ್ರಮಿಸಿದರು. ಬಳಿಕ ವೇದಿಕೆ ಕಾರ್ಯಕ್ರಮ ನಡೆಯಿತು. ಆಟಗಾರರು ವೇದಿಕೆಯಲ್ಲೇ ಕುಣಿದಿದ್ದಲ್ಲದೇ, ಕೋಚ್‌ ಫ್ಯುಂಟೆ ಅವರನ್ನು ಎತ್ತಿ ಸಂಭ್ರಮಿಸಿದರು.

ಅರ್ಜೆಂಟೀನಾದಲ್ಲೂ ಅದ್ಧೂರಿ ವಿಜಯಯಾತ್ರೆ, ಮೆಸ್ಸಿ ಗೈರು

ವಿಶ್ವಕಪ್‌ನಲ್ಲಿ ರನ್ನರ್‌-ಅಪ್‌ ಆದ ಅರ್ಜೆಂಟೀನಾ ತಂಡಕ್ಕೆ ತವರಿನಲ್ಲಿ ಅದ್ಧೂರಿ ಸ್ವಾಗತ ಲಭಿಸಿತು. ಬ್ಯೂನಸ್‌ ಐರಿಸ್‌ಗೆ ಬಂದಿಳಿದ ಕೋಚ್‌ ಲಿಯೋನಲ್‌ ಸ್ಕಲೋನಿ ಹಾಗೂ ಕೆಲ ಆಟಗಾರರನ್ನು ಅಪಾರ ಪ್ರಮಾಣದ ಅಭಿಮಾನಿಗಳು ಬರಮಾಡಿಕೊಂಡರು. ಆಟಗಾರರು ತೆರೆದ ಬಸ್‌ನಲ್ಲಿ ವಿಜಯಯಾತ್ರೆ ಕೂಡಾ ನಡೆಸಿದರು. ಲಿಯೋನಲ್‌ ಮೆಸ್ಸಿ ಅಮೆರಿಕದ ಮೇಜರ್‌ ಲೀಗ್‌ ಸಾಕರ್‌(ಎಂಎಲ್‌ಎಸ್‌)ನ ಇಂಟರ್‌ ಮಿಯಾಮಿ ತಂಡವನ್ನು ಕೂಡಿಕೊಳ್ಳುವ ಉದ್ದೇಶದಿಂದ ಅಮೆರಿಕದಲ್ಲೇ ಉಳಿದರು. ಇತರ ಕೆಲ ಆಟಗಾರರು ಕೂಡಾ ಅರ್ಜೆಂಟೀನಾಗೆ ಮರಳಲಿಲ್ಲ. ಹೀಗಾಗಿ ಸಂಭ್ರಮಾಚರಣೆ ತಪ್ಪಿಸಿಕೊಂಡರು.

ಅರ್ಜೆಂಟೀನಾ ದುರ್ವರ್ತನೆ: ಫಿಫಾದಿಂದ ತನಿಖೆ ಆರಂಭ

ಈಸ್ಟ್‌ ರುದರ್‌ಫೋರ್ಡ್‌(ಅಮೆರಿಕ): ಫಿಫಾ ವಿಶ್ವಕಪ್‌ ಫೈನಲ್‌ ಬಳಿಕ ಸ್ಪೇನ್‌ ಆಟಗಾರರ ವಿಜಯೋತ್ಸವದ ವೇಳೆ ಅರ್ಜೆಂಟೀನಾ ಆಟಗಾರರ ದುರ್ವರ್ತನೆಗೆ ಸಂಬಂಧಿಸಿದಂತೆ ಫಿಫಾ ಸೋಮವಾರ ತನಿಖೆ ಆರಂಭಿಸಿದೆ. ಅರ್ಜೆಂಟೀನಾದ ಪೆರೆಡೆಸ್‌ ಸ್ಪೇನ್‌ನ ಎರಿಕ್ ಗಾರ್ಸಿಯಾ ಅವರು ಕತ್ತು ಹಿಸುಕಿದ್ದು, ಈ ವೇಳೆ ಮಧ್ಯಪ್ರವೇಶಿಸಲು ಮುಂದಾದ ಗಾವಿ ಅವರನ್ನು ನೆಲಕ್ಕೆ ತಳ್ಳಿದ್ದರು. ಅಲ್ಲದೆ, ಅರ್ಜೆಂಟೀನಾದ ಡಿಫೆಂಡರ್‌ ನಹುಯೆಲ್‌ ಮೋಲಿನಾ ಅವರು ಸ್ಪೇನ್‌ ನಾಯಕ ರೋಡ್ರಿ ಅವರ ಹೊಟ್ಟೆಗೆ ಗುದ್ದಿದ್ದಾರೆ. ಇದರ ಬಗ್ಗೆ ತನಿಖೆತೆ ಫಿಫಾ ಶಿಸ್ತು ಸಮಿತಿಯು ನೈತಿಕ ಅಭಿಯೋಜಕರನ್ನು ನೇಮಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫಿಫಾ ಫೈನಲ್‌ನ ಒಂದೂವರೆ ಗಂಟೆಯಲ್ಲಿ 15.92 ಕೋಟಿ ರೂ ಗಳಿಸಿದ ಮಾಜಿ ತಾರೆ ಮಿಯಾ ಖಲೀಫಾ
ಫೀನಿಕ್ಸ್‌ನಂತೆ ಎದ್ದ ಟೀಮ್‌ ಸ್ಪ್ಯಾನಿಶ್‌! ಇದು ಕೇವಲ ವಿಶ್ವಕಪ್ ಗೆಲುವಲ್ಲ, ದಶಕದ ನಿರಾಸೆ ಬಳಿಕ ಮತ್ತೆ ವಿಶ್ವ ಫುಟ್ಬಾಲ್‌ನ ಶಿಖರಕ್ಕೇರಿದ ಕಥೆ