
ನ್ಯೂಜರ್ಸಿ (ಜು.21) ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಪ್ರತಿ ಪಂದ್ಯಕ್ಕೆ ಹಲವು ಸೆಲೆಬ್ರೆಟಿಗಳು ಹಾಜರಾಗಿದ್ದಾರೆ. ಈ ಪೈಕಿ ಮಾಜಿ ನೀಲಿ ಚಿತ್ರ ತಾರೆ ಮಿಯಾ ಖಲೀಫಾ ಹಾಜರಾತಿ ಭಾರಿ ಸದ್ದು ಮಾಡಿದೆ. ಕೆಲ ಪಂದ್ಯಗಳಿಗೆ ಮಿಯಾ ಖಲೀಫಾ ಹಾಜರಾಗಿದ್ದರು. ಸ್ಪೇನ್ ಹಾಗೂ ಅರ್ಜೆಂಟೀನಾ ನಡುವಿನ ಫೈನಲ್ ಪಂದ್ಯಕ್ಕೆ ಮಿಯಾ ಖಲೀಫಾ ಹಾಜರಾಗಿದ್ದರು. ಸ್ಪೇನ್ ತಂಡದ ಜರ್ಸಿ ಧರಿಸಿ ಕ್ರೀಡಾಂಗಣಕ್ಕೆ ಆಗಮಿಸಿದ್ದ ಮಿಯಾ ಖಲೀಫಾ ಆಸೆಯಂತೆ ಸ್ಪೇನ್ ಗೆಲುವಿನ ಸಂಭ್ರಮ ಆಚರಿಸಿತ್ತು.ಸ್ಪೇನ್ ಸಿಡಿಸಿದ ಒಂದು ಗೋಲು ಮಿಯಾ ಖಲಿಫಾಗೆ 15.92 ಕೋಟಿ ರೂಪಾಯಿ ತಂದುಕೊಟ್ಟಿದೆ.
ಮಿಯಾ ಖಲೀಫಾ ಸದ್ಯ ನೀಲಿ ಚಿತ್ರಗಳಿಂದ ದೂರವಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾ ಪರ್ಸನಾಲಿಟಿಯಾಗಿ ಗುರುತಿಸಿಕೊಂಡಿದ್ದಾರೆ. ವೃತ್ತಿಯಿಂದ ದೂರವಿರುವ ಮಿಯಾ ಖಲೀಫಾ ಒಂದು ಗೋಲಿನಿಂದ 15.92 ಕೋಟಿ ರೂಪಾಯಿ ಸಂಪಾದಿಸಿದ್ದು ಹೇಗೆ ಅನ್ನೋ ಪ್ರಶ್ನೆಗಳು ಕಾಡುವುದು ಸಹಜ. ಫಿಫಾ ವಿಶ್ವಕಪ್ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ಮಿಯಾ ಖಲೀಫಾ ಬೆಟ್ ಕಟ್ಟಿದ್ದರು. ದುಬಾರಿ ಮೊತ್ತದ ಬೆಟ್ ಕಟ್ಟಿ ಸ್ಪೇನ್ ಗೆಲುವಿನೊಂದಿಗೆ ಸಂಭ್ರಮಿಸಿದ್ದಾರೆ. ಸ್ಪೇನ್ ವಿಶ್ವಕಪ್ ಗೆಲ್ಲಲಿದೆ ಎಂದು ಬೆಟ್ಟಿಂಗ್ ಕಟ್ಟಿದ್ದ ಮಿಯಾ ಖಲಿಫಾ 15.92 ಕೋಟಿ ರೂಪಾಯಿ ಗೆದ್ದಿದ್ದಾರೆ.
ಫೈನಲ್ ಪಂದ್ಯಕ್ಕೆ ಸ್ಪೇನ್ ಫುಟ್ಬಾಲ್ ಸ್ಟಾರ್ ಲ್ಯಾಮೈನ್ ಯಮಾಲ್ ಜರ್ಸಿ ಧರಿಸಿ ಕ್ರೀಡಾಂಗಣಕ್ಕೆ ಆಗಮಿಸಿದ್ದ ಮಿಯಾ ಖಲೀಫಾ, ಬೆಟ್ಟಿಂಗ್ ಆ್ಯಪ್ ಮೂಲಕ ಹಣ ಹೂಡಿಕೆ ಮಾಡಿದ್ದಾರೆ. 1 ಮಿಲಿಯನ್ ಅಮೆರಿಕನ್ ಡಾಲರ್ ಅಂದರೆ 9.65 ಕೋಟಿ ರೂಪಾಯಿ ಮೊತ್ತವನ್ನು ಸ್ಪೇನ್ ಗೆಲ್ಲಲಿದೆ ಎಂದು ಬೆಟ್ಟಿಂಗ್ ಕಟ್ಟಿದ್ದರು. ಸ್ಪೇನ್ ಗೆಲುವಿನಿಂದ ಮಿಯಾ ಖಲೀಫಾ ಹೂಡಿಕೆ ಮಾಡಿದ 9.62 ಕೋಟಿ ರೂಪಾಯಿ ಒಟ್ಟು 15.92 ಕೋಟಿ ರೂಪಾಯಿ ಆಗಿದೆ. ಒಂದೂವರೆ ಗಂಟೆಯಲ್ಲಿ ಮಿಯಾ ಖಲೀಫಾ 6.27 ಕೋಟಿ ರೂಪಾಯಿ ಲಾಭ ಮಾಡಿಕೊಂಡಿದ್ದಾರೆ.
ಮಿಯಾ ಖಲೀಫಾಗೂ ಸ್ಪೇನ್‌ಗೂ ಯಾವದೇ ಸಂಬಂಧವಿಲ್ಲ. ಆದರೂ ಸ್ಪೇನ್ ಬೆಂಬಲಿಸುತ್ತಿದ್ದೇನೆ, ಸ್ಪೇನ್ ಪರ ಬೆಟ್ಟಿಂಗ್ ಕಟ್ಟಿದ್ದೇನೆ ಎಂದು ಮಿಯಾ ಖಲೀಫಾ ಪಂದ್ಯದ ವೇಳೆ ಹೇಳಿಕೊಂಡಿದ್ದರು. ನಾನು ಸ್ಪೇನ್ ಮೂಲದವಳಲ್ಲ, ಆದರೂ ಇಡೀ ಟೂರ್ನಿಯಲ್ಲಿ ಸ್ಪೇನ್ ಬೆಂಬಲಿಸುತ್ತಿದ್ದೇನೆ ಎಂದಿದ್ದರು. ಆದರೆ ಅಮೆರಿಕ ನನ್ನ ಮೇಲೆ ಈ ಬೆಟ್ಟಿಂಗ್ ಹಣಕ್ಕೆ ದುಬಾರಿ ಮೊತ್ತ ತೆರಿಗೆ ವಿಧಿಸಲಿದೆ. ಬಳಿಕ ನನ್ನ ಮೂಲ ರಾಜ್ಯವಾಗಿರುವ ಲೆಬೆನಾನ್ ಮೇಲೆ ಬಾಂಬ್ ಹಾಕಲಿದೆ ಎಂದು ಮಿಯಾ ಖಲೀಫಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ನಿಗದಿತ ಸಮಯದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಅತ್ಯಂತ ರೋಚಕ ಘಟ್ಟದತ್ತ ಪಂದ್ಯ ಸಾಗಿತ್ತು. ಆದರೆ ಹೆಚ್ಚುವರಿ ಸಮಯದಲ್ಲಿ ಸ್ಪೇನ್ ತಂಡದ ಫೆರಾನ್ ಟೊರೆಸ್ ಗೋಲು ಸಿಡಿಸಿ ಸ್ಪೇನ್ ತಂಡದ ಗೆಲುವಿನಲ್ಲಿ ಪ್ರಮುಖ ರೂವಾರಿಯಾದರು. ಅರ್ಜೆಂಟೀನಾ ತಂಡ ಗೋಲು ಸಿಡಿಸಲು ಸಾಧ್ಯವಾಗಲಿಲ್ಲ. ಪರಿಣಾಮ ಸ್ಪೇನ್ ಗೆಲುವಿನ ದಡ ಸೇರಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.