ವಹಿಸಿದ್ದ ಕರ್ನಾಟಕ ಹಾಲು ಒಕ್ಕೂಟ(ಕೆಎಂಎಫ್) ಮುಂಬರುವ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಲೀಗ್‌ನಲ್ಲೂ ತನ್ನ ಬ್ರ್ಯಾಂಡ್ ಅನ್ನು ಪ್ರಚಾರ ಮಾಡಲು ಮುಂದಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಬೆಂಗಳೂರು: ಟಿ20 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್ ಹಾಗೂ ಐರ್ಲೆಂಡ್ ತಂಡಗಳಿಗೆ ಪ್ರಾಯೋಜಕತ್ವ ವಹಿಸಿದ್ದ ಕರ್ನಾಟಕ ಹಾಲು ಒಕ್ಕೂಟ(ಕೆಎಂಎಫ್) ಮುಂಬರುವ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಲೀಗ್‌ನಲ್ಲೂ ತನ್ನ ಬ್ರ್ಯಾಂಡ್ ಅನ್ನು ಪ್ರಚಾರ ಮಾಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಈ ಮೂಲಕ ದೇಶದ ವಿವಿಧೆಡೆಗೆ ತನ್ನ ಉತ್ಪನ್ನಗಳನ್ನು ಪರಿಚಯಿಸಲು ಮುಂದಾಗಿದೆ.
‘ನಂದಿನಿ’ ಹೆಸರಿನಲ್ಲಿ ತನ್ನ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಕೆಎಂಎಫ್, ಈಗಾಗಲೇ ಲೀಗ್ ಆಯೋಜಕರ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ಗೊತ್ತಾಗಿದೆ. ಟೂರ್ನಿ ವೇಳೆ ಎಲ್‌ಇಡಿ ಬೋರ್ಡ್, ಪ್ರೆಸೆಂಟೇಶನ್, ಡಗ್‌ಔಟ್‌ನಲ್ಲಿ ನಂದಿನಿ ಹೆಸರಿನ ಜೊತೆಗೆ 300 ಸೆಕೆಂಡ್‌ಗಳ ಟಿವಿ ಹಾಗೂ ಒಟಿಟಿ ಜಾಹೀರಾತಿನ ಮೂಲಕವೂ ಬ್ರ್ಯಾಂಡ್ ಪ್ರಚಾರಕ್ಕೆ ಕೆಎಂಎಫ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
undefined
ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದ ನಿತ್ಯ ಸಿವನ್; ಭಾರತದ ಖಾತೆಗೆ 15 ಪದಕ
2024-25ರ ಐಎಸ್‌ಎಲ್ ಸೆ.13ರಿಂದ ಆರಂಭಗೊಳ್ಳಲಿದೆ. ಸುಮಾರು 6 ತಿಂಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ ಒಟ್ಟು 13 ತಂಡಗಳು ಪಾಲ್ಗೊಳ್ಳಲಿವೆ.
ಇಂಟರ್‌ಕಾಂಟಿನೆಂಟಲ್ ಕಪ್ ಫುಟ್ಬಾಲ್: ಇಂದು ಭಾರತ vs ಮಾರಿಷಸ್
ಹೈದರಾಬಾದ್: ಇಂಟರ್‌ಕಾಂಟಿನೆಂಟಲ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಭಾರತ ಪುರುಷರ ತಂಡ ಮಂಗಳವಾರ ಮಾರಿಷಸ್ ವಿರುದ್ದ ಸೆಣದಾಡಲಿದೆ. ಇದು ಭಾರತ ಫುಟ್ಬಾಲ್ ತಂಡದ ಕೋಚ್ ಆಗಿರುವ ಮೊನೊಲೊ ಮಾರ್ಕ್‌ವೆಜ್‌ಗೆ ಮೊದಲ ಪಂದ್ಯ.ಈ ಹಿಂದೆ ಕೋಚ್ ಆಗಿದ್ದ ಇಗೊರ್ ಸ್ಟಿಮಾಕ್‌ರನ್ನು ಭಾರತ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನಲ್ಲೇ ಹೊರಬಿದ್ದ ಬಳಿಕ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಈ ಬಾರಿಯ ಇಂಟರ್‌ಕಾಂಟಿನೆಂಟಲ್ ಕಪ್ ಫುಟ್ಬಾಲ್ ಪಂದ್ಯವು ಸೆಪ್ಟೆಂಬರ್ 03ರಿಂದ 09ರ ವರೆಗೆ ನಡೆಯಲಿದೆ.
ಟೀಂ ಇಂಡಿಯಾ ವಿಶ್ವಕಪ್ ಹೀರೋ ಪತ್ನಿ ಹಠಾತ್ ನಿಧನ..! ನೋವು ಹಂಚಿಕೊಂಡ ಟಿಎಂಸಿ ಸಂಸದ
ಅಥ್ಲೆಟಿಕ್ಸ್: ರಾಜ್ಯದ ಸಿಂಚಲ್‌ಗೆ ಬೆಳ್ಳಿ, ಪ್ರಜ್ಞಾಗೆ ಕಂಚಿನ ಪದಕ
ಬೆಂಗಳೂರು: 63ನೇ ಆವೃತ್ತಿಯ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಕೊನೆ ದಿನವಾದ ಸೋಮವಾರ ಕರ್ನಾಟಕದ ಇಬ್ಬರಿಗೆ ಪದಕ ಲಭಿಸಿವೆ. ಮಹಿಳೆಯರ 400 ಮೀ. ಹರ್ಡಲ್ಸ್‌ನಲ್ಲಿ ರೈಲ್ವೇಸ್ ತಂಡವನ್ನು ಪ್ರತಿನಿಧಿಸುತ್ತಿರುವ ಸಿಂಚಲ್ ಕಾವೇರಮ್ಮ 57.50 ಸೆಕೆಂಡ್‌ಗಳಲ್ಲಿ ಕ್ರಮಿಸಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಕರ್ನಾಟಕವನ್ನು ಪ್ರತಿನಿಧಿಸಿದ ಪ್ರಜ್ಞಾ 57.90 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. ರೈಲ್ವೇಸ್‌ನ ವಿದ್ಯಾ ರಾಮರಾಜ್(56.23 ಸೆಕೆಂಡ್) ಚಿನ್ನ ಗೆದ್ದರು.
ಒಟ್ಟು 4 ದಿನಗಳ ಕಾಲ ನಡೆದ ಕೂಟದಲ್ಲಿ ಪುರುಷರ ವಿಭಾಗದಲ್ಲಿ ಸರ್ವಿಸಸ್ ಹಾಗೂ ಮಹಿಳಾ ವಿಭಾಗದಲ್ಲಿ ರೈಲ್ವೇಸ್ ತಂಡ ಸಮಗ್ರ ಚಾಂಪಿಯನ್ ಎನಿಸಿಕೊಂಡಿತು. ಕೂಟದಲ್ಲಿ ಕರ್ನಾಟಕದ ಅಥ್ಲೀಟ್‌ಗಳು 2 ಚಿನ್ನ, 2 ಬೆಳ್ಳಿ ಹಾಗೂ 3 ಕಂಚು ಸೇರಿ ಒಟ್ಟು 7 ಪದಕಗಳನ್ನು ತಮ್ಮದಾಗಿಸಿಕೊಂಡರು.