ಬೆಂಗಳೂರು FC‌ಗೆ ಮಾಡು ಇಲ್ಲವೆ ಮಡಿ ಪಂದ್ಯ, ಗೋವಾಗೆ ಸೋಲುಣಿಸಲು ರೆಡಿ!

By Suvarna News  |  First Published Feb 20, 2021, 6:55 PM IST

ಪ್ಲೇ ಆಫ್ ಸ್ಥಾನಕ್ಕೇರಲು ಬೆಂಗಳೂರು ತಂಡಕ್ಕೆ ಕೊನೆಯ ಅವಕಾಶವೊಂದು ಎದುರಿಗಿದೆ. ಆದರೆ ಈ ಅವಕಾಶ ಬಳಿಸಿಕೊಂಡರೂ ಅದೃಷ್ಠ ಕೈಡಿಯಬೇಕು. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.


ಗೋವಾ(ಫೆ.20):   ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಹೆಚ್ಚಿನ ತಂಡಗಳಿಗೆ ಉಳಿದಿರುವುದು ಎರಡು ಪಂದ್ಯಗಳು ಮಾತ್ರ. ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿರುವ ಬೆಂಗಳೂರು ಎಫ್ ಸಿ, ಸೂಪರ್ ಸಂಡೆಯ ಮೊದಲ ಪಂದ್ಯದಲ್ಲಿ ಎಫ್ ಸಿ ಗೋವಾ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಕೇವಲ ಜಯ ಗಳಿಸಿದರೆ ಸಾಲದು ಸ್ಪರ್ಧೆಯಲ್ಲಿರುವ ಇತರ ತಂಡಗಳ ಅಂಕವೂ ಕುಸಿದರೆ ಮಾತ್ರ ಬೆಂಗಳೂರಿನ ಸುಗಮವಾಗಬಹುದು.

ಐಎಸ್‌ಎಲ್‌: ಮುಂಬೈ ವಿರುದ್ದ ಬಿಎಫ್‌ಸಿಗೆ ಭರ್ಜರಿ ಗೆಲುವು, ಸೆಮೀಸ್ ಕನಸು ಜೀವಂತ.

Latest Videos

undefined

ಬೆಂಗಳೂರು ತಂಡದ ಕೋಚ್ ನೌಷಾದ್ ಮೂಸಾ ತಮ್ಮ ತಂಡ ಗೋವಾದ ವಿರುದ್ಧದ ಪಂದ್ಯದ ವಿಷಯದಲ್ಲಿ ಯಾವುದೇ ಒತ್ತಡಕ್ಕೆ ಸಿಲುಕಿಲ್ಲ ಎಂದಿದ್ದಾರೆ. ನಾವು ಪ್ಲೇ ಆಫ್ ಹಂತ ತಲುಪುವುದರ ಬಗ್ಗೆ ಯಾವುದೇ ರೀತಿಯ ಒತ್ತಡಕ್ಕೆ ಸಿಲುಕಿಲ್ಲ. ಜಯ ಗಳಿಸಿದರೆ ನಾವು ಪ್ಲೇ ಆಫ್ ಹತ್ತಿರಕ್ಕೆ ತಲಪುವೆವು. ಕೇವಲ ಜಯ ಗಳಿಸಬೇಕೆಂಬ ಹತಾಶೆಯು ಕೆಲವೊಮ್ಮೆ ಯೋಜನೆಗಳನ್ನು ಹಾಳು ಮಾಡುತ್ತದೆ. ನಾವು ತಾಳ್ಮೆಯಿಂದ ನಮ್ಮ ಆಟದ ಕಡೆಗೆ ಗಮನಹರಿಸಲಿದ್ದೇವೆ ಎಂದು ಮೂಸಾ ಹೇಳಿದರು.

ಬಿಎಫ್ ಸಿ ತಂಡ ನಾಳೆ ಎದುರಿಸಲಿರುವ ತಂಡ ಲೀಗ್ ನಲ್ಲೇ ಉತ್ತಮ ದಾಳಿ ಮಾಡಬಲ್ಲ ತಂಡ. ಗೋವಾ ಗಳಿಸಿರುವ 26 ಗೋಲುಗಳಲ್ಲಿ  16 ಗೋಲುಗಳು ದ್ವಿತಿಯಾರ್ಧದಲ್ಲಿ ದಾಖಲಾಗಿರುವುದು, ಕೊನೆಯ 15 ನಿಮಿಷಗಳಲ್ಲಿ ಗೋವಾ 10 ಗೋಲುಗಳನ್ನು ಗಳಿಸಿದೆ. “ಅವರು ಚೆಂಡನ್ನು ಉತ್ತಮ ರೀತಿಯಲ್ಲಿ ನಿಯಂತ್ರಿಸಬಲ್ಲರು. ಅದು ನಮಗೆ ಸುಲಭವಾದುದಲ್ಲ. ಅವರು ಕೊನೆಯ ಕ್ಷಣದಲ್ಲಿ ಗೋಲು ಗಳಿಸುತ್ತಿದ್ದಾರೆ, ಈ ಬಗ್ಗೆ ನಾವು ಎಚ್ಚರವಹಿಸಬೇಕು,” ಎಂದು ಮೂಸಾ ಹೇಳಿದರು.

ಒಡಿಶಾ ವಿರುದ್ಧದ ಜಯದ ಮೂಲಕ ಲಯ ಕಂಡುಕೊಂಡ ಗೋವಾ ಅದೇ ರೀತಿಯಲ್ಲಿ ಮುಂದುವರಿಯುವ ಗುರಿ ಹೊಂದಿದೆ. ಇದಕ್ಕೂ ಮುನ್ನ ಗೋವಾ ಸತತ ಆರು ಪಂದ್ಯಗಳಲ್ಲಿ ಡ್ರಾ ಕಂಡಿತ್ತು. ಇನ್ನೂ ಎರಡು ಪಂದ್ಯಗಳು ಬಾಕಿ ಇರುವಾಗ, ಗೋವಾ ತಂಡ ನಾರ್ಥ್ ಈಸ್ಟ್ ಮತ್ತು ಹೈದರಾಬಾದ್ ಜತೆ ಸಮಾನ ರೀತಿಯಲ್ಲಿ ಅಂಕ ಹಂಚಿಕೊಂಡಿದೆ.

ತಂಡದ ಚಿಂತೆಯ ವಿಷಯವೆಂದರೆ ಕಳೆದ ಏಳು ಪಂದ್ಯಗಳಲ್ಲಿ ತಂಡ ಕ್ಲೀನ್ ಶೀಟ್ ಸಾಧನೆ ಮಾಡುವಲ್ಲಿ ವಿಫಲವಾಗಿದೆ. ಜಯಕ್ಕಿಂತ ಬೇರೆ ಯಾವುದೇ ಫಲಿತಾಂಶ ತಂಡದ ಪ್ಲೇ ಆಫ್ ಆಸೆಯನ್ನು ಕಸಿದುಕೊಳ್ಳಲಿದೆ. ಎರಡೂ ತಂಡಗಳು ಜಯವನ್ನೇ ಗುರಿಯಾಗಿಸಿಕೊಂಡಿರುವುದರಿಂದ ಗೋವಾದ ಕೋಚ್ ಜುವಾನ್ ಫೆರಾಂಡೋ ಹಲವಾರು ಅಂಶಗಳ ಕಡೆಗೆ ಗಮನ ಹರಿಸಿದ್ದಾರೆ,

“ಅವರಿಗೂ ಮತ್ತು ನಮಗೂ ನಾಳೆಯ ಪಂದ್ಯ ಕಠಿಣವೆನಿಸಿದೆ. ಮೂರು ಅಂಕಗಳನ್ನು ಗಳಿಸುವುದು ಪ್ರಮುಖವಾಗಿದೆ. ಮೂರು ಅಂಕಗಳಿಂದ ನಮಗೆ ಪ್ಲೇ ಆಫ್ ತಲುಪಲು ಸಾಕಷ್ಟು ಅವಕಾಶ ಸಿಗುತ್ತದೆ. ಬೆಂಗಳೂರಿಗೆ ಮುಂದಿನ  ಎರಡು ಪಂದ್ಯಗಳಲ್ಲಿ ಆರು ಅಂಕ ಬೇಕಾಗಿದೆ. ಸಮಾನ ಮನಸ್ಕ ತಂಡಗಳಾದ ಕಾರಣ ನಾಳೆಯ ಪಂದ್ಯ ಉತ್ತಮ ಪಂದ್ಯವಾಗಲಿದೆ. ಇದೊಂದು ಭಾವನಾತ್ಮಕ ಪಂದ್ಯವಾಗಲಿದೆ,” ಎಂದರು.

click me!