ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಒಂದು ವರ್ಷಕ್ಕೆ ಸಾವಿರಾರು ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಸ್ಪೇನ್ ಪತ್ರಿಕೆ ಬಹಿರಂಗ ಪಡಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬಾರ್ಸಿಲೋನಾ(ಫೆ.01): ವಿಶ್ವದ ಶ್ರೀಮಂತ ಫುಟ್ಬಾಲಿಗ ಲಿಯೋನೆಲ್ ಮೆಸ್ಸಿ ವಿಶ್ವ ವಿಖ್ಯಾತ ಕ್ಲಬ್ ಬಾರ್ಸಿಲೋನಾ ಎಫ್‌ಸಿಯಿಂದ ವಾರ್ಷಿಕ 138 ಮಿಲಿಯನ್ ಯುರೋಸ್ (ಅಂದಾಜು 1221 ಕೋಟಿ ರುಪಾಯಿ) ಸಂಭಾವನೆ ಪಡೆಯುತ್ತಾರೆ ಎಂದು ಸ್ಪೇನ್‌ನ ‘ಎಲ್ ಮುಂಡೋ’ ಪತ್ರಿಕೆ ವರದಿ ಮಾಡಿದೆ.
ಲಿಯೋನೆಲ್ ಮೆಸ್ಸಿ 2017ರಲ್ಲಿ ಬಾರ್ಸಿಲೋನಾ ಜೊತೆ ಸಹಿ ಹಾಕಿದ ಒಪ್ಪಂದದ ಪ್ರಕಾರ 4 ವರ್ಷಗಳಿಗೆ ಕ್ಲಬ್ ಅವರಿಗೆ 555 ಮಿಲಿಯನ್ ಯುರೋಸ್ (ಅಂದಾಜು 4911 ಕೋಟಿ ರು.) ಪಾವತಿ ಮಾಡಲು ಒಪ್ಪಿಕೊಂಡಿತ್ತು. ಕ್ರೀಡಾ ಇತಿಹಾಸದಲ್ಲೇ ಇದು ಅತ್ಯಂತ ದುಬಾರಿ ವೇತನ ಒಪ್ಪಂದ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
undefined
ಅರ್ಜೆಂಟೀನಾ ನೋಟಿನ ಮೇಲೆ ಮರಡೋನಾ ಚಿತ್ರ?
ಮೆಸ್ಸಿ ಹಾಗೂ ಕ್ಲಬ್ ನಡುವಿನ ಒಪ್ಪಂದ ಈ ವರ್ಷ ಜುಲೈನಲ್ಲಿ ಮುಕ್ತಾಯಗೊಳ್ಳಲಿದೆ. ಅವರಿಗಾಗಲೇ ಕ್ಲಬ್‌ನಿಂದ 510 ಮಿಲಿಯನ್ ಯುರೋಸ್ ಹಣವನ್ನು ಸಂಭಾವನೆ ರೂಪದಲ್ಲಿ ಪಡೆದಿದ್ದು, ಇದರಲ್ಲಿ ಅರ್ಧದಷ್ಟು ಹಣವನ್ನು ತೆರಿಗೆ ರೂಪದಲ್ಲಿ ಸ್ಪೇನ್ ಸರ್ಕಾರಕ್ಕೆ ಪಾವತಿಸಿದ್ದಾರೆ. ಮೆಸ್ಸಿ ಸೇರಿದಂತೆ ಇತರ ಆಟಗಾರರ ದುಬಾರಿ ಸಂಭಾವನೆಯಿಂದಾಗೇ ಬಾರ್ಸಿಲೋನಾ ಕ್ಲಬ್ ಸಾವಿರಾರು ಕೋಟಿ ಸಾಲದಲ್ಲಿ ಮುಳುಗಿದೆ ಎಂದು ಪತ್ರಿಕೆ ವರದಿ ಮಾಡಿದೆ.