ಇದೇ ಮೊದಲ ಬಾರಿಗೆ ಪ್ಲೇ ಆಫ್ ಹಂತಕ್ಕೇರಲು ವಿಫಲವಾದ ಬೆಂಗಳೂರು FC!

By Suvarna News  |  First Published Feb 21, 2021, 7:30 PM IST

ISL ಫುಟ್ಬಾಲ್ ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ. ಬೆಂಗಳೂರು ಎಫ್‌ಸಿ ತಂಡ ಈ ಬಾರಿಯ ಟೂರ್ನಿಯಲ್ಲಿ ಕೊಂಚ ಎಡವಿದೆ. ಗೋವಾ ವಿರುದ್ಧ ಮುಗ್ಗರಿಸುವ ಮೂಲಕ ಬೆಂಗಳೂರು ತಂಡ ಈ ಬಾರಿಯ ಐಎಸ್‌ಎಲ್ ಟೂರ್ನಿಯಿಂದ ಹೊರಬಿದ್ದಿದೆ.


ಗೋವಾ(ಫೆ.21):  ಬೆಂಗಳೂರು ಎಫ್ ಸಿ ವಿರುದ್ಧ 2-1 ಗೋಲಿನಿಂದ ಜಯ ಗಳಿಸಿದ ಎಫ್ ಸಿ ಗೋವಾ ತಂಡಕ್ಕೆ ಇನ್ನು ಪ್ಲೇ ಆಫ್ ಹಂತ ತಲುಪಲು ಕೇವಲ ಒಂದೇ ಮೆಟ್ಟಿಲು. ಆದರೆ ಗೋವಾ ವಿರುದ್ಧ ಮುಗ್ಗರಿಸಿದ ಬೆಂಗಳೂರು ಎಫ್‌ಸಿ ಪ್ಲೇ ಆಫ್ ಆಸೆ ನುಚ್ಚು ನೂರಾಗಿದೆ.  ಇದೇ ಮೊದಲು ಬಾರಿಗೆ ಬೆಂಗಳೂರು ತಂಡ ಹೀರೋ ಇಂಡಿಯನ್ ಸೂಪರ್ ಲೀಗ್‌ನಲ್ಲಿ  ಪ್ಲೇ ಆಫ್ ತಲಪುವಲ್ಲಿ ವಿಫಲವಾಯಿತು.

ಐಎಸ್‌ಎಲ್‌: 8 ಪಂದ್ಯಗಳ ಬಳಿಕ ಕೊನೆಗೂ ಗೆದ್ದ ಬಿಎಫ್‌ಸಿ..!

Latest Videos

undefined

ಗೋವಾ ಮುನ್ನಡೆ: 45 ನಿಮಿಷಗಳ ಪ್ರಥಮಾರ್ಧದಲ್ಲಿ ಗೋವಾ ತಂಡ 2-1 ಗೋಲುಗಳಿಂದ ಮೇಲುಗೈ ಸಾಧಿಸಿದೆ. ಐಗೊರ್ ಆಂಗುಲೊ (20ನೇ ನಿಮಿಷ) ಹಾಗೂ ರೀಡಿಮ್ ತ್ಲಾಂಗ್ (23ನೇ ನಿಮಿಷ) ಗಳಿಸಿದ ಗೋಲುಗಳು ಗೋವಾ ತಂಡಕ್ಕೆ ಮುನ್ನಡೆ ತಂದುಕೊಟ್ಟಿತಲ್ಲದೆ ಮುಂದಿನ 45 ನಿಮಿಷಗಳ ಆಟವನ್ನು ಆತ್ಮವಿಶ್ವಾಸದಲ್ಲಿ ಆಡಲು ಅನುವುಮಾಡಿಕೊಟ್ಟಿತು. 

 

Make that two in a row from 👏 pic.twitter.com/GhSLq4Hf7l

— Indian Super League (@IndSuperLeague)

33ನೇ ನಿಮಿಷದಲ್ಲಿ ಸುರೇಶ್ ಸಿಂಗ್ ಗಳಿಸಿದ ಗೋಲಿನಿಂದ ಬೆಂಗಳೂರು ಎಫ್ ಸಿ ಉತ್ತಮ ರೀತಿಯಲ್ಲಿ ತಿರುಗೇಟು ನೀಡಿತು. ಆದರೆ ಸಿಕ್ಕ ಅವಕಾಶಗಳನ್ನು ಕೈಚೆಲ್ಲಿದ ಕಾರಣ ಬೆಂಗಳೂರು ಸಮಬಲ ಸಾಧಿಸುವಲ್ಲಿ ವಿಫಲವಾಯಿತು. ಮೊದಲನೇ ಗೋಲನ್ನು ಆಂಗುಲೋ ಸುಲಭವಾಗಿ ಗಳಿಸಿದರು. ಇದಕ್ಕೆ ಮುಖ್ಯ ಕಾರಣ ಎರಿಕ್ ಪಾರ್ಥಲು ಮಾಡಿದ ಪ್ರಮಾದ. ಪೆನಾಲ್ಟಿ ವಲಯದಲ್ಲಿ ಬಂದ ಚೆಂಡನ್ನು ನೇರವಾಗಿ ಪಾಸ್ ಮಾಡಲುವಲ್ಲಿ ವಿಫಲರಾದ ಎರಿಕ್ ಪಾರ್ಥಲು ಅವರಿಂದ ಗ್ಲಾನ್ ಮಾರ್ಟಿನ್ ನಿಂತ್ರಿಸಿ ಆಂಗುಲೋ ಅವರಿಗೆ ನೀಡಿದರೆ ಯಾವುದೇ ನಿಯಂತ್ರಣ ಇಲ್ಲದ ಕಾರಣ ಆಂಗುಲೋ ಸುಲಭವಾಗಿ ಚೆಂಡನ್ನು ಗೋಲ್ ಬಾಕ್ಸ್ ಗೆ ಗುರಿ ಇಟ್ಟರು. ಗುರ್ ಪ್ರೀತ್ ಸಿಂಗ್ ಸಂಧೂಗೆ ಯಾವುದೇ ರೀತಿಯಲ್ಲಿ ಚೆಂಡನ್ನು ತಡೆಯಲಾಗಲಿಲ್ಲ.

click me!