ಆಸ್ಟ್ರೇಲಿಯಾದಲ್ಲಿ ವಿರಾಟ್‌ಗೆ, ಭಾರತದಲ್ಲಿ ಕೊಹ್ಲಿ ಮಾಲೀಕತ್ವದ ಗೋವಾಗೆ ಹಿನ್ನಡೆ!

By Suvarna News  |  First Published Dec 19, 2020, 10:15 PM IST

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ಇತ್ತ ಐಎಸ್‌ಎಲ್ ಟೂರ್ನಿಯಲ್ಲಿ ಕೊಹ್ಲಿ ಸಹ ಮಾಲೀಕತ್ವದ ಗೋವಾ ತಂಡಕ್ಕೆ ಸೋಲು ಎದುರಾಗಿದೆ. 
 


ಗೋವಾ(ಡಿ.19):  ನಾಯಕ ರೆಫಾಯಲ್ ಕ್ರೆವೆಲ್ಲಿರೋ (5ನೇ ನಿಮಿಷ) ಹಾಗೂ ಬದಲಿ ಆಟಗಾರ ರಹೀಂ ಆಲಿ (53ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಬಲಿಷ್ಠ ಎಫ್ ಸಿ ಗೋವಾ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಚೆನ್ನೈಯಿನ್ ಎಫ್ ಸಿ ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯಲ್ಲಿ ಜಯದ ಲಯ ಕಂಡುಕೊಂಡಿದೆ. ಗೋವಾ ಪರ ಜಾರ್ಜ್ ಮೆಂಡೋನ್ಸಾ (9ನೇ ನಿಮಿಷ) ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು. ಗೋವಾ ತಂಡ ಹಿಂದಿನ ಋತುವಿನ ಸೋಲಿನ ಸೇಡನ್ನು ತೀರಿಸಿಕೊಳ್ಳುವಲ್ಲಿ ವಿಫಲವಾಯಿತು.

 ಐಎಸ್‌ಎಲ್: ಬಿಎಫ್‌ಸಿಗೆ ಸತತ 2ನೇ ಜಯ

Latest Videos

undefined

ಸಮಬಲದ ಪ್ರಥಮಾರ್ಧ: ಚೆನ್ನೈಯಿನ್ ಎಫ್ ಸಿ ಮತ್ತು ಎಫ್ ಸಿ ಗೋವಾ ನಡುವಿನ ಪಂದ್ಯ ನಿರೀಕ್ಷೆಯಂತೆ ಕುತೂಹಲದ ಕ್ಷಣಗಳಿಗೆ ಸಾಕ್ಷಿಯಾಯಿತು. ಪಂದ್ಯ ಆರಂಭಗೊಂಡ ಹತ್ತು ನಿಮಿಷಗಳಲ್ಲೇ ಇತ್ತಂಡಗಳು ತಲಾ ಒಂದೊಂದು ಗೋಲು ಗಳಿಸಿ 1-1ರಲ್ಲಿ ಸಮಬಲ ಸಾಧಿಸಿದವು. ರಫಾಯೆಲ್ ಕ್ರಿವೆಲ್ಲಿರೋ ಪಂದ್ಯ ಅರಂಭಗೊಂಡ 5ನೇ ನಿಮಿಷದಲ್ಲಿ  ಗೋಲು ಗಳಿಸಿ ತಂಡಕ್ಕೆ ನಿರೀಕ್ಷೆಯಂತೆ ಮು್ನಡೆ ಕಲ್ಪಿಸಿದರು. ಕಾರ್ನರ್ ನಲ್ಲಿ ಸ್ಥಿತರಾಗಿದ್ದ ಕ್ರೆವೆಲ್ಲಿರೋ ಅವರಿಗೆ ಉತ್ತಮ ಪಾಸ್ ದೊರೆತು ಅದ್ಭುತವಾದ ಗೋಲು ಗಳಿಸಿ ಎದುರಾಳಿ ತಂಡದಲ್ಲಿ ಅಚ್ಚರಿ ಮೂಡಿಸಿದರು. ಹಿಂದಿನ ಋತುವಿನ ಎರಡನೇ ಸೆಮಿಫೈನಲ್ ನಲ್ಲಿ ಚೆನ್ನೈಯಿನ್ ತಂಡ ಗೋವಾಕ್ಕೆ ಸೋಲುಣಿಸಿ ಫೈನಲ್ ಗೆ ಲಗ್ಗೆ ಇಟ್ಟಿತ್ತು. ಇದರ ಸೇಡು ತೀರಿಸಿಕೊಳ್ಳಬೇಕೆಂಬ ತವಕದಲ್ಲಿದ್ದ ಗೋವಾಕ್ಕೆ ಆರಂಭದಲ್ಲೇ ಆಘಾತ ಅನುಭವಿಸುವಂತಾಯಿತು. 

ISL 7: ಜೆಮ್ಶೆಡ್‌ಪುರ ಎಫ್‌ಸಿಗೆ 1-0 ಗೆಲುವು..

ಈ ರೀತಿಯ ಹೋರಾಟ ನಿತ್ಯವೂ ಕಾಣಸಿಗುವುದು ಕಷ್ಟ ಸಾಧ್ಯ. ಇದು ಚೆನ್ನೈಯಿನ್  ದಾಖಲಿಸಿದ ಅದ್ಭುತ ಗೋಲಾಗಿತ್ತು. ಆದರೆ ಹೋರಾಟವನ್ನು ಮುಂದುವರಿಸಿದ ಗೋವಾಕ್ಕೆ 9ನೇ ನಿಮಿಷದಲ್ಲಿ ಯಶಸ್ಸು ಸಿಕ್ಕಿತು. ಜಾರ್ಜ್ ಮೆಡೊನ್ಸಾ 9ನೇ ನಿಮಿಷದಲ್ಲಿ ಗಳಿಸಿದ ಗೋಲು ಚೆನ್ನೈಯಿನ್ ತಂಡದ ಮುನ್ನಡೆಯ ಸಂಭ್ರಮವನ್ನು ಹೆಚ್ಚು ಕಾಲ  ಉಳಿಯದಂತೆ ಮಾಡಿತು. ಇದು ಫುಟ್ಬಾಲ್ ಪಂದ್ಯವೊಂದರ ಇತ್ತಮ ಆರಂಭ ಎಂದರೆ ತಪ್ಪಾಗಲಾರದು. ಇತ್ತಂಡಗಳು ತಮ್ಮ ಅವಕಾಶಕ್ಕಾಗಿ ಹೋರಾಟದ ಆಟವನ್ನು ಮುಂದುವರಿಸಿದವು. 26ನೇ ನಿಮಿಷದಲ್ಲಿ ಲಾಲ್ರಿಯಾನ್ಜುವಾಲಾ ಚಾಂಗ್ಟಡಗೆ 2-1ರ ಮುನ್ನಡೆ ಕಾಣುವ ಅವಕಾಶವಿದ್ದಿತ್ತು. ಆದರೆ ಗೋಲ್ ಬಾಕ್ಸ್ ಗೆ ಗುರಿ ಇಟ್ಟು ತುಳಿದ ಚೆಂಡು ಗಾಳಿಯಲ್ಲಿ ಹಾದು ಕ್ರಾಸ್ ಬಾರ್ ಗೆ ತಗಲಿತು.

ಮುನ್ನಡೆದ ಚೆನ್ನೈಯಿನ್: 53ನೇ ನಿಮಿದಲ್ಲಿ ಚೆನ್ನೈಯಿನ್ ತಂಡಕ್ಕೆ ಮತ್ತೊಂದು ಯಶಸ್ಸು. ಈ ಬಾರಿಯ ಗೋಲಿನಲ್ಲೂ ಕ್ರೆವೆಲ್ಲೆರೋ ಪಾತ್ರ ಪ್ರಮುಖವಾಗಿತ್ತು. ಕ್ರೆವೆಲ್ಲಿರೋ ನೀಡಿದ ಪಾಸ್ ಗೆ ರಹೀಂ ಅಲಿ ಉತ್ತಮ ರೀತಿಯಲ್ಲಿ ಸ್ಪಂದಿಸಿ 53ನೇ ನಿಮಿಷದಲ್ಲಿ ತಂಡದ ಪರ ಎರಡನೇ ಗೋಲು ಗಳಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಇದರೊಂದಿಗೆ ಚೆನ್ನೈಯಿನ್ ತಂಡ ಜಯಕ್ಕೆ ಅಗತ್ಯ ಇರುವ 2-1 ಮುನ್ನಡೆ ಕಾಯ್ದಕೊಂಡಿತು.

ಬದಲಿ ಆಟಗಾರ ರಹೀಂ ಅಲಿ ಪಂದ್ಯದ ಗತಿಯನ್ನೇ ಬದಲಾಯಿಸಿರುವುದು ವಿಶೇಷ. ನಿರಂತರ ಶ್ರಮ ಯಶಸ್ಸು ತಂದು ಕೊಡುತ್ತದೆ ಎಂಬುದಕ್ಕೆ ರಫಾಯಲ್ ಅವರ ಹೋರಾಟ ಉದಾಹರಣೆಯಾಗಿತ್ತು. ದ್ವಿತಿಯಾರ್ಧದಲ್ಲಿ ಚೆನ್ನೈಯಿನ್ ಮೇಲುಗೈ ಸಾಧಿಸಿತು. ಗೋವಾ ಸೇಡು ತೀರಿಸಿಕೊಳ್ಳಲು ಮತ್ತೆ ತೀವ್ರ ಹಯಪೋಟಿ ನೀಡಿತು, ಪಾಸೊಂದು ರಫಾಯೆಲ್ ಕ್ರೆವೆಲ್ಲಿರೋ ಅವರ ನಿಯಂತ್ರಣಕ್ಕೆ ಸಿಕ್ಕಿತು. ಅವರು ಚೆಂಡನ್ನು ಮುಂದುವರಿಸಿಕೊಂಡು ಮುಂದೆ ಸಾಗಿದರು, ನೇರವಾಗಿ ಗೋಲ್ ಬಾಕ್ಸ್ ಗೆ ತುಳಿದರೆ ಅದರಿಂದ ಯಶಸ್ಸು ಸಿಗುವುದು ಸಂಶಯವೆಂದು ತಿಳಿದು ಚೆಂಡನ್ನು ರಹೀಂ ಇರುವಲ್ಲಿಗೆ ತಳ್ಳಿದರು. ನಾಯಕನ ಜಾಣ್ಮೆಯ ಆಟ ಇಲ್ಲಿ ಕೆಲಸ ಮಾಡಿತು. ರಹೀಂ ಅವರನ್ನು ತಡೆಯಲು ಯಾರೂ ಇಲ್ಲದ ಕಾರಣ ಸುಲಭವಾಗಿ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ಕಲ್ಪಿಸಿದರು.

click me!