
ಗೋವಾ(ಡಿ.15): ಅರಿಡಾನೆ ಸ್ಯಾಂಟನಾ (56, 56ನೇ ನಿಮಿಷ) ಒಂದು ನಿಮಿಷದ ಅಂತರದಲ್ಲಿ ಗಳಿಸಿದ ಎರಡು ಗೋಲು ಹಾಗೂ ಹಲಿಚರಣ್ ನಾರ್ಜರಿ (68ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಹೈದರಾಬಾದ್ ಎಫ್ ಸಿ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಎಸ್ ಸಿ ನಾರ್ಥ್ ಈಸ್ಟ್ ವಿರುದ್ಧ 3-2 ಗೋಲುಗಳ ಅಂತರದಲ್ಲಿ ಜಯ ಗಳಿಸಿದೆ. ಈಸ್ಟ್ ಬೆಂಗಾಲ್ ಪರ ಜಾಕ್ವೆಸ್ ಮಘೋಮಾ (26 ಮತ್ತು 81ನೇ ನಿಮಿಷ) ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು.
ಐಎಸ್‌ಎಲ್: ಮುಂಬೈ ಸಿಟಿ-ಜೆಮ್ಶಡ್‌ಪುರ ಪಂದ್ಯ ಡ್ರಾ.
ಮೊದಲ ಗೋಲಿನ ಸಂಭ್ರಮ: ಸತತ ಸೋಲಿನಿಂದ ಕಂಗೆಟ್ಟಿರುವ ಎಸ್ ಸಿ ಈಸ್ಟ್ ಬೆಂಗಾಲ್ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಕೊನೆಗೂ ಗೋಲಿನ ಖಾತೆ ತೆರೆದಿದೆ. ಹೈದರಾಬಾದ್ ವಿರುದ್ಧದ ಪಂದ್ಯದ 26ನೇ ನಿಮಿಷದಲ್ಲಿ ಜಾಕ್ವೆಸ್ ಮಘೋಮಾ ಗಳಿಸಿದ ಗೋಲಿನಿಂದ ಈಸ್ಟ್ ಬೆಂಗಾಲ್ ಪ್ರಥಮಾರ್ಧದಲ್ಲಿ 1-0 ಗೋಲಿನಿಂದ ಮೇಲುಗೈ ಸಾಧಿಸಿದೆ.ಮಟ್ಟಿ ಸ್ಟೈನ್ಮನ್ ನೀಡಿದ ಪಾಸ್ ಮೂಲಕ ದಾಖಲಾದ ಈ ಗೋಲನ್ನು ಸುಬ್ರತಾ ಪಾಲ್ ಅವರಿಗೆ ತಡೆಯಲಾಗಲಿಲ್ಲ.
ಹ್ಯಾಟ್ರಿಕ್ ಸೋಲಿನ ನಂತರ ಈಸ್ಟ್ ಬೆಂಗಾಲ್ ಜೆಮ್ಷೆಡ್ಪುರ ಎಫ್ ಸಿ ವಿರುದ್ಧ ಗೋಲಿಲ್ಲದ ಡ್ರಾ ಕಂಡು ಅಂಕ ಹಂಚಿಕೊಟ್ಟಿತ್ತು. ಹೀಗಾಗಿ ಹೈದರಾಬಾದ್ ವಿರುದ್ಧ ಗೆಲಲ್ಲೇಬೇಕು ಅನ್ನೋ ಛಲದಲ್ಲಿ ಈಸ್ಟ್ ಬೆಂಗಾಲ್ ಕಣಕ್ಕಿಳಿದಿತ್ತು. ಆದರೆ ಗೆಲುವು ಮಾತ್ರ ಸಿಗಲೇ ಇಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.