2027ರ ಎಎಫ್‌ಸಿ ಫುಟ್ಬಾಲ್‌: ಆತಿಥ್ಯಕ್ಕೆ ಭಾರತದಿಂದ ಬಿಡ್

By Kannadaprabha NewsFirst Published Dec 17, 2020, 4:36 PM IST
Highlights

2027ರಲ್ಲಿ ನಡೆಯಲಿರುವ ಎಎಫ್‌ಸಿ ಏಷ್ಯನ್‌ ಕಪ್‌ ಫುಟ್ಬಾಲ್‌ ಟೂರ್ನಿಗೆ ಆತಿಥ್ಯ ವಹಿಸಲು ಭಾರತ ಬಿಡ್‌ ಸಲ್ಲಿಸಿದೆ. ಈ ಕುರಿತಾದ ಒಂದು ರಿಪೋರ್ಟ್‌ ಇಲ್ಲಿದೆ ನೋಡಿ

ನವದೆಹಲಿ: 2027ರ ಎಎಫ್‌ಸಿ ಏಷ್ಯನ್‌ ಕಪ್‌ ಫುಟ್ಬಾಲ್‌ ಟೂರ್ನಿಗೆ ಆತಿಥ್ಯ ವಹಿಸಲು ಭಾರತ ಅಧಿಕೃತವಾಗಿ ಬಿಡ್‌ ಸಲ್ಲಿಸಲು ನಿರ್ಧರಿಸಿದೆ ಎಂದು ಬುಧವಾರ ಅಖಿಲ ಭಾರತ ಫುಟ್ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌)ನ ಅಧ್ಯಕ್ಷ ಪ್ರಫುಲ್‌ ಪಟೇಲ್‌ ತಿಳಿಸಿದ್ದಾರೆ. 

ಗುರುವಾರ ಇಲ್ಲವೇ ಶುಕ್ರವಾರ ಭಾರತ ಬಿಡ್‌ ಸಲ್ಲಿಕೆ ಮಾಡಲಿದೆ. 24 ತಂಡಗಳು ಪ್ರಶಸ್ತಿಗಾಗಿ ಸೆಣಸಲಿರುವ ಟೂರ್ನಿಯ ಆತಿಥ್ಯ ಹಕ್ಕನ್ನು ಪಡೆಯುವ ಭರವಸೆ ಇದೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ತಿಳಿಸಿದ್ದಾರೆ. ಭಾರತಕ್ಕೆ ಸೌದಿ ಅರೇಬಿಯಾ, ಇರಾನ್‌, ಕತಾರ್‌ನಿಂದ ಸ್ಪರ್ಧೆ ಎದುರಾಗಲಿದೆ. ಮುಂದಿನ ವರ್ಷ ಜೂನ್‌ನಲ್ಲಿ ಆತಿಥ್ಯ ವಹಿಸುವ ರಾಷ್ಟ್ರ ಯಾವುದು ಎಂದು ಪ್ರಕಟಗೊಳ್ಳಲಿದೆ.

ಐಎಸ್‌ಎಲ್‌: ಬಿಎಫ್‌ಸಿಗೆ ಮತ್ತೊಂದು ಜಯದ ನಿರೀಕ್ಷೆ

ಕತಾರ್‌ನಲ್ಲಿ 2030ರ ಏಷ್ಯನ್‌ ಗೇಮ್ಸ್‌

ಮಸ್ಕಟ್‌: 2030ರ ಏಷ್ಯನ್‌ ಗೇಮ್ಸ್‌ ದೋಹಾರ ಕತಾರ್‌ನಲ್ಲಿ ನಡೆಯಲಿದೆ. ಬುಧವಾರ ಕ್ರೀಡಾಕೂಟದ ಆತಿಥ್ಯ ಹಕ್ಕನ್ನು ಪಡೆದ ರಾಷ್ಟ್ರವನ್ನು ಏಷ್ಯಾ ಒಲಿಂಪಿಕ್‌ ಸಂಸ್ಥೆ ತನ್ನ ಸಾಮಾನ್ಯ ಸಭೆ ಬಳಿಕ ಪ್ರಕಟಿಸಿತು. ಇದೇ ವೇಳೆ 2034ರ ಏಷ್ಯನ್‌ ಗೇಮ್ಸ್‌ ಅನ್ನು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ನಡೆಸಲು ನಿರ್ಧರಿಸಲಾಗಿದೆ.

click me!