ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಗೋವಾ ತಂಡ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ. ಮುಂಬೈ ಸಿಟಿ ವಿರುದ್ಧದ ಹೋರಾಟದಲ್ಲಿ 5 ಗೋಲು ಸಿಡಿಸಿ ಅಬ್ಬರಿಸಿದ ಗೋವಾ, ಮುಂಬೈ ತಂಡಕ್ಕೆ ಶಾಕ್ ನೀಡಿದೆ. ಪಂದ್ಯದ ಹೈಲೈಟ್ಸ್ ಇಲ್ಲಿದೆ.
ಗೋವಾ(ಫೆ.12): ತವರಿನಲ್ಲಿ ಅಬ್ಬರಿಸಿದ ಗೋವಾ FC ಗೋಲುಗಳ ಸುರಿಮಳೆಗೈದಿದೆ. ಮುಂಬೈ ಸಿಟಿ ವಿರುದ್ದ ನಡೆದ ಪಂದ್ಯದಲ್ಲಿ ಗೋವಾ 5-2 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು. ಈ ಮೂಲಕ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ತನ್ನ ಅಗ್ರ ಸ್ಥಾನವನ್ನು ಭದ್ರಪಡಿಸಿಕೊಂಡಿತು.
ISL 2020: ಪಂದ್ಯ ಡ್ರಾ, ಕೇರಳ ಪ್ಲೇ ಆಫ್ ಕನಸು ಭಗ್ನ!
undefined
ಮುಂಬೈ ಸಿಟಿ ತಂಡ ಅತ್ಯಂತ ಆತ್ಮವಿಶ್ವಾಸದಲ್ಲೇ ಆರಂಭ ಕಂಡಿತ್ತು. ಪಂದ್ಯ ಆರಂಭಗೊಂಡ 18ನೇ ನಿಮಿಷದಲ್ಲಿ ರೌಲಿನ್ ಬೋರ್ಗಸ್ ಗಳಿಸಿದ ಗೋಲಿನಿಂದ ಮುಂಬೈ ಮೇಲುಗೈ ಸಾಧಿಸಿತು. ಆದರೆ ನಂತರದ ಕತೆಯೇ ಬೇರಾಯಿತು. ಮೂರು ಗೋಲುಗಳನ್ನು ಗಳಿಸಿದ ಗೋವಾ 3-1 ಅಂತರದಲ್ಲಿ ಪ್ರಥಮಾರ್ಧವನ್ನು ತನ್ನದಾಗಿಸಿಕೊಂಡಿತು.
ಫೆರಾನ್ ಕೊರೊಮಿನಾಸ್ (20ನೇ ನಿಮಿಷ) ಗಳಿಸಿದ ಗೋಲು ಪಂದ್ಯವನ್ನು ಸಮಬಲಗೊಳಿಸಿತು, ನಂತರ ಹ್ಯಗೋ ಬೌಮಾಸ್ (38ನೇ ನಿಮಿಷ) ತಂಡಕ್ಕೆ 2-1ರ ಮುನ್ನಡೆ ಕಲ್ಪಿಸಿದರು. ಆಕ್ರಮಣಕಾರಿ ಆಟ ಮುಂದುವರಿಸಿದ ಗೋವಾಕ್ಕೆ ಮತ್ತೊಂದು ನಿಮಿಷದಲ್ಲೇ ಮೂರನೇ ಗೋಲು. ಜಾಕಿಚಾಂದ್ ಸಿಂಗ್ 39ನೇ ನಿಮಿಷದಲ್ಲಿ ಗಳಿಸಿದ ಗೋಲು ತಂಡಕ್ಕೆ 3-1 ರ ಮುನ್ನಡೆ ತಂದುಕೊಟ್ಟಿತು.
ISL 2020: ಒಟ್ಟು ಗೋಲು 6, ಆದರೂ ನಾರ್ಥ್ ಈಸ್ಟ್‌ಗೆ ಗೆಲುವಿಲ್ಲ, ಜೆಮ್ಶೆಡ್ಪುರಕ್ಕೆ ಸೋಲಿಲ್ಲ!
ಮುಂಬೈ ಸಿಟಿ ಪರ ರೌಲಿನ್ ಬೋರ್ಗಸ್ (18ನೇ ನಿಮಿಷ) ಹಾಗೂ ಬಿಪಿನ್ ಸಿಂಗ್ (57ನೇ ನಿಮಿಷ) ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು. ಮುಂಬೈಯ ಈ ಸೋಲಿನ ಮೂಲಕ ಒಡಿಶಾ ತಂಡದ ಪ್ಲೇ ಆಫ್ ಆವಕಾಶ ಜೀವಂತವಾಗಿ ಉಳಿಯಿತು.