ISL 2020: ಒಟ್ಟು ಗೋಲು 6, ಆದರೂ ನಾರ್ಥ್ ಈಸ್ಟ್‌ಗೆ ಗೆಲುವಿಲ್ಲ, ಜೆಮ್ಶೆಡ್ಪುರಕ್ಕೆ ಸೋಲಿಲ್ಲ!

Suvarna News   | Asianet News
Published : Feb 10, 2020, 10:31 PM IST
ISL 2020: ಒಟ್ಟು ಗೋಲು 6, ಆದರೂ ನಾರ್ಥ್ ಈಸ್ಟ್‌ಗೆ ಗೆಲುವಿಲ್ಲ, ಜೆಮ್ಶೆಡ್ಪುರಕ್ಕೆ ಸೋಲಿಲ್ಲ!

ಸಾರಾಂಶ

ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ನಾರ್ಥ್ ಈಸ್ಟ್ ಹಾಗೂ ಜೆಮ್‌ಶೆಡ್‌ಪುರ ತಂಡದ ಹೋರಾಟ ತೀವ್ರ ಕುತೂಹಲ ಕೆರಳಿಸಿತ್ತು.  ರೋಚಕ ಪಂದ್ಯದಲ್ಲಿ ಒಟ್ಟು 6 ಗೋಲುಗಳು ದಾಖಲಾಯಿತು. ಆದರೆ ಗೆಲುವು ಮಾತ್ರ ಯಾರಿಗೂ ದಕ್ಕಲಿಲ್ಲ.   

ಗುವಾಹಟಿ(ಫೆ.10): ಆತಿಥೇಯ ನಾರ್ಥ್ ಈಸ್ಟ್ ತಂಡ 3 ಗೋಲು ಸಿಡಿಸಿದರೆ, ಇತ್ತ ಎದುರಾಳಿ ಜೆಮ್‌ಶೆಡ್‌ಫುರ ತಂಡ 3 ಗೋಲು ಸಿಡಿಸಿತು. ಹೀಗಾಗಿ ಪಂದ್ಯ 3-3 ಅಂತರದಿಂದ ಡ್ರಾಗೊಂಡಿತು. ಉಭಯ ತಂಡಗಳ ಪ್ಲೇ ಆಫ್ ಕನಸು ಈಗಾಗಲೇ ಭಗ್ನಗೊಂಡಿದೆ. ಕೇವಲ ಸೋಲಿನ ಅಂತರ ಕಡಿಮೆ ಮಾಡಿಕೊಳ್ಳಲು ಹೋರಾಟ ನಡೆಸಿತ್ತು. ಆದರೆ ಅದೂ ಕೂಡ ಕೈಗೂಡಲಿಲ್ಲ. 

ಇದನ್ನೂ ಓದಿ: ISL 2020: ಪಂದ್ಯ ಡ್ರಾ, ಕೇರಳ ಪ್ಲೇ ಆಫ್‌ ಕನಸು ಭಗ್ನ!

ಇತ್ತಂಡಗಳು ಸೋಲು ಗೆಲುವಿನ ಲೆಕ್ಕಾಚಾರವನ್ನು ಮರೆತು ತಮ್ಮ ನೈಜ ಸಾಮರ್ಥ್ಯವನ್ನು ತೋರಲು ಮುಂದಾಯಿತು. ಪರಿಣಾಮ ನಾರ್ಥ್ ಈಸ್ಟ್ ತಂಡ ಆರಂಭದಲ್ಲೇ ಗೋಲು ಗಳಿಸಿದರೆ ಪ್ರವಾಸಿ ಜೆಮ್ಷೆಡ್ಪುರ ತಂಡ ಪ್ರಥಮಾರ್ಧದ ಕೊನೆಯಲ್ಲಿ ಗೋಲು ಗಳಿಸಿ ಸಮಬಲ ಸಾಧಿಸಿತು. ಪಂದ್ಯ ಆರಂಭಗೊಂಡ 5ನೇ ನಿಮಿಷದಲ್ಲಿ ಫೆಡ್ರಿಕೊ ಗಲ್ಲೆಗೊ ಗಳಿಸಿದ ಗೊಲು ಆತಿಥೇಯ ತಂಡಕ್ಕೆ ಮುನ್ನಡೆ ತಂದುಕೊಟ್ಟಿತು. 

ಇದಕ್ಕೂ ಮುನ್ನ ರಫೀಕ್ ಅಲಿ ಉತ್ತಮ ರೀತಿಯಲ್ಲಿ ತಡೆದ ಕಾರಣ ಮತ್ತೊಂದು ಗೋಲಿನ ಅವಕಾಶ ತಪ್ಪಿತ್ತು. ಬಿಕಾಶ್ ಜೈರುಗೆ ಸಮಬಲಗೊಳಿಸುವ ಅವಕಾಶ ಸಿಕ್ಕರೂ ಸದುಪಯೋಗಪಡಿಸಿಕೊಳ್ಳಲಿಲ್ಲ. ಪ್ರಥಮಾರ್ಧ ಮುಗಿಯುವುದಕ್ಕೆ ಕೆಲ ಕ್ಷಣಗಳು ಬಾಕಿ ಇರುವಾಗ ಡೇವಿಡ್ ಗ್ರಾಂಡೆ 45ನೇ ನಿಮಿಷದಲ್ಲಿ ಗಳಿಸಿದ ಗೋಲು ಪಂದ್ಯವನ್ನು 1-1ರಲ್ಲಿ ಸಮಬಲಗೊಳಿಸಿತು. 

ದ್ವಿತಿಯಾರ್ಧದಲ್ಲಿ ಉಭಯ ತಂಡ ತಲಾ 2 ಗೋಲು ಸಿಡಿಸಿತು. ಉಭಯ ತಂಡಗಳು ತಲಾ 3 ಗೋಲು ಸಿಡಿಸಿದರೂ ಗೆಲುವು ಸಿಗಲಿಲ್ಲ. ಆತಿಥೇಯ ನಾರ್ಥ್ ಈಸ್ಟ್ ಯುನೈಟೆಡ್ ಪರ ಫೆಡ್ರಿಕೊ ಗೆಲ್ಲೆಗೊ (5ನೇ ನಿಮಿಷ), ರೀಡಿಮ್ ತಾಂಗ್ (77ನೇ ನಿಮಿಷ) ಮತ್ತು ಜೋಸ್ ಡೇವಿಡ್ ಲ್ಯುಡೋ (88ನೇ ನಿಮಿಷ) ಗೋಲು ಸಿಡಿಸಿದರು. ಇತ್ತ ಜೆಮ್ಷೆಡ್ಪುರ ಎಫ್ ಸಿ ಪರ ಡೇವಿಡ್ ಗ್ರಾಂಡೆ (45ನೇ ನಿಮಿಷ), ನೋಯ್ ಅಕೋಸ್ಟಾ ರಿವೆರಾ (82ನೇ ನಿಮಿಷ) ಹಾಗೂ ಎಮರ್ಸನಗ ಗೊಮೆಸ್ ಮೆಮೊ (85ನೇ ನಿಮಿಷ) ಗೋಲು ಸಿಡಿಸಿದರು.  ಹೀಗಾಗಿ ಪಂದ್ಯ 3-3 ಅಂತರದಲ್ಲಿ ಡ್ರಾಗೊಂಡಿತು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2026ರ FIFA ವಿಶ್ವಕಪ್ ವೇಳಾಪಟ್ಟಿ ಪ್ರಕಟ! ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಕ್ರಿಸ್ಟಿಯಾನೋ ರೊನಾಲ್ಡ್ ಭಾರತ ಭೇಟಿ ರದ್ದು: ತೆರೆಮರೆಯ ಹಿಂದಿನ ನಿಜವಾದ ಕಾರಣವೇನು?